ETV Bharat / bharat

ಮೃತಪಟ್ಟ ವಿವಾಹಿತ ಪುತ್ರನ ಆಸ್ತಿಯಲ್ಲಿ ತಾಯಿಗೆ ಪಾಲಿಲ್ಲ: ಮದ್ರಾಸ್​ ಹೈಕೋರ್ಟ್​ ಮಹತ್ವದ ತೀರ್ಪು - ಮದ್ರಾಸ್​ ಹೈಕೋರ್ಟ್​ ಆದೇಶ

ವಿವಾಹಿತ ಪುತ್ರ ಸಾವನ್ನಪ್ಪಿದಲ್ಲಿ ಆತನ ಆಸ್ತಿ ತಾಯಿಗೆ ಸೇರಬೇಕೆ ಅಥವಾ ವಿಧವೆ ಪತ್ನಿಯ ಪಾಲಾಗಬೇಕೇ ಎಂಬ ಬಗ್ಗೆ ಮದ್ರಾಸ್​ ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ.

ಮದ್ರಾಸ್​ ಹೈಕೋರ್ಟ್​ ಮಹತ್ವದ ತೀರ್ಪು
ಮದ್ರಾಸ್​ ಹೈಕೋರ್ಟ್​ ಮಹತ್ವದ ತೀರ್ಪು
author img

By ETV Bharat Karnataka Team

Published : Nov 18, 2023, 9:11 PM IST

ಚೆನ್ನೈ (ತಮಿಳುನಾಡು) : ಆಸ್ತಿ ವಿವಾದದ ಕುರಿತು ಮದ್ರಾಸ್​ ಹೈಕೋರ್ಟ್​ ಮಹತ್ವದ ತೀರ್ಪೊಂದನ್ನು ಶನಿವಾರ ನೀಡಿದೆ. ಅನಾರೋಗ್ಯಕ್ಕೀಡಾಗಿ ಮೃತಪಟ್ಟ ಮಗನ ಆಸ್ತಿಗೆ ತಾಯಿ ವಾರಸುದಾರರಲ್ಲ. ಬದಲಿಗೆ ಆತನ ಪತ್ನಿ ಅಥವಾ ಮಕ್ಕಳಿಗೆ ಆಸ್ತಿ ಸೇರುತ್ತದೆ ಎಂದು ಆದೇಶ ನೀಡಿದೆ.

ಭಾರತೀಯ ಉತ್ತರಾಧಿಕಾರಿ ಕಾಯ್ದೆಯ ಪ್ರಕಾರ, ವಿವಾಹಿತ ವ್ಯಕ್ತಿ ಸಾವನ್ನಪ್ಪಿದ್ದಲ್ಲಿ ಆತನ ಸಂಪೂರ್ಣ ಆಸ್ತಿಯು ಪತ್ನಿ ಮತ್ತು ಮಕ್ಕಳಿಗೆ ಸೇರುತ್ತದೆ. ಇವರು ಇಲ್ಲದಿದ್ದಲ್ಲಿ ತಂದೆ ಅದರ ವಾರಸುದಾರಿಕೆ ಪಡೆಯುತ್ತಾರೆ. ತಂದೆ ಅಗಲಿದಲ್ಲಿ ತಾಯಿ ಅಥವಾ ಆತನ ಸಹೋದರ, ಸಹೋದರಿಯರು ಆಸ್ತಿಗೆ ವಾರಸುದಾರರು ಆಗಬಹುದಾಗಿದೆ ಎಂಬುದನ್ನು ಉಲ್ಲೇಖಿಸಿದೆ.

ಪ್ರಕರಣವೇನು?: ನಾಗಪಟ್ಟಣಂನ ಮೋಸೆಸ್​ ಎಂಬುವರು 2004 ರಲ್ಲಿ ವಿವಾಹವಾಗಿದ್ದರು. ಅವರಿಗೆ ಪತ್ನಿ ಮತ್ತು ಓರ್ವ ಮಗಳಿದ್ದಾಳೆ. 2012 ರಲ್ಲಿ ಮೋಸೆಸ್​ ಅವರು ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದರು. ಇದಾದ ಬಳಿಕ ಅವರ ಆಸ್ತಿ ವಿಚಾರವಾಗಿ ಪತ್ನಿ ಮತ್ತು ಅತ್ತೆ (ಮೋಸೆಸ್​ ತಾಯಿ) ಮಧ್ಯೆ ವಿವಾದ ಉಂಟಾಗಿತ್ತು. ಮಗನ ಆಸ್ತಿಯಲ್ಲಿ ತಮಗೂ ಪಾಲು ಬರಬೇಕು ಎಂದು ತಾಯಿಯ ವಾದವಾಗಿತ್ತು. ಆದರೆ ಪತಿಯ ಆಸ್ತಿ ತನಗೆ ಸೇರಬೇಕು ಎಂದು ಪತ್ನಿ ಮೇರಿಯ ವಾದ.

