ETV Bharat / bharat

ಛತ್ತೀಸ್‌ಗಢ ಸರ್ಕಾರವನ್ನು ಹಾಡಿ ಹೊಗಳಿದ ರಾಹುಲ್ ಗಾಂಧಿ - ಛತ್ತೀಸ್​ಗಢ ಸರ್ಕಾರ ಹೊಗಳಿದ ರಾಹುಲ್​ ಗಾಂಧಿ

ಸರ್ಕಾರವು ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುತ್ತಿದೆ. ನಾಗರಿಕರ ಹಕ್ಕುಗಳನ್ನು ರಕ್ಷಿಸುವಲ್ಲಿ ಮತ್ತು ಸಮಾಜದ ಪ್ರತಿಯೊಂದು ವರ್ಗದವರಿಗೆ ನ್ಯಾಯ ದೊರಕಿಸುವಲ್ಲಿ ಉತ್ತಮವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್​​​ ನಾಯಕ ರಾಹುಲ್ ಗಾಂಧಿ ಛತ್ತೀಸ್‌ಗಢ ಸರ್ಕಾರವನ್ನು ಹೊಗಳಿದ್ದಾರೆ.

Lok Sabha MP Rahul Gandhi
ಕಾಂಗ್ರೆಸ್​ನ ನಾಯಕ ರಾಹುಲ್​ ಗಾಂಧಿ
author img

By

Published : Mar 21, 2021, 8:37 PM IST

ರಾಯ್‌ಪುರ (ಛತ್ತೀಸ್‌ಗಢ): ರೈತರು, ಕಾರ್ಮಿಕರು ಮತ್ತು ಬಡವರಿಗೆ ಸಹಾಯ ಮಾಡುವಲ್ಲಿ ಛತ್ತೀಸ್​ಗಢ ಸರ್ಕಾರ ಮುಂಚೂಣಿಯಲ್ಲಿದೆ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೇಳಿದ್ದಾರೆ.

ಭೂಪೇಶ್ ಬಾಗೇಲ್ ಸರ್ಕಾರವು ನಾಗರಿಕರ ಹಕ್ಕುಗಳನ್ನು ರಕ್ಷಿಸುವಲ್ಲಿ ಮತ್ತು ಸಮಾಜದ ಪ್ರತಿಯೊಂದು ವರ್ಗದವರಿಗೆ ನ್ಯಾಯ ದೊರಕಿಸುವಲ್ಲಿ ಉತ್ತಮವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಛತ್ತೀಸ್‌ಗಢ ಸರ್ಕಾರವು ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುತ್ತಿದೆ ಎಂದು ರಾಹುಲ್ ಗಾಂಧಿ ರಾಯ್‌ಪುರದ ಮುಖ್ಯಮಂತ್ರಿ ಬಾಗೇಲ್ ಅವರ ನಿವಾಸದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ ಈ ರೀತಿ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಭೂಪೇಶ್ ಬಾಗೇಲ್, ರಾಜೀವ್ ಗಾಂಧಿ ಕಿಸಾನ್ ನ್ಯಾಯ್ ಯೋಜನೆ ಅಡಿಯಲ್ಲಿ 19 ಲಕ್ಷ ಫಲಾನುಭವಿಗಳ ಖಾತೆಗೆ ಒಟ್ಟು 1,104 ಕೋಟಿ, 27 ಲಕ್ಷ ರೂ. ಹಣವನ್ನು ವರ್ಗಾವಣೆ ಮಾಡಿದರು. ಒಟ್ಟಾರೆಯಾಗಿ ಈ ಯೋಜನೆ ಅಡಿಯಲ್ಲಿ 5,628 ಕೋಟಿ ರೂ. ಹಣವನ್ನು ರೈತರಿಗೆ ನೀಡಲಾಗಿದೆ.

ಓದಿ:ಡಿಎಂಕೆ, ಎಐಎಡಿಎಂಕೆ ಪೋಸ್ಟರ್​ನಲ್ಲಿ ಒಂದೇ ಮಹಿಳೆ.. ಯಾರಿವರು, ಯಾಕೆ ಈ ವಿವಾದ?

ಛತ್ತೀಸ್‌ಗಢ ಸರ್ಕಾರ ಇಂದು ನಾಲ್ಕನೇ ಕಂತು ನೀಡುವ ಮೂಲಕ ರೈತರಿಗೆ ಎಕರೆಗೆ 10,000 ರೂ. ನೆರವು ನೀಡುವ ಭರವಸೆಯನ್ನು ಈಡೇರಿಸಿದೆ. ಈ ಸಂದರ್ಭದಲ್ಲಿ ಗೋ ಧನ್ ನ್ಯಾಯ ಯೋಜನೆಯಡಿಯಲ್ಲಿ 1.62 ಲಕ್ಷಕ್ಕೂ ಹೆಚ್ಚು ಜಾನುವಾರು ಸಾಕಣೆದಾರರ ಬ್ಯಾಂಕ್ ಖಾತೆಗಳಿಗೆ ನೇರವಾಗಿ 7 ಕೋಟಿ, 55 ಲಕ್ಷ ರೂ. ಹಣವನ್ನು ವರ್ಗಾವಣೆ ಮಾಡಿದರು.

ರಾಜೀವ್ ಗಾಂಧಿ ಕಿಸಾನ್ ನ್ಯಾಯ ಯೋಜನೆ ಮತ್ತು ಗೋಧನ್ ನ್ಯಾಯ ಯೋಜನೆಯಡಿ ರೈತರು, ಜಾನುವಾರು ಮಾಲೀಕರು ಮತ್ತು ಗ್ರಾಮಸ್ಥರ ಖಾತೆಗೆ ಈ ಮೊತ್ತವನ್ನು ವರ್ಗಾಯಿಸಿದ ನಂತರ ಮಾತನಾಡಿದ ಮುಖ್ಯಮಂತ್ರಿ ಭೂಪೇಶ್ ಬಾಗೇಲ್, ಸಾಲ ಮನ್ನಾ, ನೀರಾವರಿ ತೆರಿಗೆ ಮನ್ನಾ ಮತ್ತು ರೈತರಿಗೆ ಅವರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ನೀಡುವ ಭರವಸೆಯನ್ನು ನಾವು ಈಡೇರಿಸಿದ್ದೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.