ETV Bharat / bharat

'ದಿ ಕಾಶ್ಮೀರ್​ ಫೈಲ್ಸ್'​ ಅರ್ಧ ಸತ್ಯ ಮಾತ್ರ ತೋರಿಸಿದೆ: ಸಿಎಂ ಭೂಪೇಶ್ ಬಘೇಲ್​ - ಛತ್ತೀಸ್‌ಗಢ ಸಿಎಂ ಭೂಪೇಶ್ ಬಾಗೇಲ್​

ಮುಖ್ಯಮಂತ್ರಿ ಭೂಪೇಶ್ ಬಾಗೇಲ್ ಅವರು 'ದಿ ಕಾಶ್ಮೀರ್ ಫೈಲ್ಸ್' ಚಿತ್ರ ವೀಕ್ಷಿಸಿ ಪ್ರತಿಕ್ರಿಯೆ ನೀಡಿದ್ದಾರೆ. 'ದಿ ಕಾಶ್ಮೀರ್​ ಫೈಲ್ಸ್'​ ಅರ್ಧ ಸತ್ಯ ಮಾತ್ರ ತೋರಿಸಿದೆ ಎಂದಿದ್ದಾರೆ.

Chhattisgarh cm Baghel
ಛತ್ತೀಸ್‌ಗಢ ಸಿಎಂ ಭೂಪೇಶ್ ಬಾಗೇಲ್​
author img

By

Published : Mar 17, 2022, 12:56 PM IST

ರಾಯ್‌ಪುರ್‌(ಛತ್ತೀಸ್‌ಗಢ): 1990ರಲ್ಲಿ ಕಾಶ್ಮೀರ ಪಂಡಿತರ ಮೇಲಿನ ದೌರ್ಜನ್ಯದ ನೈಜ ಕಥಾಹಂದರವನ್ನು ಹೊಂದಿರುವ 'ದಿ ಕಾಶ್ಮೀರ್ ಫೈಲ್ಸ್' ಚಿತ್ರವನ್ನು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತೆರೆ ಮೇಲೆ ತಂದಿದ್ದು, ಚಿತ್ರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದ್ರೆ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಅರ್ಧ ಸತ್ಯ ಮಾತ್ರ ತೋರಿಸಿದೆ ಎಂದು ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್​ ಬುಧವಾರ ಹೇಳಿದ್ದಾರೆ.

ಪಂಡಿತರಷ್ಟೇ ಅಲ್ಲ ಇತರ ಸಮುದಾಯದವರೂ ಇದ್ದರು:

ಅಲ್ಲದೇ ಕಾಶ್ಮೀರದಲ್ಲಿ ಹಿಂದೂಗಳನ್ನು ಮಾತ್ರವಲ್ಲ, ಬೌದ್ಧರು, ಮುಸ್ಲಿಮರು, ಸಿಖ್ಖರನ್ನೂ ಹತ್ಯೆ ಮಾಡಲಾಗಿದೆ ಎಂದು ಹೇಳಿದ್ದಾರೆ. ನಾನು 'ದಿ ಕಾಶ್ಮೀರ್ ಫೈಲ್ಸ್' ಚಿತ್ರವನ್ನು ವೀಕ್ಷಿಸಿದ್ದೇನೆ. ಕಾಶ್ಮೀರದಲ್ಲಿ ಸಂಭವಿಸಿದ ಭಯೋತ್ಪಾದಕ ಘಟನೆಗಳ ಮೇಲೆ ಚಿತ್ರ ನಿರ್ಮಿಸಲಾಗಿದೆ. ಇಡೀ ಚಿತ್ರವು ಕೇವಲ ಒಂದು ಕುಟುಂಬದ ಮೇಲೆ ಕೇಂದ್ರೀಕೃತವಾಗಿದೆ. ಆದರೆ ನಿಜವಾಗಿಯೂ ಕೊನೆಯಲ್ಲಿ ಹಿಂದೂಗಳು ಮಾತ್ರವಲ್ಲದೇ ಬೌದ್ಧರು, ಮುಸ್ಲಿಮರು, ಸಿಖ್ಖರು ಸೇರಿದಂತೆ ಇತರೆ ಸಮುದಾಯದವರು ಹತ್ಯೆಗೀಡಾಗಿದ್ದರು.

ರಾಜಕೀಯ ಸಂದೇಶಕ್ಕಾಗಿ ಚಿತ್ರ ನಿರ್ಮಾಣ: ಆದರೆ, ಕಾಶ್ಮೀರಿ ಪಂಡಿತರು ಮಾತ್ರ ಸ್ಥಳಾಂತರಗೊಂಡಿದ್ದಾರೆ ಎಂಬ ಒಂದೇ ಒಂದು ರಾಜಕೀಯ ಸಂದೇಶವನ್ನು ರವಾನಿಸುವ ಸಲುವಾಗಿ ಈ ಚಿತ್ರವನ್ನು ನಿರ್ಮಿಸಲಾಗಿದೆ ಎಂದು ಚಿತ್ರ ವೀಕ್ಷಿಸಿದ ನಂತರ ಸಿಎಂ ಭೂಪೇಶ್ ಬಾಗೇಲ್​ ತಮ್ಮ ಅಭಿಪ್ರಾಯ ತಿಳಿಸಿದರು. ಚಿತ್ರದಲ್ಲಿ ಅರ್ಧ ಸತ್ಯವನ್ನು ತೋರಿಸಲಾಗಿದೆ. ವಿಷಯವನ್ನು ಒಂದೇ ಕಡೆಗೆ ಕೇಂದ್ರೀಕರಿಸಿ ಚಿತ್ರ ನಿರ್ಮಿಸುವುದು ಸರಿಯಲ್ಲ ಎಂದರು.

