ETV Bharat / bharat

ರಾಜಕೀಯ ತೊರೆಯಲು ಧಿಕ್ಕರಿಸಿದ ಬಿಜೆಪಿ ಮುಖಂಡ.. ಮಾಜಿ ಸರಪಂಚ್​ನನ್ನು ಗುಂಡಿಕ್ಕಿ ಕೊಂದ ನಕ್ಸಲರು!

author img

By

Published : Jun 22, 2023, 6:49 AM IST

ರಾಜಕೀಯ ತೊರೆಯುವ ಆದೇಶ ಧಿಕ್ಕರಿಸಿದ ಹಿನ್ನೆಲೆ ಬಿಜೆಪಿ ಮುಖಂಡರೊಬ್ಬರನ್ನು ನಕ್ಸಲರು ಬರ್ಬರವಾಗಿ ಹತ್ಯೆ ಮಾಡಿ, ದೇಹದ ಮೇಲೆ ಕರಪತ್ರ ಎಸೆದು ಹೋಗಿರುವ ಘಟನೆ ಛತ್ತೀಸ್​ಗಢದ ಬಿಜಾ​ಪುರದಲ್ಲಿ ನಡೆದಿದೆ.

BJP leader hacked to death by Maoists  Maoists with warning sign on body  ಮಾಜಿ ಸರಪಂಚ್​ನನ್ನು ಗುಂಡಿಕ್ಕಿ ಕೊಂದ ನಕ್ಸಲರು  ರಾಜಕೀಯ ತೊರೆಯಲು ಧಿಕ್ಕರಿಸಿದ ಬಿಜೆಪಿ ಮುಖುಂಡ  ರಾಜಕೀಯ ತೊರೆಯುವ ಆದೇಶ  ಬಿಜೆಪಿ ಮುಖುಂಡರೊಬ್ಬರನ್ನು ನಕ್ಸಲರು ಬರ್ಬರವಾಗಿ ಹತ್ಯೆ  ದೇಹದ ಮೇಲೆ ಕರಪತ್ರ ಎಸೆದು ಹೋಗಿರುವ ಘಟನೆ  ಶಸ್ತ್ರಸಜ್ಜಿತ ಮಾವೋವಾದಿಗಳ ಗುಂಪು  ಭಾರತೀಯ ಜನತಾ ಪಕ್ಷದ ಮುಖಂಡ  ಹತ್ಯೆಗೀಡಾದ ನಾಲ್ಕನೇ ಸ್ಥಳೀಯ ಬಿಜೆಪಿ ನಾಯಕ
ರಾಜಕೀಯ ತೊರೆಯಲು ಧಿಕ್ಕರಿಸಿದ ಬಿಜೆಪಿ ಮುಖುಂಡ

ಬಿಜಾಪುರ, ಛತ್ತೀಸ್‌ಗಢ: ಜಿಲ್ಲೆಯಲ್ಲಿ ನಕ್ಸಲೀಯರ ರಕ್ತಸಿಕ್ತ ಆಟ ಮುಂದುವರಿದಿದೆ. ಇಲ್ಲಿಯವರೆಗೆ ಮೂರು ದಿನಗಳಲ್ಲಿ ನಕ್ಸಲೀಯರು ಮೂವರನ್ನು ಕೊಂದಿದ್ದಾರೆ. ಸೋಮವಾರದಿಂದ ಆರಂಭವಾದ ಕೊಲೆಗಳ ಸರಣಿ ಇಂದಿಗೂ ಮುಂದುವರೆದಿದೆ. ಇಲ್ಮಿಡಿ ಮಾಜಿ ಸರಪಂಚ್ ಹಾಗೂ ಬಿಜೆಪಿ ಮುಖಂಡ ಕಾಕಾ ಅರ್ಜುನ್ ಅವರನ್ನು ನಕ್ಸಲೀಯರು ಹತ್ಯೆ ಮಾಡಿದ್ದಾರೆ. ಈ ಘಟನೆಯ ನಂತರ ನಕ್ಸಲೀಯರು ಸ್ಥಳದಲ್ಲೇ ಕರಪತ್ರಗಳನ್ನು ಎಸೆದಿದ್ದಾರೆ. ಇದರಲ್ಲಿ ಬಿಜೆಪಿ ಮುಖಂಡ ಕಾಕಾ ಅರ್ಜುನ್ ಹತ್ಯೆಯ ಹೊಣೆಯನ್ನು ಮಾವೋವಾದಿಗಳ ಗುಂಪು ಹೊತ್ತುಕೊಂಡಿದೆ.

