ETV Bharat / bharat

4 ಮುದ್ದಾದ ಚೀತಾ ಮರಿಗಳಿಗೆ ಜನ್ಮ ನೀಡಿದ 'ಸಿಯಾಯಾ': ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಸಂಭ್ರಮ - Cheetah Cubs

ಇತ್ತೀಚಿಗೆ ಮೂತ್ರಪಿಂಡ ಸಮಸ್ಯೆಯಿಂದ ಸಾಶಾ ಎಂಬ ಚೀತಾ ಸಾವನ್ನಪ್ಪಿತ್ತು, ಇದಾದ ಮೂರು ದಿನಗಳ ಬಳಿಕ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಹೆಣ್ಣು ಚೀತಾವೊಂದು 4 ಮರಿಗಳಿಗೆ ಜನ್ಮ ನೀಡಿದೆ.

cheetah-cubs-born-in-kuno-national-park
4 ಮುದ್ದಾದ ಚೀತಾ ಮರಿಗಳಿಗೆ ಜನ್ಮ ನೀಡಿದ 'ಸಿಯಾಯಾ': ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಸಂಭ್ರಮ
author img

By

Published : Mar 29, 2023, 7:47 PM IST

ಬೋಪಾಲ್​ (ಮಧ್ಯಪ್ರದೇಶ): ನಮೀಬಿಯಾದಿಂದ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾದ 8 ಚೀತಾಗಳಲ್ಲಿ ಸಿಯಾಯಾ ಎಂಬ ಚೀತಾ ನಾಲ್ಕು ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ. ಈ ಬಗ್ಗೆ ಕೇಂದ್ರ ಪರಿಸರ ಸಚಿವ ಭೂಪೇಂದರ್​ ಯಾದವ್​ ಬುಧವಾರ ತಮ್ಮ ಟ್ವಿಟ್ಟರ್​ ಮೂಲಕ ಮಾಹಿತಿ ಹಂಚಿಕೊಂಡಿದ್ದು, ‘ಅಮೃತ್​ ಕಾಲ’ ಸಮಯದಲ್ಲಿ ಭಾರತದ ವನ್ಯಜೀವಿ ಸಂರಕ್ಷಣಾ ಇತಿಹಾಸದಲ್ಲಿ ಮಹತ್ವದ ಘಟನೆ ನಡೆದಿದೆ ಎಂದು ಬಣ್ಣಿಸಿದ್ದಾರೆ.

"ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ 2022ರ ಸಪ್ಟೆಂಬರ್​ 17 ರಂದು ಭಾರತಕ್ಕೆ ಸ್ಥಳಾಂತರಗೊಂಡ ಚೀತಾಗಳಲ್ಲಿ ಒಂದು ಚೀತಾಗೆ ನಾಲ್ಕು ಮರಿಗಳು ಜನಿಸಿದವು ಎಂದು ಹಂಚಿಕೊಳ್ಳಲು ನಾನು ಸಂತೋಷಪಡುತ್ತೇನೆ" ಎಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್​ ಟ್ವೀಟ್​​ ಮಾಡಿದ್ದಾರೆ. ಜತೆಗೆ ಪ್ರಾಜೆಕ್ಟ್​ ಚೀತಾದ ಸಂಪೂರ್ಣ ತಂಡವನ್ನು ಸಚಿವರು ಅಂಭಿನಂದಿಸಿದರು.

  • Congratulations 🇮🇳

    A momentous event in our wildlife conservation history during Amrit Kaal!

    I am delighted to share that four cubs have been born to one of the cheetahs translocated to India on 17th September 2022, under the visionary leadership of PM Shri @narendramodi ji. pic.twitter.com/a1YXqi7kTt

    — Bhupender Yadav (@byadavbjp) March 29, 2023 " class="align-text-top noRightClick twitterSection" data=" ">

ಪಿಎಂ ಮೋದಿ ಜನ್ಮದಿನದಂದು ಬಂದಿದ್ದ ಎಂಟು ಚಿರತೆಗಳು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾದ 'ಚೀತಾ ಮರು ಪರಿಚಯ' ಎಂಬ ಯೋಜನೆ ಅಡಿ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಸೆಪ್ಟೆಂಬರ್​​ 17 ರಂದು ತಮ್ಮ 72ನೇ ಹುಟ್ಟುಹಬ್ಬದ ದಿನದಂದು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದ ಕ್ವಾರೈಂಟನ್​ ಆವರಣದಲ್ಲಿ ನಮೀಬಿಯಾದಿಂದ ತರಿಸಲಾದ ಐದು ಹೆಣ್ಣು ಮತ್ತು ಮೂರು ಗಂಡು ಚೀತಾಗಳನ್ನು ಬಿಡುಗಡೆ ಮಾಡಿದ್ದರು. ನಂತರ, ಫೆಬ್ರವರಿ 18 ರಂದು ದಕ್ಷಿಣ ಆಫ್ರಿಕಾದಿಂದ 12 ಚೀತಾಗಳು ಕುನೋ ಉದ್ಯಾನವನಕ್ಕೆ ಸ್ಥಳಾಂತರಗೊಂಡಿದ್ದವು.

