ಚೆನ್ನೈ(ತಮಿಳುನಾಡು): ಫೆಡ್‌ಬ್ಯಾಂಕ್‌ನ 15 ಕೋಟಿ ರೂ.ಮೌಲ್ಯದ ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಚರಪ್ಪಕ್ಕಂ ಪೊಲೀಸ್ ಇನ್ಸ್‌ಪೆಕ್ಟರ್ ಅಮಲ್‌ರಾಜ್ ಅವರನ್ನು ಅಮಾನತುಗೊಳಿಸಲಾಗಿದೆ.
ಫೆಡ್‌ಬ್ಯಾಂಕ್‌ನ ಅರುಂಬಕ್ಕಂ ಶಾಖೆಯಲ್ಲಿ ಚಿನ್ನದ ದರೋಡೆಗೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳಾದ ಸಂತೋಷ್ ಮತ್ತು ಬಾಲಾಜಿ ಅವರ ಹೇಳಿಕೆ ಆಧಾರದ ಮೇಲೆ ಆಚರಪಕ್ಕಂ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಅಮಲ್‌ರಾಜ್ ಅವರನ್ನು ಬಂಧಿಸಲಾಗಿದೆ. ಇವರು ಬಂಧಿತ ಆರೋಪಿ ಸಂತೋಷ್ ಸಂಬಂಧಿ ಎನ್ನಲಾಗಿದೆ.
ಎಗ್ಮೋರ್‌ನ 5ನೇ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಬುಧವಾರ ಸಂತೋಷ್ ಮತ್ತು ಬಾಲಾಜಿಯನ್ನು ವಿಚಾರಣೆಗಾಗಿ ಐದು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ. ಕದ್ದ ಚಿನ್ನದ ಉಳಿದ ಭಾಗವನ್ನು ಅಮಲರಾಜ್ ಮನೆಯಲ್ಲಿ ಬಚ್ಚಿಟ್ಟಿರುವುದಾಗಿ ಸಂತೋಷ್ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾನೆ. ಅಧಿಕಾರಿಗಳು ಅಮಲ್‌ರಾಜ್ ಮನೆಗೆ ಧಾವಿಸಿ 3.5 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಮೂಲಗಳ ಪ್ರಕಾರ, ಕಳ್ಳತನದಲ್ಲಿ ಅಮಲ್‌ರಾಜ್ ಪಾತ್ರವನ್ನು ತಿಳಿಯಲು ಪೊಲೀಸರು ವಿಚಾರಣೆ ನಡೆಸಿದರು. ಈ ಬಗ್ಗೆ ಚೆನ್ನೈ ಪೊಲೀಸ್ ಕಮಿಷನರ್ ಶಂಕರ್ ಜಿವಾಲ್ ಅವರು ಪ್ರತಿಕ್ರಿಯಿಸಿದ್ದು, ಶಂಕಿತರು ಶಾಲೆಯಿಂದಲೇ ಒಬ್ಬರಿಗೊಬ್ಬರು ತಿಳಿದಿದ್ದರು. ಪ್ರಾಥಮಿಕ ತನಿಖೆಯಿಂದ 10 ದಿನಗಳ ಹಿಂದೆ ದರೋಡೆಗೆ ಪ್ಲಾನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಬ್ಯಾಂಕ್ನಲ್ಲಿ ಹಾಡಹಗಲೇ ಭಾರಿ ದರೋಡೆ.. ಸಿಬ್ಬಂದಿ ಕೂಡಿ ಹಾಕಿ 32 ಕೆಜಿ ಚಿನ್ನದೊಂದಿಗೆ ಖದೀಮರು ಎಸ್ಕೇಪ್