ಅವರು (ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ) ಈ ಮೂಲಕ ರಾಜಕೀಯ ಮಾಡಲು ಬಯಸಿದ್ದಾರೆ. ಈ ಮಾರ್ಗದಲ್ಲಿ ಲೋಕಸಭೆ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ. ದೇಶವು ತುಂಬಾ ತಪ್ಪು ದಿಕ್ಕಿನಲ್ಲಿದೆ. ಇಂದಿಗೂ ಕಾಶ್ಮೀರಿ ಪಂಡಿತರ ಸಮಸ್ಯೆ ಬಗೆಹರಿದಿಲ್ಲ ಮತ್ತು ಅವರ ಪುನರ್ವಸತಿಗೆ ಯಾವುದೇ ಪ್ರಯತ್ನಗಳು ನಡೆದಿಲ್ಲ ಎಂದು ಹೇಳಿದರು.

ಇದು 1989-90ರ ಕಥೆ. ವಿ.ಪಿ.ಸಿಂಗ್ ಪ್ರಧಾನಿಯಾಗಿದ್ದರು. ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ. ಅಡ್ವಾಣಿ ಮುಂಚೂಣಿ ನಾಯಕರಾಗಿದ್ದರು. ಜಗಮೋಹನ್ ಅವರು ಲೆಫ್ಟಿನೆಂಟ್ ಗವರ್ನರ್ ಆಗಿದ್ದರು. ಕಾಶ್ಮೀರಿಗಳನ್ನು ತಡೆಯುವ ಯಾವುದೇ ಪ್ರಯತ್ನ ನಡೆದಿರಲಿಲ್ಲ. ಆದರೆ, ಕಾಶ್ಮೀರಿ ಪಂಡಿತರನ್ನು ರಾಜ್ಯ ಬಿಡುವಂತೆ ಹೇಳಲಾಯಿತು. ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಯಿತು. ಅಲ್ಲಿಗೆ ಸೈನ್ಯ ಕಳುಹಿಸಲಿಲ್ಲ. ಇಂದಿಗೂ ಕಾಶ್ಮೀರಿ ಪಂಡಿತರ ಸಮಸ್ಯೆ ಇದೇ ಆಗಿದೆ. 370 ಅನ್ನು ತೆಗೆದುಹಾಕಲಾಗಿದೆ. ಆದರೆ, ಕಾಶ್ಮೀರಿ ಪಂಡಿತರ ಪುನರ್ವಸತಿಗೆ ಯಾವುದೇ ಕೆಲಸ ನಡೆದಿಲ್ಲ ಎಂದು ಛತ್ತೀಸ್​​ಗಢ ಸಿಎಂ ಆರೋಪಿಸಿದರು.

ಇದನ್ನೂ ಓದಿ: ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾದ ಲಿಂಕ್ ವಾಟ್ಸಪ್​ನಲ್ಲಿ ಶೇರ್.. ಕ್ಲಿಕ್ ಮಾಡಿದ್ರೆ ಬೀಳುತ್ತೆ ಪಂಗನಾಮ

ಚಿತ್ರದಲ್ಲಿ ಸಮಸ್ಯೆಗೆ ಪರಿಹಾರವನ್ನೇ ಹೇಳಿಲ್ಲ: ಇನ್ನು ಚಿತ್ರವು ಸಮಸ್ಯೆಗೆ ಪರಿಹಾರ ನೀಡಿಲ್ಲ, ಉಪನ್ಯಾಸವನ್ನಷ್ಟೇ ನೀಡಿದೆ. ಅಟಲ್ ಬಿಹಾರಿ ವಾಜಪೇಯಿ ಅವರು 6 ವರ್ಷ ಆಡಳಿತ ನಡೆಸಿದರು, ಈಗ 8 ವರ್ಷ ಮೋದಿ ಸರ್ಕಾರವಿದೆ. 370ನೇ ವಿಧಿಯನ್ನು ತೆಗೆದುಹಾಕಿ ದಿನಗಳು ಕಳೆದಿವೆ. ಆದರೆ ಅವರಿಗೆ ಪುನರ್ವಸತಿ ಕಲ್ಪಿಸಲು ಯಾವುದೇ ಪ್ರಯತ್ನವನ್ನು ಮಾಡಿಲ್ಲ ಎಂದು ಬಘೇಲ್​ ಆರೋಪಿಸಿದರು..

ಅಲ್ಲದೇ ಮಕ್ಕಳ ಮನಸ್ಸಿನ ಮೇಲೆ ಉತ್ತಮ ಪ್ರಭಾವ ಬೀರದಂತಹ ತೀವ್ರವಾದ ಹಿಂಸೆಯನ್ನು ಚಿತ್ರದಲ್ಲಿ ತೋರಿಸಲಾಗಿದೆ. ಆ ಸಮಯದಲ್ಲಿ ಬೌದ್ಧರು, ಸಿಖ್ಖರು ಮತ್ತು ಮುಸ್ಲಿಮರು ಸಹ ಕೊಲ್ಲಲ್ಪಟ್ಟರು. ಅವರು ಕಥೆಯ ಇತರೆ ಭಾಗದಲ್ಲಿ ಈ ಬಗ್ಗೆ ಏನನ್ನೂ ತೋರಿಸಲಿಲ್ಲ ಎಂದು ವಿಷಾದಿಸಿದರು. ಎಲ್ಲ ಧರ್ಮದವರನ್ನು ಹತ್ಯೆ ಮಾಡಲಾಗಿದೆ, ದೇವಾಲಯಗಳು ಮತ್ತು ಮಸೀದಿಗಳನ್ನು ಸಹ ನಾಶಪಡಿಸಲಾಗಿದೆ ಎಂದು ಛತ್ತೀಸ್​ಗಢ ಸಿಎಂ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.