ಪ್ರಕರಣ ನಾಗಪಟ್ಟಣಂ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಮೋಸೆಸ್ ಅವರು ತನ್ನೆಲ್ಲಾ ಆಸ್ತಿ ಪತ್ನಿ, ಮಗಳಿಗೆ ಸೇರಬೇಕು ಎಂದು ಉಯಿಲು ಬರೆದಿಲ್ಲ. ಹೀಗಾಗಿ ಮೋಸೆಸ್ ಅವರ ಆಸ್ತಿಯಲ್ಲಿ ಪಾಲು ತೆಗೆದುಕೊಳ್ಳುವ ಹಕ್ಕು ಅವರ ತಾಯಿಗೂ ಇದೆ ಎಂದು ಆದೇಶ ನೀಡಿತ್ತು.

ಜಿಲ್ಲಾ ಕೋರ್ಟ್​ ತೀರ್ಪು ವಿರುದ್ಧ ಮೇಲ್ಮನವಿ: ಮೃತ ಮೋಸೆಸ್ ಅವರ ಪತ್ನಿ ಆಗ್ನೆಸ್ ಮೇರಿ ಅವರು ಜಿಲ್ಲಾ ನ್ಯಾಯಾಲಯದ ತೀರ್ಪಿನ ವಿರುದ್ಧ ಮದ್ರಾಸ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣ ನ್ಯಾಯಮೂರ್ತಿಗಳಾದ ಆರ್.ಸುಬ್ರಮಣಿಯನ್ ಮತ್ತು ಎನ್.ಸೆಂಥಿಲ್​ಕುಮಾರ್ ಅವರಿದ್ದ ಪೀಠದ ಮುಂದೆ ವಿಚಾರಣೆಗೆ ಬಂದಿತು. ನಂತರ ನ್ಯಾಯಾಧೀಶರು ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಾಯ ಮಾಡಲು ಹಿರಿಯ ವಕೀಲ ಪಿಎಸ್ ಮಿತ್ರಾ ನೇಶಾ ಅವರನ್ನು ನೇಮಿಸಿತ್ತು.

ಹಿರಿಯ ವಕೀಲ ಪಿ.ಎಸ್.ಮಿತ್ರಾ ನೇಶ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್​ಗೆ ವರದಿ ನೀಡಿದ್ದು, ಉತ್ತರಾಧಿಕಾರಿ ಕಾಯ್ದೆಯ ಕಲಂ 42ರ ಪ್ರಕಾರ ಪತಿ ಮೃತಪಟ್ಟರೆ ಆತನ ವಿಧವೆ ಪತ್ನಿ ಮತ್ತು ಮಕ್ಕಳಿಗೆ ಆಸ್ತಿ ಪರಭಾರೆ ಆಗಬೇಕು. ಹೆಂಡತಿ ಅಥವಾ ಮಕ್ಕಳು ಇಲ್ಲದಿದ್ದರೆ, ತಂದೆ ಆಸ್ತಿಗೆ ಉತ್ತರಾಧಿಕಾರಿಯಾಗುತ್ತಾರೆ. ತಂದೆ ಇಲ್ಲದಿದ್ದರೆ, ತಾಯಿ, ಸಹೋದರರು ಮತ್ತು ಸಹೋದರಿಯರು ಆಸ್ತಿಗೆ ಉತ್ತರಾಧಿಕಾರಿಯಾಗುತ್ತಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದರು.

ತಾಯಿಗೆ ಆಸ್ತಿ ಸೇರಲ್ಲ: ಇದನ್ನು ಪರಿಗಣಿಸಿದ ಹೈಕೋರ್ಟ್ ಪೀಠ, ವಿವಾಹಿತ ಮಗ ಸತ್ತಿದ್ದರಿಂದ, ಆಸ್ತಿಯಲ್ಲಿ ಪಾಲು ಕೇಳಲು ತಾಯಿಗೆ ಯಾವುದೇ ಹಕ್ಕಿಲ್ಲ. ಆಸ್ತಿಯು ಪತ್ನಿ ಆಗ್ನೆಸ್ ಮತ್ತು ಮಗಳಿಗೆ ಮಾತ್ರ ಸಲ್ಲಬೇಕು ಎಂದು ತೀರ್ಪು ನೀಡಿತು. ಜೊತೆಗೆ ನಾಗಪಟ್ಟಣಂ ಜಿಲ್ಲಾ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಗೊಳಿಸಿತು.

ಇದನ್ನೂ ಓದಿ: ಪುತ್ರನ ಪಾಲಿನ ಪಿತ್ರಾರ್ಜಿತ ಆಸ್ತಿಯಲ್ಲಿ ತಾಯಿಗೂ ಪಾಲು: ಹೈಕೋರ್ಟ್ ಮಹತ್ವದ ಆದೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.