ETV Bharat / bharat

ಛತ್ತೀಸ್‌ಗಡದಲ್ಲಿ 13 ನಕ್ಸಲರು ಶರಣಾಗತಿ

ಛತ್ತೀಸ್‌ಗಡದಲ್ಲಿ ದಂಪತಿ ಸೇರಿ 13 ನಕ್ಸಲೀಯರು ಶರಣಾಗಿದ್ದಾರೆ. ಈವರೆಗೆ ತಮ್ಮ ತಲೆಗೆ ಇನಾಮು ಹೊಂದಿದ್ದ 96 ಮಂದಿ ಸೇರಿ 368 ನಕ್ಸಲರು ಶರಣಾದಂತಾಗಿದೆ.

Chhattisgarh: 13 Naxals surrender in Bastar region
ಛತ್ತೀಸ್‌ಗಡದಲ್ಲಿ 13 ನಕ್ಸಲರು ಶರಣಾಗತಿ
author img

By

Published : Jun 12, 2021, 2:18 AM IST

ಸುಕ್ಮಾ: ಛತ್ತೀಸ್‌ಗಡದ ಬಸ್ತಾರ್​ನ ಎರಡು ಜಿಲ್ಲೆಗಳಲ್ಲಿ ಶುಕ್ರವಾರ ದಂಪತಿ ಸೇರಿ 13 ನಕ್ಸಲೀಯರು ಶರಣಾಗಿದ್ದಾರೆ. 8 ಮಂದಿ ಸುಕ್ಮಾ ಜಿಲ್ಲೆಯಲ್ಲಿ ಪೊಲೀಸ್ ಮತ್ತು ಸಿಆರ್​​​ಪಿಎಫ್ ಅಧಿಕಾರಿಗಳ ಮುಂದೆ ಹಾಗೂ ಇತರ 5 ಮಂದಿ ನಕ್ಸಲರು ನೆರೆಯ ದಂತೇವಾಡದಲ್ಲಿ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಕ್ಮಾದಲ್ಲಿ ಶರಣಾದ 8 ನಕ್ಸಲರಲ್ಲಿ ವಂಜಮ್ ಭೀಮಾ ಎಂಬಾತನಿಗಾಗಿ ಪೊಲೀಸರು 2 ಲಕ್ಷ ರೂ. ಬಹುಮಾನ ಘೋಷಿಸಿದ್ದರು. ಈತನ ಪತ್ನಿ ಸದಸ್ಯ ಪತ್ನಿ ಮಡವಿ ಕಲಾವತಿ ಕೂಡ ಶರಣಾಗಿದ್ದಾರೆ. ರವಿ, ಕೋಸಾ, ದೇವಾ, ಡಿರ್ಡೊ ಗಂಗಾ, ಸೋಡಿ ದುಲಾ ಮತ್ತು ಕವಾಸಿ ದೇವಾ ಎಂಬ ಇತರ ಆರು ಮಂದಿ ಹಾಗೂ ದಂತೇವಾಡದಲ್ಲಿ ಐವರು ಶರಣಾಗಿದ್ದು, ಶಸ್ತ್ರಾಸ್ತ್ರ ಹಸ್ತಾಂತರಿಸಿದ್ದಾರೆ.

ಈ ಶರಣಾಗತಿಯೊಂದಿಗೆ ಈವರೆಗೆ ತಮ್ಮ ತಲೆಗೆ ಇನಾಮು ಹೊಂದಿದ್ದ 96 ಮಂದಿ ಸೇರಿ 368 ನಕ್ಸಲರು ಶರಣಾದಂತಾಗಿದೆ. ಹತ್ಯೆಗೀಡಾದ ತಮ್ಮ ಸಹೋದ್ಯೋಗಿಗಳಿಗೆ ಗೌರವ ಸಲ್ಲಿಸಲು ನಕ್ಸಲರು ಜನವರಿ 5ರಿಂದ ಜೂನ್ 1 ರವರೆಗೆ ಜನ್ ಪಿತೂರಿ ವಾರ ಆಚರಿಸುತ್ತಾರೆ. ಈ ಅವಧಿಯಲ್ಲಿ ಯಾವುದೇ ಅಹಿತಕರ ಘಟನೆ ತಡೆಯಲು ಭದ್ರತಾ ಪಡೆಗಳು ಗಸ್ತು ತಿರುಗುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ವಾಸಕ್ಕೊಂದು ಸೂರು ಕೊಡಿ: ಸಿಎಂಗೆ ಸಾಲುಮರದ ತಿಮ್ಮಕ್ಕ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.