ETV Bharat / bharat

ಕೇರಳ ಸಿಎಂ ಪಿಣರಾಯಿ ವಿಜಯನ್​ಗೆ ಕೋವಿಡ್​ ಪಾಸಿಟಿವ್​ ದೃಢ - ಕೇರಳ ಸಿಎಂ ಪಿಣರಾಯಿ ವಿಜಯನ್​ಗೆ ಕೋವಿಡ್​

2ನೇ ಹಂತದ ಮಹಾಮಾರಿ ಕೊರೊನಾ ಅಲೆ ಜೋರಾಗಿದ್ದು, ಇದೀಗ ಕೇರಳದ ಮುಖ್ಯಮಂತ್ರಿಗೂ ಸೋಂಕು ತಗುಲಿದೆ.

Pinarayi Vijayan
Pinarayi Vijayan
author img

By

Published : Apr 8, 2021, 6:51 PM IST

Updated : Apr 8, 2021, 10:57 PM IST

ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರಿಗೆ ಕೋವಿಡ್​ ಪಾಸಿಟಿವ್​ ದೃಢಪಟ್ಟಿದೆ. ಕೊರೊನಾ ಹಿನ್ನೆಲೆಯಲ್ಲಿ ಅವರನ್ನು ಕೊಯಿಕ್ಕೋಡ್​ನ ಮೆಡಿಕಲ್​ ಕಾಲೇಜಿಗೆ ದಾಖಲಿಸಲಾಗಿದೆ.

  • I have been confirmed Covid +ve. Will get treated at the Government Medical College, Kozhikkode. Request those who have been in contact with me recently to go into self observation.

    — Pinarayi Vijayan (@vijayanpinarayi) April 8, 2021 " class="align-text-top noRightClick twitterSection" data=" ">

ವೈದ್ಯರ ಸಲಹೆ ಮೆರೆಗೆ ವಿಜಯನ್​ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೇರಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಅವರು ಪ್ರಚಾರದಲ್ಲಿ ಭಾಗಿಯಾಗಿದ್ದರು. ಕಳೆದ ಒಂದು ದಿನದ ಹಿಂದೆಯಷ್ಟೇ ಪಿಣರಾಯಿ ವಿಜಯನ್​​​​ ಕೋವಿಡ್​ ವ್ಯಾಕ್ಸಿನ್​ ಸಹ ಪಡೆದುಕೊಂಡಿದ್ದರು. ಈ ಮಧ್ಯೆ ಅವರ ಪುತ್ರಿ ವೀಣಾ ವಿಜಯನ್​ ಅವರಿಗೂ ಕೊರೊನಾ ಪಾಸಿಟಿವ್​ ದೃಢಪಟ್ಟಿದೆ.

ತಮಗೆ ಕೋವಿಡ್​ ಸೋಂಕು ತಗುಲಿರುವ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ, ಕಳೆದ ಕೆಲ ದಿನಗಳಿಂದ ತಮ್ಮ ಸಂಪರ್ಕಕ್ಕೆ ಬಂದಿರುವವರು ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಕೇರಳದ 140 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಈಗಾಗಲೇ ಚುನಾವಣೆ ನಡೆದಿದ್ದು, ಮುಂದಿನ ತಿಂಗಳು ಮೇ. 2ರಂದು ಫಲಿತಾಂಶ ಬಹಿರಂಗಗೊಳ್ಳಲಿದೆ.

ಇದರ ಮಧ್ಯೆ ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್​ ಮುಖಂಡ ಉಮನ್​ ಚಾಂಡಿಗೂ ಕೊರೊನಾ ಸೋಂಕು ತಗುಲಿದ್ದು ದೃಢಗೊಂಡಿದೆ.

Last Updated : Apr 8, 2021, 10:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.