ದಂತೇವಾಡ (ಛತ್ತೀಸ್ಗಢ): ಮುಖ್ಯಮಂತ್ರಿ ಭೂಪೇಶ್ ಬಘೇಲ್ ದಂತೇವಾಡಕ್ಕೆ ಭೇಟಿ ನೀಡಿದ್ದು, ಅಲ್ಲಿ ತಾಯಿ ದಂತೇಶ್ವರಿಯ ದರ್ಶನ ಪಡೆದು, ಹನ್ನೊಂದು ಕಿಲೋ ಮೀಟರ್ ಉದ್ದದ ಕೆಂಪು ಸ್ಟೋಲ್(ದುಪ್ಪಟ್ಟಾ)ಅನ್ನು ದೇವಿಗೆ ಅರ್ಪಿಸಿದ್ದಾರೆ. ದಂತೇವಾಡದ ಡೆನೆಕ್ಸ್ ಎಂಬ ಜವಳಿ ಕಾರ್ಖಾನೆಯ ಮಹಿಳೆಯರು ಈ ಸ್ಟೋಲ್ನ್ನು ತಯಾರಿಸಿದ್ದಾರೆ. ಈ ಮೂಲಕ ಡೆನೆಕ್ಸ್ ವಿಶ್ವ ದಾಖಲೆ ನಿರ್ಮಿಸಿದೆ.
ಕೆಂಪು ಬಣ್ಣದಲ್ಲಿ ಆಕರ್ಷಕವಾಗಿ ವಿನ್ಯಾಸಗೊಳಿಸಲಾದ ಸ್ಟೋಲ್ಅನ್ನು ನೀಡುವುದರಿಂದ ಭಕ್ತರಲ್ಲಿ ಧನಾತ್ಮಕ ಶಕ್ತಿ ಮತ್ತು ದೈವಿಕ ಕಂಪನ ಹೆಚ್ಚಾಗುತ್ತದೆ ಎಂಬುದು ನಂಬಿಕೆ ಇದೆ. ಡೆನೆಕ್ಸ್ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಸುಮಾರು 300 ಮಹಿಳೆಯರು 7 ದಿನಗಳಲ್ಲಿ ಇದನ್ನು ತಯಾರಿಸಿದ್ದಾರೆ. ಜಿಲ್ಲಾಡಳಿತ ಒಂದೂವರೆ ವರ್ಷದ ಹಿಂದೆ ಈ ಘಟಕ ಆರಂಭಿಸಿತ್ತು. ಮುಖ್ಯಮಂತ್ರಿಗಳು ಇದನ್ನು ದೇವಿಗೆ ನೀಡಲು ಆಗಮಿಸಿದಾಗ, ಇಡೀ ದಂತೇವಾಡ ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಮೊನ್ನೆ ಭಾನುವಾರ ದಂತೇವಾಡದಲ್ಲಿ 11 ಸಾವಿರ ಮೀಟರ್ ದೂರದ ಸ್ಟೋಲ್ನ ಯಾತ್ರೆ ಕೈಗೊಂಡು ವಿಶ್ವ ದಾಖಲೆ ನಿರ್ಮಿಸಲಾಗಿತ್ತು. 11 ಕಿ.ಮೀ ಉದ್ದದ ಈ ದುಪ್ಪಟ್ಟಾ ನೋಡಲು ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ಮುಖ್ಯಮಂತ್ರಿ ಭೂಪೇಶ್ ಬಘೇಲ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ದಂತೇವಾಡ ಜಿಲ್ಲೆಯ ನಿರುದ್ಯೋಗಿ ಮಹಿಳೆಯರಿಗೆ ಉದ್ಯೋಗ ಒದಗಿಸುವ ಉದ್ದೇಶದಿಂದ 31 ಜನವರಿ 2021 ರಂದು ಈ ಫ್ಯಾಕ್ಟರಿ ಘಟಕವನ್ನು ಮುಖ್ಯಮಂತ್ರಿ ಬಘೇಲ್ ಅವರು ಪ್ರಾರಂಭಿಸಿದ್ದರು.
ಇದನ್ನೂ ಓದಿ:ಹಿಂದೂಗಳ ಮೇಲೆ ಯಾಕೆ ಇಷ್ಟೊಂದು ಕೋಪ?.. ಕಾಂಗ್ರೆಸ್ ವಿರುದ್ಧ ಹಾರ್ದಿಕ್ ಟ್ವೀಟ್