ETV Bharat / bharat

ತಮಿಳುನಾಡು: 'ಟ್ರಾನ್ಸ್ ಕಿಚನ್' ರೆಸ್ಟೋರೆಂಟ್ ತೆರೆದ ಮಂಗಳಮುಖಿಯರು - ರೆಸ್ಟೋರೆಂಟ್ ತೆರೆದ ಮಂಗಳಮುಖಿಯರು

ಚೆನ್ನೈನ ಕೊಲತ್ತೂರ್‌ನಲ್ಲಿ ಮೊದಲ ಬಾರಿಗೆ ಮಂಗಳಮುಖಿಯರು "ಟ್ರಾನ್ಸ್ ಕಿಚನ್" ಎಂಬ ರೆಸ್ಟೋರೆಂಟ್ ಅನ್ನು ತೆರೆದಿದ್ದಾರೆ.

Chennai Trans Kitchen opens
'ಟ್ರಾನ್ಸ್ ಕಿಚನ್' ರೆಸ್ಟೋರೆಂಟ್ ತೆರೆದ ಮಂಗಳಮುಖಿಯರು
author img

By

Published : Jan 22, 2023, 9:54 PM IST

ಚೆನ್ನೈ(ತಮಿಳುನಾಡು): ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಪುರುಷರಿಗೆ ಸರಿಸಮಾನವಾಗಿ ನಾನಾ ರೀತಿಯ ಸಾಧನೆ ಮಾಡುತ್ತಿದ್ದಾರೆ. ಅದೇ ರೀತಿ ಸಮಾಜದಲ್ಲಿ ಕೆಲವರಿಂದ ಕಡೆಗಣಿಸಲ್ಪಡುವ ತೃತೀಯ ಲಿಂಗಿಗಳು ನಾವೂ ಸಾಧಿಸಬಲ್ಲೆವು ಎಂದು ಜಗತ್ತಿಗೆ ಅರಿವು ಮೂಡಿಸುತ್ತಿರುವುದನ್ನು ದಿನನಿತ್ಯದ ಸುದ್ದಿಗಳ ಮೂಲಕ ತಿಳಿದುಕೊಳ್ಳುತ್ತಿದ್ದೇವೆ. ಅವರ ಅಭಿವೃದ್ಧಿಗಾಗಿ ಸರ್ಕಾರ ಶಿಕ್ಷಣ, ಉದ್ಯೋಗ ಮತ್ತು ಸಾಲದಂತಹ ನೆರವು ನೀಡುತ್ತಿದೆ. ಈ ಸಂದರ್ಭದಲ್ಲಿ ಮಂಗಳಮುಖಿಯರು ಕೊಳತ್ತೂರ್​​ನಲ್ಲಿ ಖಾಸಗಿ ಚಾರಿಟಬಲ್ ಸಂಸ್ಥೆಯ (ಯುನೈಟೆಡ್ ವೇ ಚೆನ್ನೈ) ಬೆಂಬಲದೊಂದಿಗೆ "ಟ್ರಾನ್ಸ್ ಕಿಚನ್" ಎಂಬ ರೆಸ್ಟೋರೆಂಟ್ ಅನ್ನು ಪ್ರಾರಂಭಿಸಿದ್ದಾರೆ. 'ಕೇವಲ ಕೆಲಸಗಾರರಾಗುವ ಬದಲು ಉದ್ಯೋಗದಾತರಾಗಬಹುದು' ಎಂಬ ಆಶಯದೊಂದಿಗೆ ಈ ರೆಸ್ಟೋರೆಂಟ್ ಅನ್ನು ತೆರೆಯಲಾಗಿದೆ.

