ಗುಂಟೂರು (ಆಂಧ್ರಪ್ರದೇಶ): ಗುಂಟೂರು ಜಿಲ್ಲೆಯ ನರಸಾರೋಪೇಟ ನಗರದ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಜನರು ಕೋವಿಡ್-19 ಲಸಿಕೆಯನ್ನು ತೆಗೆದುಕೊಳ್ಳಲು ಎಲ್ಲರೂ ಒಮ್ಮೆಲೆ ಮುಗಿಬಿದ್ದ ಪರಿಣಾಮ ಗೊಂದಲ ಸೃಷ್ಟಿಯಾಯಿತು.
ಪರಿಸ್ಥಿತಿಯನ್ನು ನಿಯಂತ್ರಿಸಲು ನರಸಾರೋಪೇಟ ಸಬ್ ಕಲೆಕ್ಟರ್ ಶ್ರೀವಾಸ್ ನೂಪುರ್ ಅಜಯ್ ಕುಮಾರ್ ಸ್ಥಳಕ್ಕಾಗಮಿಸಿ ತಕ್ಷಣ ಜನರ ನಿಯಂತ್ರಣಕ್ಕೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದರು. ನಂತರ ಜನರು ಲಸಿಕೆ ಪಡೆಯಲು ಸರತಿ ಸಾಲುಗಳಲ್ಲಿ ನಿಂತರು.
ಇದನ್ನೂ ಓದಿ: ಆಂಧ್ರದಲ್ಲಿ ಜಿಲೆಟಿನ್ ತುಂಬಿದ್ದ ವಾಹನ ಸ್ಫೋಟ: 9 ಮಂದಿಯ ದೇಹಗಳು ಛಿದ್ರ ಛಿದ್ರ
ಕಳೆದ 24 ಗಂಟೆಗಳಲ್ಲಿ ಆಂಧ್ರಪ್ರದೇಶದಲ್ಲಿ 17,188 ಹೊಸ ಕೋವಿಡ್-19 ಪ್ರಕರಣಗಳು ಮತ್ತು 73 ಸಾವುಗಳು ವರದಿಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಶುಕ್ರವಾರ ತಿಳಿಸಿದೆ.