ರಾಜಕೀಯ ತೊರೆಯುವ ಆದೇಶವನ್ನು ಧಿಕ್ಕರಿಸಿದ ಕಾರಣಕ್ಕಾಗಿ ಶಸ್ತ್ರಸಜ್ಜಿತ ಮಾವೋವಾದಿಗಳ ಗುಂಪು ಬುಧವಾರ ಛತ್ತೀಸ್‌ಗಢದಲ್ಲಿ ಭಾರತೀಯ ಜನತಾ ಪಕ್ಷದ ಮುಖಂಡ ಮತ್ತು ಮಾಜಿ ಸರಪಂಚ್ ಕಾಕಾ ಅರ್ಜುನ್ ಅವರನ್ನು ಹತ್ಯೆ ಮಾಡಿದೆ ಅಟ್ಟಹಾಸ ಮೆರೆದಿದೆ.

ಈ ಭೀಕರ ಹತ್ಯೆಯು ನಕ್ಸಲೀಯರ ಉದ್ದೇಶವನ್ನು ಸಹ ಹೇಳುತ್ತದೆ. ಅವರು ದೇಹವನ್ನು ರಸ್ತೆಯ ಮಧ್ಯದಲ್ಲಿ ಎಚ್ಚರಿಕೆಯ ಪತ್ರದೊಂದಿಗೆ ಪತ್ತೆಯಾಗಿದೆ. ನಕ್ಸಲರು ಬಿಟ್ಟು ಹೋದ ಪತ್ರದ ಪ್ರಕಾರ, ಅವರು ತಮ್ಮ ಎಚ್ಚರಿಕೆಗಳನ್ನು ನಿರ್ಲಕ್ಷಿಸಿ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರಿಂದ ಅವರನ್ನು ಕೊಲ್ಲಲಾಗಿದೆ. ಅರ್ಜುನ್ ಈ ವರ್ಷ ಛತ್ತೀಸ್‌ಗಢದಲ್ಲಿ ಮಾವೋವಾದಿಗಳಿಂದ ಹತ್ಯೆಗೀಡಾದ ನಾಲ್ಕನೇ ಸ್ಥಳೀಯ ಬಿಜೆಪಿ ನಾಯಕ ಅಥವಾ ಕಾರ್ಯಕಾರಿಯಾಗಿರುವುದು ಗಮನಾರ್ಹ..

ಇದು ನಕ್ಸಲೀಯರ ಆಕ್ರೋಶ ಎಂದ ಬಘೇಲ್​: ಬಿಜೆಪಿಯಲ್ಲಿ ಕೆಲಸ ಮಾಡಬೇಡಿ ಎಂದು ನಕ್ಸಲೀಯರು ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದರು. ಈ ಘಟನೆ ಕುರಿತು ಬಿಜೆಪಿ ಉಪಾಧ್ಯಕ್ಷ ರಮಣ್ ಸಿಂಗ್ ಟ್ವೀಟ್ ಮಾಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನು ಬಿಜೆಪಿಯವರು ಟಾರ್ಗೆಟ್ ಕಿಲ್ಲಿಂಗ್ ಎನ್ನುತ್ತಿದ್ದಾರೆ. ಬಿಜೆಪಿ ನಾಯಕರು ಬಘೇಲ್ ಸರ್ಕಾರದ ಮೇಲೆ ನಿರಂತರವಾಗಿ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಈ ಘಟನೆ ಕುರಿತುಸಿಎಂ ಬಘೇಲ್ ಪ್ರತಿಕ್ರಿಯಿಸಿದ್ದಾರೆ. ಅವರು ಇದನ್ನು ನಕ್ಸಲೀಯರ ಆಕ್ರೋಶ ಎಂದು ಕರೆದಿದ್ದಾರೆ.

ರಾಜಕೀಯ ಹತ್ಯೆ ಎಂದ ಬಿಜೆಪಿ: ಹತ್ಯೆಯನ್ನು ಖಂಡಿಸಿರುವ ಛತ್ತೀಸ್‌ಗಢ ಬಿಜೆಪಿ ಪ್ರಧಾನ ಕಾರ್ಯದರ್ಶಿ ಒಪಿ ಚೌಧರಿ, ಕಾಂಗ್ರೆಸ್ ಬೆಂಬಲವಿಲ್ಲದೇ ನಾಯಕನನ್ನು ಕೊಲ್ಲಲು ಸಾಧ್ಯವಿಲ್ಲ ಮತ್ತು ಕೊಲೆಯನ್ನು "ರಾಜಕೀಯ ಹತ್ಯೆ" ಎಂದು ಕರೆದಿದ್ದಾರೆ. ನಕ್ಸಲರಿಗೆ ಕಾಂಗ್ರೆಸ್ ಬೆಂಬಲವಿಲ್ಲದೆ ಬಸ್ತಾರ್ ವಿಭಾಗದಲ್ಲಿ ಬಿಜೆಪಿಯ ಹಿರಿಯ ಪದಾಧಿಕಾರಿಗಳ ಉದ್ದೇಶಿತ ರಾಜಕೀಯ ಹತ್ಯೆಗಳು ಸಾಧ್ಯವಿಲ್ಲ. ಬಿಜೆಪಿ ನಾಯಕರನ್ನು ಗುರಿಯಾಗಿಸಲು ಪಕ್ಷವು ಅವರೊಂದಿಗೆ ಕೈಜೋಡಿಸಿದಂತೆ ತೋರುತ್ತಿದೆ. ಇದು ಅತ್ಯಂತ ದುರದೃಷ್ಟಕರ, ನಾನು ಇದನ್ನು ಬಲವಾಗಿ ಖಂಡಿಸುತ್ತೇನೆ ಎಂದು ಹೇಳಿದರು.