Chennai Trans Kitchen opens
'ಟ್ರಾನ್ಸ್ ಕಿಚನ್' ರೆಸ್ಟೋರೆಂಟ್ ತೆರೆದ ಮಂಗಳಮುಖಿಯರು

ನಗರದ ಕೊಳತ್ತೂರಿನ ಜಿಕೆಎಂ ಕಾಲೋನಿಯ 25ನೇ ರಸ್ತೆಯಲ್ಲಿರುವ ಈ ರೆಸ್ಟೊರೆಂಟ್‌ನಲ್ಲಿ ಬೆಳಗ್ಗೆಉಪಹಾರ, ಮಧ್ಯಾಹ್ನ ಬಿರಿಯಾನಿ ಮತ್ತು ಊಟ ನೀಡಲಾಗುತ್ತಿದೆ. ಈ ರೆಸ್ಟೋರೆಂಟ್‌ನಲ್ಲಿ 5 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 10 ಜನರು ಕೆಲಸ ಮಾಡುತ್ತಿದ್ದಾರೆ. ಅಡುಗೆ ಮಾಡುವ ತರಬೇತಿಗೆ ಸಂಬಂಧಿಸಿದಂತೆ, ಆಹಾರ ಉದ್ಯಮದಲ್ಲಿ ಆಸಕ್ತಿ ಹೊಂದಿರುವ ತೃತೀಯ ಲಿಂಗಿಗಳನ್ನು ಆಯ್ಕೆ ಮಾಡಿ ಮೂರು ತಿಂಗಳ ಕಾಲ ವಿಶೇಷ ತರಬೇತಿಯನ್ನು ನೀಡಲಾಗುತ್ತದೆ. ನಂತರ ಅವರು ರೆಸ್ಟೋರೆಂಟ್‌ಗೆ ಸೇರುತ್ತಾರೆ. ಇದಕ್ಕಾಗಿ ಸೈದಾಪೇಟೆಯಲ್ಲಿ ವಿಶೇಷ ತರಬೇತಿ ಕಾರ್ಯಾಗಾರ ನಡೆಸಲಾಗುತ್ತಿದೆ.

ಆಹಾರ ಕ್ಷೇತ್ರದಲ್ಲೂ ಸಾಧನೆ ಮಾಡುವ ಉದ್ದೇಶ: 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಚೆನ್ನೈನ ಟ್ರಾನ್ಸ್‌ ಪರ್ಸನ್ಸ್ ರೈಟ್ಸ್ ಅಸೋಸಿಯೇಷನ್‌ನ ಸಂಸ್ಥಾಪಕ ಮತ್ತು ನಿರ್ದೇಶಕಿ ಜೀವಾ, 'ಲಿಂಗಾಂತರಿಗಳೆಂದರೆ ಸೆಕ್ಸ್ ವರ್ಕ್ ಎಂಬುದು ಜನರ ದೃಷ್ಟಿಕೋನ. ಅದನ್ನು ಬದಲಾಯಿಸಲು ಕೊಯಮತ್ತೂರು ಮತ್ತು ಮಧುರೈನಲ್ಲಿ 'ಟ್ರಾನ್ಸ್ ಕಿಚನ್' ಅನ್ನು ಮೊದಲು ಪ್ರಾರಂಭಿಸಲಾಯಿತು. ಇದರಲ್ಲಿ ಕೆಲಸ ಮಾಡುವ ತೃತೀಯ ಲಿಂಗಿಗಳಿಗೆ ವಿಶೇಷ ತರಬೇತಿ ನೀಡಲಾಗಿದೆ. ಸಾಮಾನ್ಯ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಈ ರೀತಿ ರೆಸ್ಟೋರೆಂಟ್ ತೆರೆದಿದ್ದೇವೆ. ಅಷ್ಟೇ ಅಲ್ಲ, ಟ್ರಾನ್ಸ್‌ಜೆಂಡರ್‌ಗಳು ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು, ಆಹಾರ ಕ್ಷೇತ್ರದಲ್ಲೂ ಸಾಧನೆ ಮಾಡುವ ಉದ್ದೇಶದಿಂದ ಇದನ್ನು ಆರಂಭಿಸಲಾಗಿದೆ' ಎಂದರು.

