ETV Bharat / bharat

ವಂಚನೆ ಆರೋಪ: ಡಿಎಂಕೆ ಮಾಜಿ ಸಚಿವ ಸೆಂಥಿಲ್​ ವಿರುದ್ಧ ಚಾರ್ಜ್​​ಶೀಟ್​​ - ಡಿಎಂಕೆ ಮಾಜಿ ಸಚಿವ ಸೆಂಥಿಲ್​

ಸೆಂಥಿಲ್ ಬಾಲಾಜಿ 2011 ರಿಂದ 2016 ರವರೆಗೆ ಸಾರಿಗೆ ಸಚಿವರಾಗಿದ್ದರು. ಈ ಅವಧಿಯಲ್ಲಿ, ಸಾರಿಗೆ ಕ್ಷೇತ್ರದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ 81 ಜನರಿಂದ 1.62 ಕೋಟಿ ರೂ. ಪಡೆದು ವಂಚಿಸಿದ್ದಾರೆ ಎಂಬುದಾಗಿ ದೂರು ದಾಖಲಾಗಿತ್ತು. ದೂರಿನ ಆಧಾರದ ಮೇಲೆ ಸಿಸಿಐ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಚಾರ್ಜ್​​ಶೀಟ್​​
ಚಾರ್ಜ್​​ಶೀಟ್​​
author img

By

Published : Mar 27, 2021, 1:09 PM IST

ಚೆನ್ನೈ: ಸಾರಿಗೆ ಕ್ಷೇತ್ರದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ವಂಚಿಸಿದ್ದ ಡಿಎಂಕೆ ಪಕ್ಷದ ಮಾಜಿ ಸಚಿವ ಸೆಂಥಿಲ್ ಬಾಲಾಜಿ ಸೇರಿದಂತೆ 47 ಜನರ ವಿರುದ್ಧ ಚಾರ್ಜ್​ಶೀಟ್ ದಾಖಲಿಸಲಾಗಿದೆ

ಸೆಂಥಿಲ್ ಬಾಲಾಜಿ 2011 ರಿಂದ 2016 ರವರೆಗೆ ಸಾರಿಗೆ ಸಚಿವರಾಗಿದ್ದರು. ಈ ಅವಧಿಯಲ್ಲಿ, ಸಾರಿಗೆ ಕ್ಷೇತ್ರದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ 81 ಜನರಿಂದ 1.62 ಕೋಟಿ ರೂ.ಪಡೆದು ವಂಚಿಸಿದ್ದಾರೆ ಎಂಬುದಾಗಿ ದೂರು ದಾಖಲಾಗಿತ್ತು. ದೂರಿನ ಆಧಾರದ ಮೇಲೆ ಸಿಸಿಐ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಈ ವೇಳೆ ಸೆಂಥಿಲ್​ ಬಾಲಾಜಿ ಮತ್ತು ಅಧಿಕಾರಿಗಳಿಂದ ವಿವಿಧ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ದಾಖಲೆಗಳ ಆಧಾರದ ಮೇಲೆ ಸಾರಿಗೆ ನಿರ್ವಹಣೆಯ ನಿರ್ದೇಶಕರಾಗಿದ್ದ ಗಣೇಶನ್​​​ ಅವರನ್ನು ಬಂಧಿಸಲಾಗಿತ್ತು. ವಿಚಾರಣೆ ಬಳಿಕ ಸಿಸಿಐ ಪೊಲೀಸರು, ಸೆಂಥಿಲ್ ಸೇರಿ 47 ಜನರ ವಿರುದ್ಧ ಚೆನ್ನೈ ಎಗ್ಮೋರ್ ಸಿಸಿಬಿ ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಸಿದ್ದಾರೆ.

2015 ರಲ್ಲಿ ಬಿಡುಗಡೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಅರ್ಹತೆ ಆಧಾರದ ಮೇಲೆ ಸರಿಯಾಗಿ ಪ್ರಕಟಿಸಿಲ್ಲ. ಸೆಂಥಿಲ್ ಬಾಲಾಜಿಯ ಸಹಾಯಕ ಷಣ್ಮುಗಂ, ಎಂ. ಕಾರ್ತಿಕೇಯನ್​ ಸೇರಿ ಈ ವಂಚನೆ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಸೆಂಥಿಲ್ ಬಾಲಾಜಿ 2018 ರಲ್ಲಿ ಡಿಎಂಕೆ ಸೇರಿದರು ಮತ್ತು ಅರಾವಕುರಿಚಿ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿದ್ದರು. ಇದೀಗ ಕರರು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.