ನವದೆಹಲಿ : ಕೇಂದ್ರ ಸರ್ಕಾರ ತಮ್ಮ ಹಕ್ಕಿಗಾಗಿ ಪ್ರತಿಭಟಿಸುತ್ತಿರುವ ರೈತರನ್ನು ಶತ್ರುಗಳಂತೆ ನೋಡುತ್ತಿದೆ ಎಂದು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಕಿಡಿಕಾರಿದ್ದಾರೆ. ಆರ್ಥಿಕ ಹಿಂಜರಿತದ ವರ್ಷದಲ್ಲಿಯೂ ಶೇ.3.9ರಷ್ಟು ಬೆಳವಣಿಗೆ ಸಾಧಿಸಿದರುವ ಕೃಷಿ ಕ್ಷೇತ್ರ ಕುರಿತು ಪ್ರತಿಭಟಿಸುತ್ತಿವವರನ್ನು ಶತ್ರುಗಳಂತೆ ನೋಡುವುದು ಸರಿಯಲ್ಲ ಎಂದಿದ್ದಾರೆ.
ಪ್ರಧಾನಿ ಮೋದಿ ಕೇರಳದಿಂದ ಅಸ್ಸೋಂವರೆಗೂ ಪ್ರವಾಸ ಕೈಗೊಳ್ಳಲು ಸಮಯವಿದೆ. ಆದರೆ, 20 ಕಿ.ಮೀ ದೂರದಲ್ಲಿ ಪ್ರತಿಭಟಿಸುತ್ತಿರುವ ರೈತರನ್ನು ಭೇಟಿಯಾಗುತ್ತಿಲ್ಲ ಎಂದಿದ್ದಾರೆ. ಶೇ.6ರಷ್ಟು ರೈತರು ಮಾತ್ರ ಬೆಂಬಲ ಬೆಲೆಯ ಫಲಾನುಭವಿಗಾಗಿದ್ದಾರೆ. ಮೊದಲು ಅವರು ರೈತರ ಆದಾಯ ದ್ವಿಗುಣ ಮಾಡುವ ಭರವಸೆ ನೀಡಿದ್ದರು ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
-
मंदी वाले साल में 3.9% की वृद्धि के लिए कृषि क्षेत्र को पुरस्कृत करना, प्रदर्शनकारी किसानों के साथ ऐसा व्यवहार करना है जैसे कि वे राज्य के दुश्मन हों।
— P. Chidambaram (@PChidambaram_IN) February 27, 2021 " class="align-text-top noRightClick twitterSection" data="
प्रधानमंत्री केरल से असम तक जाते हैं, लेकिन दिल्ली की सीमा पर किसानों से मिलने के लिए 20 कि. मी. की यात्रा करने का समय नहीं है।
">मंदी वाले साल में 3.9% की वृद्धि के लिए कृषि क्षेत्र को पुरस्कृत करना, प्रदर्शनकारी किसानों के साथ ऐसा व्यवहार करना है जैसे कि वे राज्य के दुश्मन हों।
— P. Chidambaram (@PChidambaram_IN) February 27, 2021
प्रधानमंत्री केरल से असम तक जाते हैं, लेकिन दिल्ली की सीमा पर किसानों से मिलने के लिए 20 कि. मी. की यात्रा करने का समय नहीं है।मंदी वाले साल में 3.9% की वृद्धि के लिए कृषि क्षेत्र को पुरस्कृत करना, प्रदर्शनकारी किसानों के साथ ऐसा व्यवहार करना है जैसे कि वे राज्य के दुश्मन हों।
— P. Chidambaram (@PChidambaram_IN) February 27, 2021
प्रधानमंत्री केरल से असम तक जाते हैं, लेकिन दिल्ली की सीमा पर किसानों से मिलने के लिए 20 कि. मी. की यात्रा करने का समय नहीं है।
ಇದಕ್ಕೂ ಮೊದಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ಕೇಂದ್ರದ ಮೂರು ಕೃಷಿ ಮಸೂದೆಗಳ ಕುರಿತು ವಾಗ್ದಾಳಿ ನಡೆಸಿದ್ದರು. ಕೇಂದ್ರ ಸರ್ಕಾರ ಕೃಷಿ ವ್ಯಾಪಾರಕ್ಕೆ ಅಂತ್ಯ ಹಾಡಲು ಈ ಕಾನೂನು ಜಾರಿ ಮಾಡುತ್ತಿದೆ. ಪ್ರಧಾನಿ ಮೋದಿ ಸ್ನೇಹಿತರ ಕೈಗೆ ಈ ವ್ಯಾಪಾರ ಹಸ್ತಾಂತರಿಸಲಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು, ಈ ಕುರಿತು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಪ್ರತಿಕ್ರಿಯಿಸಿ, ರೈತರೊಂದಿಗೆ ಮೂರು ಕೃಷಿ ಕಾನೂನುಗಳ ಕುರಿತ ಚರ್ಚೆಗೆ ಈಗಲೂ ಸರ್ಕಾರದ ಬಾಗಿಲು ತೆರದೇ ಇದೆ ಎಂದಿದ್ದರು.
ಇದನ್ನೂ ಓದಿ: ರಾಜಸ್ಥಾನದ ಎರಡು ಜಿಲ್ಲೆಗಳಲ್ಲಿಂದು ಕಿಸಾನ್ ಮಹಾ ಪಂಚಾಯತ್ ನಡೆಸಲಿರುವ ಕಾಂಗ್ರೆಸ್