ಛತ್ತೀಸ್‌ಗಢ ಕಾಂಗ್ರೆಸ್ ವಕ್ತಾರ ಧನಂಜಯ್ ಸಿಂಗ್ ಠಾಕೂರ್ ಹತ್ಯೆಯು ಅತ್ಯಂತ ದುರದೃಷ್ಟಕರವಾಗಿದೆ. ಬಿಜೆಪಿಯು ಈ ವಿಷಯವನ್ನು ರಾಜಕೀಯಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ತನ್ನ ನಾಯಕನ ಹತ್ಯೆಯಲ್ಲಿ ರಾಜಕೀಯ ಮಾಡಲು ಪ್ರಯತ್ನಿಸುತ್ತಿದೆ ಎಂಬುದು ಅತ್ಯಂತ ದುರದೃಷ್ಟಕರವಾಗಿದೆ. ಛತ್ತೀಸ್​ಗಢದಲ್ಲಿ ರಮಣ್ ಸಿಂಗ್ ಅಧಿಕಾರಾವಧಿಯಲ್ಲಿ, ನಕ್ಸಲಿಸಂ ವ್ಯಾಪಕವಾಗಿ ಹರಡಿತ್ತು ಎಂಬುದನ್ನು ಹೇಗೆ ಮರೆಯಲು ಸಾಧ್ಯ?.. ಘಟನೆಯ ಬಗ್ಗೆ ಭೂಪೇಶ್ ಬಘೇಲ್ ಸರ್ಕಾರವು ಸಂತಾಪ ವ್ಯಕ್ತಪಡಿಸುತ್ತದೆ ಮತ್ತು ಅವರ ಕುಟುಂಬ ಪರ ನಿಂತಿದೆ ಎಂದು ಧನಂಜಯ್ ಸಿಂಗ್ ಠಾಕೂರ್ ಹೇಳಿದರು.

ಮಂಗಳವಾರ ಬಸ್ತಾರ್‌ನ ಬಿಜಾಪುರ ಜಿಲ್ಲೆಯಲ್ಲಿ ಮಾವೋವಾದಿಗಳು ಒಬ್ಬ ಪೊಲೀಸ್ ಸೇರಿದಂತೆ ಇಬ್ಬರು ವ್ಯಕ್ತಿಗಳನ್ನು ಕೊಂದಿದ್ದಾರೆ ಎಂದು ಶಂಕಿಸಲಾದ ಎರಡು ದಿನಗಳ ನಂತರ ಬಿಜೆಪಿ ನಾಯಕನ ಹತ್ಯೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತ ಸಹಾಯಕ ಕಾನ್‌ಸ್ಟೆಬಲ್ ಸಂಜಯ್ ಕುಮಾರ್ ವೆಡ್ಜಾ ವೈದ್ಯಕೀಯ ರಜೆಯಲ್ಲಿದ್ದರು. ಅವರನ್ನು ಪಟಕುಟ್ರು ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಹತ್ಯೆ ಮಾಡಲಾಗಿದ್ದು, ಇದು ಮೊದಲ ಘಟನೆ ಆದ್ರೆ, ಇದೇ ರೀತಿಯ ಎರಡನೇ ಘಟನೆಯಲ್ಲಿ ಬಿಜಾಪುರ ಜಿಲ್ಲೆಯಲ್ಲಿ ಪೊಲೀಸ್ ಮಾಹಿತಿದಾರನೆಂಬ ಶಂಕೆಯ ಮೇಲೆ 45 ವರ್ಷದ ವ್ಯಕ್ತಿಯನ್ನು ಮಾವೋವಾದಿಗಳು ಅಪಹರಿಸಿ ಕೊಂದಿದ್ದಾರೆ. ಆಯಿಪೆಂಟಾ ಗ್ರಾಮದ ನಿವಾಸಿ ಧುರ್ವ ಧರ್ಮಯ್ಯ ಸೋಮವಾರ ಗುಡ್ಡದ ಮೇಲೆ ಶವವಾಗಿ ಪತ್ತೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಓದಿ: ಅತಿ ಚಿಕ್ಕ ವಯಸ್ಸಿನಲ್ಲೇ ನಕ್ಸಲ್ ಚಟುವಟಿಕೆಗಳಲ್ಲಿ ತೊಡಗಿದ್ದ ಬಾಲಕಿ: ಇದೀಗ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.