ETV Bharat / bharat

ಅಡುಗೆಯಲ್ಲಿ ವಿಶ್ವದಾಖಲೆ ಬರೆದ ಲತಾ ಟಂಡನ್ ಕೌಟುಂಬಿಕ ಕಲಹ: ಪತಿ ವಿರುದ್ಧ ಗಂಭೀರ ಆರೋಪ - ಪತಿಯ ಮೇಲೆ ಗಂಭೀರ ಆರೋಪ ಮಾಡಿದ ಲತಾ ಟಂಡನ್

ಅಡುಗೆಯಲ್ಲಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ ಸೃಷ್ಟಿಸಿರುವ ಲತಾ ಟಂಡನ್ ಅವರು ಮಧ್ಯಪ್ರದೇಶದ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಪತಿ ಮೋಹಿತ್ ಟಂಡನ್ ವಿರುದ್ಧ ದೂರು ನೀಡಿದ್ದಾರೆ.

chef lata tandon domestic violence filed  against her husband
ಅಡುಗೆಯಲ್ಲಿ ವಿಶ್ವದಾಖಲೆ ಬರೆದ ಲತಾ ಟಂಡನ್ ಅವರ ಕೌಟುಂಬಿಕ ಕಲಹ: ಪತಿಯ ಮೇಲೆ ಗಂಭೀರ ಆರೋಪ
author img

By

Published : Mar 28, 2022, 2:08 PM IST

ರೇವಾ(ಮಧ್ಯಪ್ರದೇಶ): ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆಯೊಂದನ್ನು ಸೃಷ್ಟಿಸಿರುವ ಚೆಫ್ ಲತಾ ಟಂಡನ್ ತಮ್ಮ ಪತಿ ಮೋಹಿತ್ ಟಂಡನ್ ವಿರುದ್ಧ ಮಧ್ಯಪ್ರದೇಶದ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೋಹಿತ್ ಟಂಡನ್ ಬೇರೆ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದು, ವಿಚ್ಛೇದನ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಇದರ ಜೊತೆಗೆ ಕಿರುಕುಳ ನೀಡುತ್ತಿದ್ದು, ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಲತಾ ಟಂಡನ್ ಒತ್ತಾಯಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಲತಾ ಟಂಡನ್ ಅವರು ಪತಿ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಅಶ್ಲೀಲ ಪದಗಳನ್ನು ಬಳಸಿ ನಿಂದಿಸಿ ನನ್ನನ್ನು ಮನೆಯಿಂದ ಹೊರಹಾಕಲಾಗಿದೆ. ವಿವಾಹಿತ ಮಹಿಳೆಯೊಂದಿಗೆ ಮೋಹಿತ್ ನಾಲ್ಕು ತಿಂಗಳಿನಿಂದ ಅಕ್ರಮ ಸಂಬಂಧ ಹೊಂದಿದ್ದಾರೆ. ಈ ವಿಷಯ ತಿಳಿದಾಗ ಮನೆಯವರು ಮೋಹಿತ್‌ಗೆ ಮನವರಿಕೆ ಮಾಡಿಕೊಡಲು ಯತ್ನಿಸಿದ್ದಾರೆ. ಆದರೂ, ಆತ ಯಾರ ಮಾತಿಗೂ ಬೆಲೆ ಕೊಡಲಿಲ್ಲ. ನನಗೆ ನಿರಂತರವಾಗಿ ಬೆದರಿಕೆ ಹಾಕಲಾಗುತ್ತಿದೆ ಎಂದು ಲತಾ ಟಂಡನ್ ಆರೋಪಿಸಿದ್ದಾರೆ.

ಲತಾ ಟಂಡನ್ ಅವರು ಅತಿ ಹೆಚ್ಚು ಸಮಯ ನಿರಂತರವಾಗಿ ಅಡುಗೆ ಮಾಡುವ ಮೂಲಕ ವಿಶ್ವದಾಖಲೆ ಮಾಡಿದ್ದಾರೆ. ವರ್ಷಗಳ ಹಿಂದೆ ನಿರಂತರವಾಗಿ 85 ಗಂಟೆಗಳ ಕಾಲ ಅಡುಗೆ ಮಾಡುವ ಮೂಲಕ ಈ ಸಾಧನೆ ಮಾಡಿದ್ದರು. ಮಧ್ಯಪ್ರದೇಶದ ರೇವಾದಲ್ಲಿ ರೇವಾದಲ್ಲಿ ಲಾಂಗೆಸ್ಟ್ ಕುಕಿಂಗ್ ಮ್ಯಾರಥಾನ್ ನಡೆದಿದ್ದು, ರೇವಾದಲ್ಲಿ ಲಾಂಗೆಸ್ಟ್ ಕುಕಿಂಗ್ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಕಡೆಯಿಂದ ಲತಾ ಟಂಡನ್ ಪ್ರಮಾಣ ಪತ್ರ ಕೂಡಾ ಪಡೆದಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ ವಿಧಾನಸಭೆ ಕಲಾಪದಲ್ಲಿ ಭಾರಿ ಗದ್ದಲ - ಕೋಲಾಹಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.