ETV Bharat / bharat

ರಸ್ತೆಯಲ್ಲಿ ಸಿಕ್ಕ 45 ಲಕ್ಷ ಹಣದ ಬ್ಯಾಗ್‌ ಠಾಣೆಗೆ ತಂದೊಪ್ಪಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್ ಕಾನ್ಸ್‌ಟೇಬಲ್! - police personnel brought back the money

ರಸ್ತೆಯಲ್ಲಿ ಬಿದ್ದಿದ್ದ 45 ಲಕ್ಷ ರೂಪಾಯಿವುಳ್ಳ ಬ್ಯಾಗ್ ಅನ್ನು ಟ್ರಾಫಿಕ್​ ಕಾನ್​ಸ್ಟೇಬಲ್​ವೊಬ್ಬರು ಅಷ್ಟೇ ಜತನದಿಂದ ತಂದು ಪೊಲೀಸ್​ ಠಾಣೆಗೆ ಒಪ್ಪಿಸಿದ್ದಾರೆ. ಪೊಲೀಸ್​ ಸಿಬ್ಬಂದಿಯ ಪ್ರಾಮಾಣಿಕತೆಗೆ ಶ್ಲಾಘನೆ ವ್ಯಕ್ತವಾಗಿದೆ.

Chhattisgarh Cop Finds  45 Lakh On Road
ರಸ್ತೆಯಲ್ಲಿ ಸಿಕ್ಕ "ಲಕ್ಷ್ಮಿ"ಯನ್ನು ಪೊಲೀಸ್​ ಠಾಣೆಗೆ ತಂದು ಒಪ್ಪಿಸಿದ ಟ್ರಾಫಿಕ್​ ಪೊಲೀಸ್​!
author img

By

Published : Jul 24, 2022, 12:08 PM IST

ರಾಯಪುರ(ಛತ್ತೀಸ್​ಗಢ): ಹಣ ಎಂದರೆ ಹೆಣ ಬಾಯ್ತೆರೆಯುತ್ತೆ ಅಂತಾರೆ. ಅಂತಹದ್ದರಲ್ಲಿ ಈ ಟ್ರಾಫಿಕ್​ ಪೊಲೀಸ್​ ಮಾತ್ರ ಪೂರ್ತಿ ಉಲ್ಟಾ. ತನಗೆ ರಸ್ತೆಯಲ್ಲಿ ಸಿಕ್ಕ ಹಣದ ಕಂತೆಗಳನ್ನು ಪೊಲೀಸ್​ ಠಾಣೆಗೆ ತಂದು ಒಪ್ಪಿಸಿದ್ದಾರೆ. ಅದೂ ಎರಡೋ ಮೂರೋ ಸಾವಿರವಲ್ಲ, ಬರೋಬ್ಬರಿ ₹45 ಲಕ್ಷ.

ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದ ಕಯಾಬಂಧ ಪೊಲೀಸ್​ ಠಾಣೆಯ ಟ್ರಾಫಿಕ್​ ಕಾನ್​ಸ್ಟೇಬಲ್​ ನಿಲಂಬರ್​ ಸಿನ್ಹಾ ಆ ಪ್ರಾಮಾಣಿಕ ಪೊಲೀಸ್​. ತಾವು ಕೆಲಸ ಮಾಡುತ್ತಿದ್ದ ವ್ಯಾಪ್ತಿಯಲ್ಲಿ ರಸ್ತೆಯ ಮೇಲೆ ಬ್ಯಾಗ್​ವೊಂದು ಬಿದ್ದಿರುವುದನ್ನು ಕಂಡಿದ್ದಾರೆ. ಅದನ್ನು ತೆರೆದು ಪರಿಶೀಲಿಸಿದಾಗ ಅದರಲ್ಲಿ 2 ಸಾವಿರ, 500 ರೂಪಾಯಿ ಮುಖಬೆಲೆಯ ನೋಟಿನ ಕಂತೆಗಳು ಇದ್ದವು.

ಬಳಿಕ ಹಣದ ಬ್ಯಾಗ್​ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಹತ್ತಿರದ ಪೊಲೀಸ್​ ಠಾಣೆಗೆ ತಂದು ಒಪ್ಪಿಸಿದ್ದಾರೆ. ಠಾಣೆಯಲ್ಲಿ ಹಣವನ್ನು ಎಣಿಕೆ ಮಾಡಿದಾಗ ಅದರಲ್ಲಿ 45 ಲಕ್ಷ ರೂಪಾಯಿ ಇರುವುದು ಗೊತ್ತಾಗಿದೆ.

ಅನಾಮಧೇಯ ವ್ಯಕ್ತಿಯ ಭಾರೀ ಮೊತ್ತದ ಹಣ ಸಿಕ್ಕರೂ ಅದನ್ನು ಠಾಣೆಗೆ ತಂದು ಒಪ್ಪಿಸಿದ ಕಾನ್​ಸ್ಟೇಬಲ್​ರ ಪ್ರಾಮಾಣಿಕತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದರಿಂದ ಸಂತುಷ್ಟರಾದ ಹಿರಿಯ ಅಧಿಕಾರಿಗಳು ನಿಲಂಬರ್​ ಸಿನ್ಹಾಗೆ ಬಹುಮಾನವನ್ನು ಘೋಷಿಸಿದ್ದಾರೆ. ಅಲ್ಲದೇ, ಈ ಹಣ ಯಾರಿಗೆ ಸೇರಿದ್ದು ಮತ್ತು ಇದರ ಮೂಲದ ಬಗ್ಗೆ ತನಿಖೆಗೆ ಸೂಚಿಸಲಾಗಿದೆ.

ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ಕಳ್ಳಸಾಗಾಟದ ಜಾಲ ಪತ್ತೆ: ರಾತ್ರೋ ರಾತ್ರಿ‌ ಶೆಡ್ ಮೇಲೆ ಶಾಸಕ ಗಣೇಶ್ ದಾಳಿ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.