ETV Bharat / bharat

ಛತ್ತೀಸ್‌ಗಢ ವಿಧಾನಸಭೆ ಚುನಾವಣೆ 2023: ಮಂಗಳವಾರ ಮೊದಲ ಹಂತದ ಮತದಾನ .. ಇಲ್ಲಿದೆ ಫುಲ್​ ಡೀಟೇಲ್ಸ್​​

ಛತ್ತೀಸ್‌ಗಢದಲ್ಲಿ ಚುನಾವಣಾ ಕದನ ಮಂಗಳವಾರ ಆರಂಭವಾಗಲಿದೆ. ಮೊದಲ ಹಂತದ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆಯನ್ನು ಮಾಡಿದ್ದು, ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಲಿದೆ.

ಛತ್ತೀಸ್‌ಗಢ ವಿಧಾನಸಭೆ ಚುನಾವಣೆ 2023
ಛತ್ತೀಸ್‌ಗಢ ವಿಧಾನಸಭೆ ಚುನಾವಣೆ 2023
author img

By ETV Bharat Karnataka Team

Published : Nov 6, 2023, 9:13 PM IST

Updated : Nov 6, 2023, 9:42 PM IST

ರಾಯ್‌ಪುರ (ಛತ್ತೀಸ್‌ಗಢ) : 2023ರ ವಿಧಾನಸಭೆ ಚುನಾವಣೆಗೆ ರಾಜ್ಯ ಸಜ್ಜಾಗುತ್ತಿರುವಂತೆಯೇ ಛತ್ತೀಸ್‌ಗಢದಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಮಂಗಳವಾರ (ನ.7) ನಡೆಯಲಿರುವ ಮೊದಲ ಹಂತದ ಮತದಾನದಲ್ಲಿ 20 ನಿರ್ಣಾಯಕ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಒಟ್ಟು 223 ಅಭ್ಯರ್ಥಿಗಳು ಮತದಾರರ ವಿಶ್ವಾಸ ಗಳಿಸಲು ಪೈಪೋಟಿ ನಡೆಸುತ್ತಿದ್ದಾರೆ. 40 ಲಕ್ಷಕ್ಕೂ ಹೆಚ್ಚು ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ.

ಒಟ್ಟು 40,78,681 ಅರ್ಹ ಮತದಾರರಲ್ಲಿ 20,84,675 ಮಹಿಳೆಯರು ಭಾಗವಹಿಸಲಿದ್ದಾರೆ. ಮೊದಲ ಹಂತದ ಮತದಾನವು 12 ಪರಿಶಿಷ್ಟ ಪಂಗಡ (ಎಸ್‌ಟಿ), ಒಂದು ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಏಳು ಸಾಮಾನ್ಯ ಸ್ಥಾನಗಳನ್ನು ಒಳಗೊಂಡಂತೆ 20 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ಬಸ್ತಾರ್ ವಿಭಾಗದ ಎಲ್ಲಾ 12 ವಿಧಾನಸಭಾ ಸ್ಥಾನಗಳು ತೀವ್ರ ಪೈಪೋಟಿಯಿಂದ ಕೂಡಿವೆ. ಇವುಗಳಲ್ಲಿ ಕೊಂಟಾ, ಬಿಜಾಪುರ, ದಂತೇವಾಡ, ಚಿತ್ರಕೋಟ್, ಜಗದಲ್‌ಪುರ, ಬಸ್ತಾರ್, ನಾರಾಯಣಪುರ, ಕೊಂಡಗಾಂವ್, ಕೇಶ್ಕಲ್, ಕಂಕೇರ್, ಭಾನುಪ್ರತಾಪುರ್ ಮತ್ತು ಅಂತಗಢ ಸೇರಿವೆ. ಹೆಚ್ಚುವರಿಯಾಗಿ, ಉಳಿದ ಎಂಟು ಸ್ಥಾನಗಳಲ್ಲಿ ಮೊಹ್ಲಾ-ಮಾನ್‌ಪುರ್, ಖುಜ್ಜಿ, ಡೊಂಗರ್‌ಗಾಂವ್, ರಾಜನಂದಗಾಂವ್, ಡೊಂಗರ್‌ಗಢ್, ಖೈರಗಢ್, ಕವರ್ಧಾ ಮತ್ತು ಪಂಡರಿಯಾ ಸೇರಿವೆ. ರಾಜ್ಯದ 11 ಜಿಲ್ಲೆಗಳಲ್ಲಿ ಈ ಮತದಾನ ನಡೆಯುತಿದೆ.

