ಸಾರಂಗಗಢ-ಬಿಲಾಯ್ಗಢ: ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದ ಬಾಲಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆಯೊಂದು ನಡೆದಿರುವುದು ವರದಿಯಾಗಿದೆ. ಛತ್ತೀಸಗಢದ ಸಾರಂಗಗಢ - ಭಿಲಾಯ್ಗಢ ಜಿಲ್ಲೆಯ ಪ್ರೌಢಶಾಲೆಯೊಂದರಲ್ಲಿ ಕಲಿಯುತ್ತಿದ್ದ 10ನೇ ತರಗತಿ ಬಾಲಕನೊಬ್ಬ ಮನೆಯ ಕೋಣೆಯಲ್ಲಿ ಗುರುವಾರ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಬ್ಬರು ಶಿಕ್ಷಕರು ತನಗೆ ಕಿರುಕುಳ ನೀಡಿರುವುದಾಗಿ ಡೆತ್ ನೋಟ್ ಬರೆದಿಟ್ಟು ಬಾಲಕ ಸಾವಿಗೀಡಾಗಿದ್ದಾನೆ.
ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆಯ ಬಗ್ಗೆ ಎಸ್‌ಐ ಗಿರೀಶ್‌ಕುಮಾರ್ ಸಿಂಗ್ ಮಾತನಾಡಿ, ಗುರುವಾರ, ಸಾಲೋನಿಕಲಾ ಗ್ರಾಮದ 10 ನೇ ತರಗತಿಯ 15 ವರ್ಷದ ವಿದ್ಯಾರ್ಥಿ ಶಾಲೆಯಿಂದ ಮನೆಗೆ ಬಂದು ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳದಲ್ಲಿ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ. ಶಾಲೆಯ ಇಬ್ಬರು ಶಿಕ್ಷಕರಿಂದ ತನಗೆ ಕಿರುಕುಳ ನೀಡಲಾಗಿದೆ ಎಂದು ಬರೆದಿದ್ದಾನೆ ಎಂದು ಹೇಳಿದರು.
ಆರೋಪಿ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಯ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಮೃತನ ಸಹೋದರ ಹಿಮಾಲಯ ಕೇವತ್ ಮಾತನಾಡಿ, ನನ್ನ ಸಹೋದರ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಜೀವನ ಅಂತ್ಯಗೊಳಿಸಿದ್ದಾನೆ. ಶಾಲೆಯಲ್ಲಿ ಅವನ ಮತ್ತು ಶಿಕ್ಷಕರ ನಡುವೆ ಕೆಲ ಸಮಸ್ಯೆ ಇದ್ದುದರಿಂದ ಆತ ಈ ಕಠಿಣ ನಿರ್ಧಾರ ಕೈಗೊಂಡಿದ್ದಾನೆ. ಆತ ಆ ಶಿಕ್ಷಕರ ಹೆಸರುಗಳನ್ನು ಬರೆದಿದ್ದಾನೆ ಎಂದು ತಿಳಿಸಿದರು.
ಇದನ್ನೂ ಓದಿ: ವೇಶ್ಯೆ ಎಂದು ವೈರಲ್ ಮಾಡುವುದಾಗಿ ಲೋನ್ ಆ್ಯಪ್ ಬೆದರಿಕೆ: ಯುವತಿ ಆತ್ಮಹತ್ಯೆ ಯತ್ನ