ETV Bharat / bharat

ಇಂದಿನಿಂದ ಕಠಿಣ ನಿಯಮಗಳೊಂದಿಗೆ ಚೆನ್ನೈ ಸಬ್​ ಅರ್ಬನ್​ ರೈಲು ಸೇವೆ ಪುನಾರಂಭ - ತಮಿಳುನಾಡು ಲಾಕ್​ಡೌನ್​

ಕೇವಲ ಮುಂಚೂಣಿ ಕಾರ್ಮಿಕರಿಗೆ ಮಾತ್ರ ಚೆನ್ನೈ ಉಪನಗರ ರೈಲುಗಳಲ್ಲಿ ಸಂಚರಿಸಲು ಅವಕಾಶ ನೀಡಿದ್ದ ತಮಿಳುನಾಡು ಸರ್ಕಾರ ಇಂದಿನಿಂದ ನಿರ್ದಿಷ್ಟ ವರ್ಗದ ಪ್ರಯಾಣಿಕರೊಂದಿಗೆ ಸಬ್​ ಅರ್ಬನ್ ರೈಲು ಸೇವೆ ಪುನಾರಂಭಿಸುತ್ತಿದೆ.

Suburban train system
ಚೆನ್ನೈ ಸಬ್​ ಅರ್ಬನ್​ ರೈಲು ಸೇವೆ ಪುನಾರಂಭ
author img

By

Published : Jun 25, 2021, 7:41 AM IST

ಚೆನ್ನೈ (ತಮಿಳುನಾಡು): ಜೂನ್ 20 ರಂದು ಹೊರಡಿಸಲಾದ ತಮಿಳುನಾಡು ಸರ್ಕಾರದ ಲಾಕ್‌ಡೌನ್ ಮಾರ್ಗಸೂಚಿಗಳಿಗೆ ಅನುಸಾರವಾಗಿ ಚೆನ್ನೈ ಉಪನಗರ (ಸಬ್​ ಅರ್ಬನ್​) ರೈಲು ಸೇವೆಯನ್ನು ಪುನಾರಂಭಿಸುವಂತೆ ದಕ್ಷಿಣ ರೈಲ್ವೆ ಘೋಷಿಸಿದೆ. ಇಂದಿನಿಂದ ಸಬ್​ ಅರ್ಬನ್ ರೈಲುಗಳು ಸೀಮಿತ ಪ್ರಯಾಣಿಕರ ಸಾಮರ್ಥ್ಯದೊಂದಿಗೆ ಸಂಚಾರ ನಡೆಸಲಿವೆ.

ಕೋವಿಡ್​ ಎರಡನೇ ಅಲೆ ಉಲ್ಬಣಗೊಂಡ ಕಾರಣ ಲಾಕ್​ಡೌನ್​ ಘೋಷಿಸಿದ್ದ ತಮಿಳುನಾಡು ಸರ್ಕಾರ ಉಪನಗರ ರೈಲು ಸೇವೆಯನ್ನು ಸ್ಥಗಿತಗೊಳಿಸಿತ್ತು. ಕೋವಿಡ್​ ಹೋರಾಟದಲ್ಲಿನ ಮುಂಚೂಣಿ ಕಾರ್ಮಿಕರಿಗಾಗಿ ಮಾತ್ರ ಕೆಲವೇ ರೈಲುಗಳು ಸಂಚರಿಸಲು ಅವಕಾಶ ಮಾಡಿಕೊಟ್ಟಿತ್ತು. ಆದರೆ ಇದೀಗ ಕಠಿಣ ನಿಯಮಗಳೊಂದಿಗೆ ನಿರ್ದಿಷ್ಟ ವರ್ಗದ ಪ್ರಯಾಣಿಕರಿಗೆ ಸಂಚಾರಕ್ಕೆ ಅನುಮತಿ ನೀಡಿದೆ. ಆ ನಿಯಮಗಳು ಈ ಕೆಳಕಂಡಂತಿವೆ.

  • ರೈಲ್ವೆ ನಿಲ್ದಾಣದ ಆವರಣ ಅಥವಾ ರೈಲಿನಲ್ಲಿ ಮಾಸ್ಕ್ ಇಲ್ಲದೇ ಪ್ರವೇಶಿಸಿದವರಿಗೆ 500 ರೂ. ದಂಡ
  • ರೈಲುಗಳು ಹತ್ತುವಾಗ, ಇಳಿಯುವಾಗ ಜನಸಂದಣಿಯಾಗದಂತೆ ಕ್ರಮ
  • ಅಗತ್ಯಕ್ಕೆ ಅನುಗುಣವಾಗಿ ವಿಶೇಷ ಟಿಕೆಟ್​ಗಳೊಂದಿಗೆ ಎಲ್ಲಾ ಮಹಿಳೆಯರಿಗೆ ರೈಲುಗಳಲ್ಲಿ ಪ್ರಯಾಣಿಸಲು ಅವಕಾಶ
  • ಮಹಿಳಾ ಪ್ರಯಾಣಿಕರೊಂದಿಗೆ ಹೋದರೆ ಮಾತ್ರ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ರೈಲು ಹತ್ತಬಹುದು
  • ಸರ್ಕಾರಿ ಹಾಗೂ ಖಾಸಗಿ ನೌಕರರು ತಮ್ಮ ಗುರುತಿನ ಚೀಟಿ ತೋರಿಸಿ ಸಂಚರಿಸಬಹುದು
  • ಮೇಲ್ ಅಥವಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣ ಬೆಳೆಸುವವರಿಗೆ ಸಿಂಗಲ್​ ಟಿಕೆಟ್​ ನೀಡಲಾಗುತ್ತದೆ. ಇವರು ಒನ್​ ವೇ ಜರ್ನಿ ಮಾತ್ರ ಮಾಡಬಹುದು
  • ಈ ಮೇಲಿನ ಎರಡು ಕೆಟಗರಿ ಹೊರತುಪಡಿಸಿ, ಪುರುಷರು ಬೆಳಗ್ಗೆ 7 ರಿಂದ ಸಂಜೆ 7 ಗಂಟೆಯ ವರೆಗೆ ಮಾತ್ರ ರೈಲಿನಲ್ಲಿ ಸಂಚರಿಸಬಹುದು
  • ಕೋವಿಡ್​ ಸೋಂಕಿತರು ಅಥವಾ ಲಕ್ಷಣವುಳ್ಳವರಿಗೆ ಪ್ರಯಾಣ ನಿಷಿದ್ಧ

ತಮಿಳುನಾಡಿನಲ್ಲಿ ಈವರೆಗೆ 24.4 ಲಕ್ಷ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 31,746 ಜನರು ಮೃತಪಟ್ಟಿದ್ದಾರೆ. ಜೂನ್​ 28ರವರೆಗೆ ಲಾಕ್​ಡೌನ್​ ಜಾರಿಯಲ್ಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.