ಇದನ್ನೂ ಓದಿ: ಬಾಲಿವುಡ್ ಡ್ಯಾನ್ಸ್​ನತ್ತ ಮಂಗಳಮುಖಿಯರ ಆಕರ್ಷಣೆ.. ಮಂಗಳೂರಿನಲ್ಲಿ ನಿತ್ಯ ತರಬೇತಿ

ಆಸಕ್ತಿ ಇರುವ ಕ್ಷೇತ್ರಗಳಲ್ಲಿ ತರಬೇತಿ: ಆಹಾರೋದ್ಯಮದಲ್ಲಿ ಆಸಕ್ತಿ ಇರುವ 60 ಜನ ತೃತೀಯ ಲಿಂಗಿಗಳನ್ನು ಆಯ್ಕೆ ಮಾಡಿ ಅದರಲ್ಲಿ ಮತ್ತೆ ಉತ್ತಮ ಪ್ರದರ್ಶನ ನೀಡಿದ 20 ಜನರನ್ನು ಆಯ್ಕೆ ಮಾಡಲಾಗಿತ್ತು. ಬಳಿಕ ಹತ್ತು ಜನರನ್ನು ಅಂತಿಮವಾಗಿ ಕೆಲಸಕ್ಕೆ ಆಯ್ಕೆ ಮಾಡಲಾಗುತ್ತದೆ. ಇವರು ಮೂರು ತಿಂಗಳ ವಿಶೇಷ ತರಬೇತಿಯ ನಂತರ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಲ್ಲದೇ ತೃತೀಯ ಲಿಂಗಿಗಳಿಗೆ ಆಸಕ್ತಿ ಇರುವ ಕ್ಷೇತ್ರಗಳಲ್ಲಿ ತರಬೇತಿ ನೀಡಲಿದ್ದೇವೆ ಎಂದರು.

ಇದನ್ನೂ ಓದಿ: 'ಕೋವಾಯ್ ಟ್ರಾನ್ಸ್ ಕಿಚನ್' ಉಪಹಾರ ಗೃಹ ತೆರೆದ ಮಂಗಳಮುಖಿಯರು!

ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುವ ತಮರೈಚೆಲ್ವಿ ಎಂಬ ತೃತೀಯಲಿಂಗಿ ಮಾತನಾಡಿ, 'ಮೊದಲಿಗೆ ನಾನು ಅಂಗಡಿಗಳಿಗೆ ಹೋಗಿ ಹಣ ಸಂಗ್ರಹಿಸುತ್ತಿದ್ದೆ. ನಂತರ ತೃತೀಯಲಿಂಗಿಗಳ ವಿಶೇಷ ಹಾಸ್ಟೆಲ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದೆ. ಆ ನಂತರ ಈ ರೆಸ್ಟೋರೆಂಟ್ ಮೂಲಕ ಅವಕಾಶ ಸಿಕ್ಕಿತು. ಸದ್ಯ ಈ ರೆಸ್ಟೋರೆಂಟ್ ನಲ್ಲಿ ಅಡುಗೆ ಮಾಡುತ್ತಿರುವುದು ನಾನೇ. ಇದರಿಂದ ಸಾಕಷ್ಟು ಆದಾಯ ಬರುತ್ತಿದೆ. ಅಂಗಡಿಯಿಂದ ಅಂಗಡಿಗೆ ಹೋಗಿ ಹಣ ಸಂಗ್ರಹಿಸುವಾಗ ಐಷಾರಾಮಿ ಜೀವನ ನಡೆಸುತ್ತಿದ್ದೆವು. ಈಗ ನಾವು ಕಡಿಮೆ ಐಷಾರಾಮಿಯೊಂದಿಗೆ ಗೌರವಯುತ ಜೀವನವನ್ನು ನಡೆಸುತ್ತಿದ್ದೇವೆ' ಎಂದರು.

ಇದನ್ನೂ ಓದಿ: ತೃತೀಯ ಲಿಂಗಿಗಳ ರಾಷ್ಟ್ರಮಟ್ಟದ ಸಮಾವೇಶ: ಕಲಶಯಾತ್ರೆಯಲ್ಲಿ ಹೆಜ್ಜೆ ಹಾಕಿದ ಮಂಗಳಮುಖಿಯರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.