ಇದನ್ನೂ ಓದಿ: ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ 12 ಚೀತಾಗಳು.. ಮೋದಿಗೆ ಧನ್ಯವಾದ ತಿಳಿಸಿದ ಸಿಎಂ

ಸದ್ಯ ಪ್ರಪಂಚದಲ್ಲಿ ಜೀವಂತವಾಗಿರುವ 7,000 ಚೀತಾಗಳ ಪೈಕಿ ಹೆಚ್ಚಿನವು ದಕ್ಷಿಣ ಆಫ್ರಿಕಾ, ನಮೀಬಿಯಾ ಮತ್ತು ಬೋಟ್ಸ್​ವಾನಾದಲ್ಲಿ ವಾಸಿಸುತ್ತವೆ. ನಮೀಬಿಯಾವು ವಿಶ್ವದಲ್ಲಿಯೇ ಅತಿ ಹೆಚ್ಚು ಚೀತಾಗಳನ್ನು ಹೊಂದಿದೆ. ಚೀತಾ ಭಾರತದಲ್ಲಿ ಸಂಪೂರ್ಣವಾಗಿ ನಾಶವಾದ ಏಕೈಕ ದೊಡ್ಡ ಮಾಂಸಹಾರಿ ಪ್ರಭೇದವಾಗಿದೆ. ಮುಖ್ಯವಾಗಿ ಅತಿಯಾದ ಬೇಟೆ ಮತ್ತು ಆವಾಸಸ್ಥಾನದ ನಷ್ಟದಿಂದಾಗಿ ಚೀತಾಗಳ ಸಂತತಿ ನಾಶವಾಯಿತು. ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯ ಸಾಲ್ ಅರಣ್ಯದಲ್ಲಿ 1948 ರಲ್ಲಿ ಕೊನೆಯ ಚೀತಾ ಸಾವನ್ನಪ್ಪಿತ್ತು.

  • 1952: Cheetahs were declared extinct in India.

    2022: 8 cheetahs were brought from Namibia & released into Kuno National Park.

    2023: 1 cheetah died due to kidney ailment.

    2023: Now, 4 cheetah cubs born in India, after decades.

    Welcome, little cubs! pic.twitter.com/XP3BZeeIwy

    — Anshul Saxena (@AskAnshul) March 29, 2023 " class="align-text-top noRightClick twitterSection" data=" ">

ಫೆಬ್ರವರಿಯಲ್ಲಿ 12 ಚೀತಾಗಳನ್ನು ತರಿಸಿಕೊಂಡ ನಂತರ ಮುಂದಿನ ಎಂಟರಿಂದ 10 ವರ್ಷಗಳವರೆಗೆ ಪ್ರತಿವರ್ಷ 12 ಚೀತಾಗಳನ್ನು ತರಿಸಿಕೊಳ್ಳುವ ಯೋಜನೆ ಇದೆ. ಒಡಂಬಡಿಕೆಯ ನಿಯಮಗಳನ್ನು ಪ್ರತಿ ಐದು ವರ್ಷಗಳಿಗೊಮ್ಮೆ ಪರಿಶೀಲಿಸಲಾಗುತ್ತದೆ. ಆಯಾ ಕಾಲಮಾನದಲ್ಲಿ ಒಡಂಬಡಿಕೆಯು ಪ್ರಸ್ತುತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಹೀಗೆ ಮಾಡಲಾಗುತ್ತದೆ ಎಂದು ಪರಿಸರ ಸಚಿವಾಲಯ ತಿಳಿಸಿತ್ತು.

ಮೂತ್ರಪಿಂಡ ಸಂಬಂಧಿ ಕಾಯಿಲೆಯಿಂದ ಚೀತಾ ಸಾವು: ಇತ್ತೀಚಿಗೆ ನಮೀಬಿಯಾದಿಂದ ತರಲಾದ ಚೀತಾಗಳಲ್ಲಿ ಸಾಶಾ ಎಂಬ ಚೀತಾವು ಮೂತ್ರಪಿಂಡ ಸಂಬಂಧಿ ಕಾಯಿಲೆಯಿಂದ ಸಾವನ್ನಪ್ಪಿತ್ತು ಎಂದು ಮಧ್ಯಪ್ರದೇಶದ ಅರಣ್ಯ ಮತ್ತು ವನ್ಯಜೀವಿ ಅಧಿಕಾರಿಗಳು ತಿಳಿಸಿದ್ದರು.

ಇದನ್ನೂ ಓದಿ: ನಮೀಬಿಯಾದಿಂದ ತಂದ ಚಿರತೆ ಸಾವು: ಕಾರ್ಯಪಡೆ ತಜ್ಞರ ಅರ್ಹತೆ, ಅನುಭವದ ಮಾಹಿತಿ ಕೇಳಿದ ಸುಪ್ರೀಂ ಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.