ETV Bharat / bharat

ನಗ್ನ ಸ್ಥಿತಿಯಲ್ಲಿ ಮಹಿಳೆ ಶವ ಮೇಕೆಗಳ ಕೋಣೆಯಲ್ಲಿ ಪತ್ತೆ.. ಆಕೆಯ ಖಾಸಗಿ ಭಾಗಕ್ಕೆ ಏಟು ಮಾಡಿ ವಿಕೃತಿ - ಮಧ್ಯಪ್ರದೇಶದಲ್ಲಿ ನಗ್ನ ಸ್ಥಿತಿಯಲ್ಲಿ ಮಹಿಳೆ ಶವ ಮೇಕೆ ಕೋಣೆಯಲ್ಲಿ ಪತ್ತೆ

ಮಹಿಳೆಯೊಬ್ಬಳ ಶವ ಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಖಾಸಗಿ ಭಾಗಕ್ಕೆ ಗಂಭೀರವಾಗಿ ಗಾಯವಾಗಿರುವುದು ಬೆಳಕಿಗೆ ಬಂದಿದೆ. ಈ ಅಮಾನುಷ ಘಟನೆ ಮಧ್ಯಪ್ರದೇಶದ ಚಿಂದ್ವಾರಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

Chhindwara Body woman found naked  woman found goat room in Madhya Pradesh  putting wood in genitals came fore woman  ಮಧ್ಯಪ್ರದೇಶದಲ್ಲಿ ನಗ್ನ ಸ್ಥಿತಿಯಲ್ಲಿ ಮಹಿಳೆ ಶವ ಮೇಕೆ ಕೋಣೆಯಲ್ಲಿ ಪತ್ತೆ  ಮಧ್ಯಪ್ರದೇಶ ಅಪರಾಧ ಸುದ್ದಿ
ನಗ್ನ ಸ್ಥಿತಿಯಲ್ಲಿ ಮಹಿಳೆ ಶವ ಮೇಕೆ ಕೋಣೆಯಲ್ಲಿ ಪತ್ತೆ
author img

By

Published : May 13, 2022, 2:38 PM IST

ಚಿಂದ್ವಾರಾ : ಮೇಕೆಗಳ ಕೋಣೆಯೊಂದರಲ್ಲಿ ಮಹಿಳೆಯ ಶವ ಬೆತ್ತಲೆ ರೂಪದಲ್ಲಿ ಪತ್ತೆಯಾಗಿದೆ. ಮಹಿಳೆಯ ಖಾಸಗಿ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಆಕೆಯ ಗುಪ್ತಾಂಗಕ್ಕೆ ಕಟ್ಟಿಗೆ ತುಂಡು ಇಟ್ಟಿರುವ ವಿಚಾರ ಬಯಲಿಗೆ ಬಂದಿದೆ. ಈ ಅಮಾನುಷ ಘಟನೆ ನಡೆದಿದ್ದು ಉಮ್ರೆತ್ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ.

ಮಹಿಳೆ ಎರಡು - ಮೂರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು. ಆಕೆಯ ಕುಟುಂಬಸ್ಥರು ಕೂಡ ಆಕೆಗೆ ಚಿಕಿತ್ಸೆ ನೀಡಿದ್ದರು. ಬುಧವಾರ ಮಧ್ಯಾಹ್ನ ಊಟ ಮುಗಿಸಿ ಮಹಿಳೆ ಮಲಗಿದ್ದಳು, ಸಂಜೆ ಮೇಕೆಯ ಕೋಣೆಯಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಬೆತ್ತಲೆಯಾಗಿ ಬಿದ್ದಿರುವುದನ್ನು ಸಂಬಂಧಿಕರು ನೋಡಿದ್ದಾರೆ. ಇದೇ ವೇಳೆ ಮನೆಯೊಳಗೆ ಮೃತ ಮಹಿಳೆಯ ಪತಿ ಕುಡಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಓದಿ: ಬಲು ವಿಚಿತ್ರ : ಬಟ್ಟೆ ಬಿಚ್ಚಿ ಬೆತ್ತಲಾಗಿ ಅಂಗಡಿಯೊಳಗೆ ನುಗ್ಗಿದ ಕಳ್ಳ ₹2 ಲಕ್ಷ ದೋಚಿ ಪರಾರಿಯಾದ!

ಮಹಿಳೆಯ ತಲೆ ಹಾಗೂ ಕತ್ತಿನ ಭಾಗದಲ್ಲೂ ಗಾಯದ ಗುರುತುಗಳು ಪತ್ತೆಯಾಗಿವೆ. ಕೂಡಲೇ ಮಹಿಳೆಯ ಸಂಬಂಧಿಕರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್​ ಅಧಿಕಾರಿಗಳ ಸ್ಥಳಕ್ಕೆ ದೌಡಾಯಿಸಿ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಮೃತ ಮಹಿಳೆಯ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.

ಮರಣೋತ್ತರ ಪರೀಕ್ಷೆಯ ನಂತರ ಮಹಿಳೆಯ ಮೃತ ದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಇಬ್ಬರು ವೈದ್ಯರ ತಂಡ ಮಹಿಳೆಯ ಮರಣೋತ್ತರ ಪರೀಕ್ಷೆ ನಡೆಸಿದ್ದು, ಮಹಿಳೆಯ ಖಾಸಗಿ ಭಾಗಗಳಲ್ಲಿ ಕಟ್ಟಿಗೆ ಇಟ್ಟಿರುವುದು ತಿಳಿದು ಬಂದಿದೆ. ಮಹಿಳೆ ಮೃತದೇಹ ಮನೆಯಲ್ಲಿ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆ ಮಾಡಲಾಗಿದೆ ಎಂದು ಎಸ್‌ಡಿಒಪಿ ಅನಿಲ್ ಶುಕ್ಲಾ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.