223 ಅಭ್ಯರ್ಥಿಗಳ ಹಣೆ ಬರಹ ನಿರ್ಧಾರ: 20 ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಒಟ್ಟು 223 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಇದರಲ್ಲಿ 198 ಪುರುಷರು ಮತ್ತು 25 ಮಹಿಳಾ ಅಭ್ಯರ್ಥಿಗಳು ತಮ್ಮ ಅದೃಷ್ಠ ಪರೀಕ್ಷೆಗಿಳಿದಿದ್ದಾರೆ. ರಾಜನಂದಗಾಂವ್ ಅತಿ ಹೆಚ್ಚು ಅಭ್ಯರ್ಥಿಗಳನ್ನು ಹೊಂದಿರುವ ಕ್ಷೇತ್ರವಾಗಿದ್ದು, 29 ವ್ಯಕ್ತಿಗಳು ಗೆಲುವಿಗಾಗಿ ಈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಚಿತ್ರಕೋಟೆ ಮತ್ತು ದಾಂತೇವಾಡ ವಿಧಾನಸಭಾ ಕ್ಷೇತ್ರಗಳಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೊದಲ ಹಂತದ ಚುನಾವಣೆಯಲ್ಲಿ ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ರಾಜನಂದಗಾಂವ್ ಕ್ಷೇತ್ರದಿಂದ ಅಖಾಡಕ್ಕೆ ಇಳಿದಿದ್ದಾರೆ.

ಕೆಲವೆಡೆ ಬೆಳಗ್ಗೆ 7, ಮತ್ತೆ ಕೆಲವಡೆಡ ಬೆಳಗ್ಗೆ 8 ರಿಂದ ಮತದಾನ ಶುರು: ಮತದಾನವು ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗಿ ಮಧ್ಯಾಹ್ನ 3 ಗಂಟೆಗೆ ಮುಕ್ತಾಯವಾಗುತ್ತದೆ. ಮೊಹ್ಲಾ- ಮಾನ್‌ಪುರ, ಅಂತಗಢ, ಭಾನುಪ್ರತಾಪುರ್, ಕಂಕೇರ್, ಕೇಶ್ಕಲ್, ಕೊಂಡಗಾಂವ್, ನಾರಾಯಣಪುರ, ದಾಂತೇವಾಡ, ಬಿಜಾಪುರ ಮತ್ತು ಕೊಂಟಾ ಕ್ಷೇತ್ರಗಳಲ್ಲಿ ಮಧ್ಯಾಹ್ನ 3 ಗಂಟೆಗೆ ಮತದಾನ ಮುಕ್ತಾಯವಾಗಲಿದೆ. ಇನ್ನು ಪಂಡರಿಯಾ, ಕವರ್ಧಾ, ಖೈರಗಢ, ಡೊಂಗರ್‌ಗಢ, ರಾಜನಂದಗಾಂವ್, ಬಸ್ತಾರ್, ಜಗದಲ್‌ಪುರ ಮತ್ತು ಚಿತ್ರಕೋಟ್ ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 8 ರಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದೆ.

ನಕ್ಸಲ್​ ಪೀಡಿತ ಪ್ರದೇಶದಲ್ಲಿ ವ್ಯಾಪಕ ಬಿಗಿ ಭದ್ರತೆ: 20 ವಿಧಾನಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳು ನಕ್ಸಲ್​ ಪೀಡಿತ ಪ್ರದೇಶದಲ್ಲಿ ಬರುತ್ತವೆ. ಈ ಹಿನ್ನೆಲೆಯಲ್ಲಿ ಈ ಕ್ಷೇತ್ರಗಳಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಗಿದೆ. 40,000 ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (CAPF) ಸಿಬ್ಬಂದಿ ಮತ್ತು 20,000 ರಾಜ್ಯ ಪೊಲೀಸ್ ಅಧಿಕಾರಿಗಳ ಸಂಯೋಜಿತ ಪಡೆಯನ್ನು ನಿಯೋಜಿಸಲಾಗಿದೆ. ಇದಲ್ಲದೇ ನಕ್ಸಲ್ ವಿರೋಧಿ ಘಟಕ ಕೋಬ್ರಾ ಮತ್ತು ಮಹಿಳಾ ಕಮಾಂಡೋಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಇದನ್ನೂ ಓದಿ: 'ಛತ್ತೀಸ್‌ಗಡದಲ್ಲಿ ಮೋದಿಜೀ ಗ್ಯಾರಂಟಿ': ₹ 500ಕ್ಕೆ ಗ್ಯಾಸ್ ಸಿಲಿಂಡರ್, ವಿವಾಹಿತ ಮಹಿಳೆಯರಿಗೆ ₹ 12,000!

Last Updated : Nov 6, 2023, 9:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.