ಭೋಪಾಲ್/ರಾಯಪುರ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಇಂದು ಮಹತ್ವದ ದಿನ. ಮಧ್ಯಪ್ರದೇಶದ ಎಲ್ಲ 230 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಹಾಗೂ ಛತ್ತೀಸ್ಗಢ 70 ಕ್ಷೇತ್ರಗಳಿಗೆ ಅಂತಿಮ ಹಂತದ ಮತದಾನ ಪ್ರಗತಿಯಲ್ಲಿದೆ. ಇದರೊಂದಿಗೆ ಮಿಜೋರಾಂ ಸೇರಿ ಮೂರು ರಾಜ್ಯಗಳ ಮತ ಸಮರಕ್ಕೆ ತೆರೆ ಬೀಳಲಿದೆ. ರಾಜಸ್ಥಾನ (ನ.25) ಹಾಗೂ ತೆಲಂಗಾಣದಲ್ಲಿ (ನ.30) ಮತದಾನ ಇನ್ನಷ್ಟೇ ನಡೆಯಬೇಕಿದೆ.
-
#WATCH | Madhya Pradesh Elections | An elderly voter shows her inked finger after casting her vote at a polling booth in Gwalior. pic.twitter.com/ZnSA5RHDxp
— ANI (@ANI) November 17, 2023 " class="align-text-top noRightClick twitterSection" data="
">#WATCH | Madhya Pradesh Elections | An elderly voter shows her inked finger after casting her vote at a polling booth in Gwalior. pic.twitter.com/ZnSA5RHDxp
— ANI (@ANI) November 17, 2023#WATCH | Madhya Pradesh Elections | An elderly voter shows her inked finger after casting her vote at a polling booth in Gwalior. pic.twitter.com/ZnSA5RHDxp
— ANI (@ANI) November 17, 2023
ನವೆಂಬರ್ 7ರಂದು ಮಿಜೋರಾಂನ ಎಲ್ಲ 40 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಶೇ 78ರಷ್ಟು ಮತದಾನವಾಗಿತ್ತು. ಅದೇ ದಿನ ಛತ್ತೀಸ್ಗಢದ 90 ಸ್ಥಾನಗಳ ಪೈಕಿ 20 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನವಾಗಿದ್ದು, ಶೇ.71ರಷ್ಟು ಪೋಲಿಂಗ್ ದಾಖಲಾಗಿದೆ. ಇಂದು ಛತ್ತೀಸ್ಗಢದ 22 ಜಿಲ್ಲೆಗಳ 70 ವಿಧಾನಸಭಾ ಸ್ಥಾನಗಳಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದೆ. ಒಟ್ಟು 1.63 ಕೋಟಿಗೂ ಅಧಿಕ ಮತದಾರರು ಹಕ್ಕು ಚಲಾಯಿಸಲಿದ್ದಾರೆ.
-
#WATCH | Madhya Pradesh Elections | People queue up outside polling stations as they await their turn to cast a vote.
— ANI (@ANI) November 17, 2023 " class="align-text-top noRightClick twitterSection" data="
Visuals from a polling station in Bhopal. pic.twitter.com/S2dOe5m390
">#WATCH | Madhya Pradesh Elections | People queue up outside polling stations as they await their turn to cast a vote.
— ANI (@ANI) November 17, 2023
Visuals from a polling station in Bhopal. pic.twitter.com/S2dOe5m390#WATCH | Madhya Pradesh Elections | People queue up outside polling stations as they await their turn to cast a vote.
— ANI (@ANI) November 17, 2023
Visuals from a polling station in Bhopal. pic.twitter.com/S2dOe5m390
70 ಕ್ಷೇತ್ರ - 958 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ: ಛತ್ತೀಸ್ಗಢದ 70 ಕ್ಷೇತ್ರಗಳಲ್ಲಿ 51 ಪಕ್ಷಗಳಿಂದ ಒಟ್ಟು 958 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ 130 ಮಹಿಳಾ ಅಭ್ಯರ್ಥಿಗಳು, ಓರ್ವ ತೃತೀಯಲಿಂಗಿ ಸೇರಿದ್ದಾರೆ. ಆಮ್ ಆದ್ಮಿ ಪಕ್ಷ - 44, ಬಿಎಸ್‌ಪಿ - 44, ಕಾಂಗ್ರೆಸ್ - 70, ಬಿಜೆಪಿ - 70, ಜೆಸಿಸಿಜೆ - 67 ಮತ್ತು 357 ಸ್ವತಂತ್ರ ಅಭ್ಯರ್ಥಿಗಳು ಹಾಗೂ 304 ಇತರೆ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆಯುವರು. ಬಹುತೇಕ ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ಏರ್ಪಟ್ಟಿದೆ.
