ಚೆನ್ನೈ(ತಮಿಳುನಾಡು): ಪತಿ ಮತ್ತು ಪತ್ನಿಯರಿಬ್ಬರೂ ತಮ್ಮ 14 ವರ್ಷದ ವಿಶೇಷ ಚೇತನ ಮಗನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಚೆನ್ನೈ ನಗರದ ಅವಡಿ ಎಂಬಲ್ಲಿ ಶುಕ್ರವಾರ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಕೊಂಡಿದ್ದ ಮೊಹಮದ್ ಸಲೀಂ (44) ಮತ್ತು ಆತನ ಪತ್ನಿ ಸೋಫಿಯಾ (37) ತಮ್ಮ ಮಗನನ್ನು ಕೊಂದು ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗನಿಗೆ ಮಾತು ಬರುತ್ತಿರಲಿಲ್ಲ ಮತ್ತು ಕಿವಿ ಕೇಳುತ್ತಿರಲಿಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಈ ಗ್ರಾಮದಲ್ಲಿ ಮೂಲಸೌಕರ್ಯದ ಕೊರತೆ: ಕುಡಿಯುವ ನೀರು, ರಸ್ತೆ ಸಮಸ್ಯೆ
ಆತ್ಮಹತ್ಯೆಗೂ ಮುನ್ನ ಮೊಹಮದ್ ಸಲೀಂ ತನ್ನ ಸಹೋದರಿ ಸಲೀಮಾಗೆ ಸಂದೇಶವೊಂದನ್ನು ಕಳುಹಿಸಿದ್ದು, ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
ಮಗನ ಸ್ಥಿತಿಯಿಂದ ಪೋಷಕರು ತುಂಬಾ ನೊಂದಿದ್ದು, ಈ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಿಲ್ಪೌಕ್ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಕಳುಹಿಸಲಾಗಿದೆ.