ETV Bharat / bharat

ಕಾರ್ ಟೈರ್‌ ಸ್ಪೋಟಗೊಂಡು ಅಪಘಾತ: ಪ್ರಾಣಾಪಾಯದಿಂದ ಪಾರಾದ ಛತ್ತೀಸ್​ಗಢ ಸಚಿವ

ಛತ್ತೀಸ್​ಗಢದ ಆರೋಗ್ಯ ಸಚಿವ ಟಿ.ಎಸ್.ಸಿಂಗ್​ದೇವ್ ತೆರಳುತ್ತಿದ್ದ ಕಾರ್ ಚಾಲಕನ ನಿಯಂತ್ರಣ ಡಿವೈಡರ್​ಗೆ ಡಿಕ್ಕಿ ಹೊಡೆದಿತ್ತು.

chhattisgarh-minister-ts-singhdev-car-collided-with-divider
ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್​ ಮೇಲೇರಿದ ಕಾರಿನ ಟೈರ್​ಗಳು ಸ್ಫೋಟ: ಸಚಿವರು ಪಾರು
author img

By

Published : Feb 3, 2023, 8:33 PM IST

Updated : Feb 3, 2023, 10:38 PM IST

ಬಿಲಾಸ್ಪುರ್ (ಛತ್ತೀಸ್​ಗಢ): ಛತ್ತೀಸ್​ಗಢ ಕಾಂಗ್ರೆಸ್​ನ​ ಹಿರಿಯ ನಾಯಕ, ಆರೋಗ್ಯ ಸಚಿವ ಟಿ.ಎಸ್.ಸಿಂಗ್​ದೇವ್ ಅವರು ಪ್ರಯಾಣಿಸುತ್ತಿದ್ದ ಕಾರ್ ಇಂದು ಅಪಘಾತಕ್ಕೀಡಾಗಿದೆ. ರಸ್ತೆ ಡಿವೈಡರ್​ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತು. ಸಚಿವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸುರ್ಗುಜಾ ಕ್ಷೇತ್ರದ ಶಾಸಕರೂ ಆಗಿರುವ ಸಿಂಗ್​ದೇವ್​ ಶುಕ್ರವಾರ ರಾಯ್ಪುರದಿಂದ ಅಂಬಿಕಾಪುರಕ್ಕೆ ತೆರಳಿದ್ದರು. ಮಧ್ಯಾಹ್ನ 12.30ರ ಸುಮಾರಿಗೆ ಬೆಂಗಾವಲು ಪಡೆ ಬಿಲಾಸ್‌ಪುರ ಸಮೀಪದ ನಂಘಾಟ್‌ಗೆ ತಲುಪಿತ್ತು. ಆಗ ರಸ್ತೆಯ ಮಧ್ಯೆ ಇದ್ದಕ್ಕಿದ್ದಂತೆ ಬೈಕ್ ಸವಾರನೊಬ್ಬ ಬೆಂಗಾವಲು ಪಡೆ ಎದುರು ಬಂದಿದ್ದಾನೆ. ಬೈಕ್ ಸವಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಸಿಂಗ್‌ದೇವ್ ಅವರಿದ್ದ ಕಾರ್ ಚಾಲಕ ಪ್ರಯತ್ನಿಸಿದ್ದಾರೆ. ಆದರೆ, ಕಾರ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿ ಅದರ ಮೇಲೇರಿದೆ ಎಂದು ತಿಳಿದು ಬಂದಿದೆ.

ಎರಡು ಟೈರ್​ಗಳು ಸ್ಫೋಟ: ಕಾರ್ ಡಿವೈಡರ್ ಮೇಲೇರುತ್ತಿದ್ದಂತೆ ಒಂದು ಬದಿಯ ಎರಡೂ ಟೈರ್​ಗಳು ಸ್ಫೋಟಗೊಂಡಿವೆ. ಸಿಂಗ್​ದೇವ್​ ತಮ್ಮ ಬೆಂಗಾವಲು ಪಡೆಯ ಮತ್ತೊಂದು ಕಾರ್‌ನಲ್ಲಿ ಅಂಬಿಕಾಪುರಕ್ಕೆ ತೆರಳಿದ್ದಾರೆ. ಘಟನೆಯಲ್ಲಿ ಬೈಕ್ ಸವಾರ ಕೂಡ ಸುರಕ್ಷಿತವಾಗಿದ್ದಾನೆ ಎಂದು ವರದಿಯಾಗಿದೆ.

ಅಪಘಾತದ ಮಾಹಿತಿ ಪಡೆದ ಮುಂಗೇಲಿ ಮತ್ತು ಬಿಲಾಸ್‌ಪುರ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು, ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ, ಪರಿಶೀಲನೆ ನಡೆಸಿದ್ದಾರೆ. ಸಚಿವರಿಗೆ ಯಾವುದೇ ಗಾಯವಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಮತ್ತೊಂದೆಡೆ, ಸಚಿವರು ತಾವು ಸುರಕ್ಷಿತವಾಗಿರುವುದಾಗಿ ತಿಳಿಸಿದ್ದು, ಜನತೆಗೆ ಧನ್ಯವಾದ ಹೇಳಿದ್ದಾರೆ.

ಟಿ.ಎಸ್.ಸಿಂಗ್‌ದೇವ್ ಅವರು ಸಿಎಂ ಭುಪೇಶ್​ ಬಘೇಲ್ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರಾಗಿದ್ದಾರೆ. ಛತ್ತೀಸ್‌ಗಢ ಕಾಂಗ್ರೆಸ್‌ನಲ್ಲಿ ಪ್ರಮುಖರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆ ತಯಾರಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಆಗ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿದ್ದ ಸಿಂಗ್​ದೇವ್,​ ಗಾಂಧಿ ಕುಟುಂಬಕ್ಕೂ ಆಪ್ತರು.

ಇದನ್ನೂ ಓದಿ: ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಸಿಗಲಿಲ್ಲ​: ತಂದೆಯನ್ನು ಹೆಗಲ ಮೇಲೆ ಹೊತ್ತು ಶಾಸಕರ ಮನೆಗೆ ಬಂದ ಮಗಳು!

Last Updated : Feb 3, 2023, 10:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.