-
#WATCH | | Chhattisgarh Elections 2023 | CM Bhupesh Baghel says, "Today polling will happen for the remaining 70 seats...Your one vote will decide the future of youth, farmers, women...Please move out of your homes to vote...Vote for the betterment of Chhattisgarh." pic.twitter.com/Fgw59Q439x
— ANI (@ANI) November 17, 2023 " class="align-text-top noRightClick twitterSection" data="
">#WATCH | | Chhattisgarh Elections 2023 | CM Bhupesh Baghel says, "Today polling will happen for the remaining 70 seats...Your one vote will decide the future of youth, farmers, women...Please move out of your homes to vote...Vote for the betterment of Chhattisgarh." pic.twitter.com/Fgw59Q439x
— ANI (@ANI) November 17, 2023#WATCH | | Chhattisgarh Elections 2023 | CM Bhupesh Baghel says, "Today polling will happen for the remaining 70 seats...Your one vote will decide the future of youth, farmers, women...Please move out of your homes to vote...Vote for the betterment of Chhattisgarh." pic.twitter.com/Fgw59Q439x
— ANI (@ANI) November 17, 2023
ಇನ್ನುಳಿದ 70 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. ನಿಮ್ಮ ಒಂದು ಮತ ಯುವಕರು, ರೈತರು, ಮಹಿಳೆಯರ ಭವಿಷ್ಯ ನಿರ್ಧರಿಸುತ್ತದೆ. "ದಯವಿಟ್ಟು ಮನೆಯಿಂದ ಹೊರ ಬಂದು ಮತ ಚಲಾಯಿಸಿ. ಅಭಿವೃದ್ಧಿಗಾಗಿ ಮತ ಚಲಾಯಿಸಿ" ಎಂದು ಛತ್ತೀಸ್ಗಢ ಸಿಎಂ ಭೂಪೇಶ್ ಬಾಘೇಲ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಮಧ್ಯಪ್ರದೇಶ ಹೈವೋಲ್ಟೇಜ್ ಕಣ: ಪಂಚ ರಾಜ್ಯಗಳ ಪೈಕಿ ಮಧ್ಯಪ್ರದೇಶ ಚುನಾವಣೆ ಹೈವೋಲ್ಟೇಜ್ ಆಗಿ ಮಾರ್ಪಟ್ಟಿದೆ. ಈ ರಾಜ್ಯದಲ್ಲೂ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆ ಇದ್ದು, ಇಂದು ಎಲ್ಲ 230 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಒಟ್ಟಾರೆ 5.60 ಕೋಟಿ ಮತದಾರರು 2,533 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧರಿಸಲು ಮತ ಚಲಾಯಿಸುತ್ತಿದ್ದಾರೆ.
ಮತದಾನಕ್ಕಾಗಿ 230 ಸ್ಥಾನಗಳಲ್ಲಿ 64 ಸಾವಿರದ 523 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ 17 ಸಾವಿರ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. 35 ಸಾವಿರ ಮತಗಟ್ಟೆಗಳನ್ನು ವೆಬ್‌ಕಾಸ್ಟಿಂಗ್ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ. ಬಿಜೆಪಿ-ಕಾಂಗ್ರೆಸ್ ಎಲ್ಲ 230 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಬಿಎಸ್‌ಪಿ 181 ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿದರೆ, ಆಮ್ ಆದ್ಮಿ ಪಕ್ಷದಿಂದ 66 ಅಭ್ಯರ್ಥಿಗಳು ಮತ್ತು ಸಮಾಜವಾದಿ ಪಕ್ಷದಿಂದ 71 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇದರೊಂದಿಗೆ 1,166 ಸ್ವತಂತ್ರ ಅಭ್ಯರ್ಥಿಗಳು, ಒಬ್ಬ ತೃತೀಯಲಿಂಗಿ ಅಭ್ಯರ್ಥಿ ಸೇರಿದ್ದಾರೆ.
-
#WATCH | Madhya Pradesh Assembly elections | Union Minister and BJP candidate from Narshinghpur, Prahlad Patel says, "...I urge all the people of Madhya Pradesh to touch the goal of 100% voting...I request them to vote together for development...We will come to power for the… pic.twitter.com/yb18qehBZe
— ANI (@ANI) November 17, 2023 " class="align-text-top noRightClick twitterSection" data="
">#WATCH | Madhya Pradesh Assembly elections | Union Minister and BJP candidate from Narshinghpur, Prahlad Patel says, "...I urge all the people of Madhya Pradesh to touch the goal of 100% voting...I request them to vote together for development...We will come to power for the… pic.twitter.com/yb18qehBZe
— ANI (@ANI) November 17, 2023#WATCH | Madhya Pradesh Assembly elections | Union Minister and BJP candidate from Narshinghpur, Prahlad Patel says, "...I urge all the people of Madhya Pradesh to touch the goal of 100% voting...I request them to vote together for development...We will come to power for the… pic.twitter.com/yb18qehBZe
— ANI (@ANI) November 17, 2023
ಕೇಂದ್ರ ಸಚಿವ ಮತ್ತು ನರಶಿಂಗಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಪಟೇಲ್ ಮಾತನಾಡಿ, "ಮಧ್ಯಪ್ರದೇಶದಲ್ಲಿ ಶೇ 100 ಮತದಾನ ಚಲಾಯಿಸುವ ಗುರಿ ತಲುಪಬೇಕೆಂದು ವಿನಂತಿಸುತ್ತೇನೆ. ಅಭಿವೃದ್ಧಿಗಾಗಿ ಎಲ್ಲರೂ ಮತ ಚಲಾಯಿಸಿ. ಐದನೇ ಬಾರಿಗೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಒಂದೇ ವೇದಿಕೆ ಹಂಚಿಕೊಂಡ ಸಿದ್ದರಾಮಯ್ಯ, ಬೊಮ್ಮಾಯಿ, ಸೋಮಣ್ಣ