ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯೋಜನೆ ಇಂದು ಯಶಸ್ವಿಯಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಇಳಿಸುವ ಮೂಲಕ ಇಸ್ರೋ ಹೊಸ ಇತಿಹಾಸ ಸೃಷ್ಟಿಸಿತು. ಭಾರತೀಯ ವಿಜ್ಞಾನಿಗಳ ಅಭೂತಪೂರ್ವ ಸಾಧನೆಯನ್ನು ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾದಿ ಗಣ್ಯಾತಿಗಣ್ಯರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅಮೆರಿಕದ ನಾಸಾ ಅಧ್ಯಕ್ಷರೂ ಕೂಡ ಇಸ್ರೋ ಪರಾಕ್ರಮಕ್ಕೆ ತಲೆದೂಗಿದ್ದಾರೆ.
ಇಂದು ಸಂಜೆ 6:04ಕ್ಕೆ ಸರಿಯಾಗಿ ಇಸ್ರೋದ ಚಂದ್ರಯಾನ-3ರ ಲ್ಯಾಂಡರ್ ಮಾಡ್ಯೂಲ್ ಚಂದ್ರನನ್ನು ಸ್ಪರ್ಶಿಸಿತು. ಈ ಮೂಲಕ ಚಂದ್ರನ ಮೇಲಿಳಿದ ಜಗತ್ತಿನ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿತು. ಅಲ್ಲದೇ, ಇದುವರೆಗೂ ಯಾವುದೇ ದೇಶವೂ ತಲುಪದ ದಕ್ಷಿಣ ಧ್ರುವದಲ್ಲಿ ಗಗನ ನೌಕೆಯನ್ನು ಇಳಿಸುವ ಮೂಲಕ ಚರಿತ್ರೆ ಬರೆಯಿತು.
ಇದನ್ನೂ ಓದಿ: ಚಂದ್ರನ 'ದಕ್ಷಿಣ ಪಥೇಶ್ವರ' ಭಾರತ: ಯಾರೂ ಮುಟ್ಟದ ಜಾಗದಲ್ಲಿ 'ಇಸ್ರೋ' ಹೆಜ್ಜೆಗುರುತು!
-
After watching live telecast of moon landing of Vikram lander, President Droupadi Murmu conveyed her congratulatory message to ISRO and everyone associated with Chandrayaan-3 mission. pic.twitter.com/Q5Yj4tq1kI
— President of India (@rashtrapatibhvn) August 23, 2023 " class="align-text-top noRightClick twitterSection" data="
">After watching live telecast of moon landing of Vikram lander, President Droupadi Murmu conveyed her congratulatory message to ISRO and everyone associated with Chandrayaan-3 mission. pic.twitter.com/Q5Yj4tq1kI
— President of India (@rashtrapatibhvn) August 23, 2023After watching live telecast of moon landing of Vikram lander, President Droupadi Murmu conveyed her congratulatory message to ISRO and everyone associated with Chandrayaan-3 mission. pic.twitter.com/Q5Yj4tq1kI
— President of India (@rashtrapatibhvn) August 23, 2023
ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಸುವ ಪ್ರಕ್ರಿಯೆಯ ನೇರಪ್ರಸಾರವನ್ನು ಗೋವಾದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ವೀಕ್ಷಿಸಿ, ''ಇಂದು ಭಾರತ ಇತಿಹಾಸ ನಿರ್ಮಿಸಿದ ದಿನ. ಚಂದ್ರಯಾನ-3 ಮಿಷನ್ ಚಂದ್ರನ ಮೇಲೆ ಯಶಸ್ವಿ ಲ್ಯಾಂಡಿಂಗ್ ಆಗುವುದರೊಂದಿಗೆ ನಮ್ಮ ವಿಜ್ಞಾನಿಗಳು ಇತಿಹಾಸ ನಿರ್ಮಿಸಿದ್ದಾರೆ. ಮಾತ್ರವಲ್ಲದೇ, ಭೂಗೋಳದ ಕಲ್ಪನೆಯನ್ನೂ ಮರುರೂಪಿಸಿದ್ದಾರೆ. ಇದು ನಿಜವಾಗಿಯೂ ಒಂದು ಮಹತ್ವದ ಕ್ಷಣ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
-
चंद्रमा पर भारत ने अपना परचम लहरा दिया!
— Vice President of India (@VPIndia) August 23, 2023 " class="align-text-top noRightClick twitterSection" data="
अनुपम! अद्वतीय! अभूतपूर्व !!!
ये विश्व कीर्तिमान है!! मेरा भारत महान है!
इसरो पर देश को गर्व है!
इतिहास रच दिया भारत के वैज्ञानिकों ने!
चंद्रमा के दक्षिणी ध्रुव पर चंद्रयान-3 के लैंडर विक्रम की सॉफ्ट लैंडिंग करके भारत ने आज एक बार फिर ये…
">चंद्रमा पर भारत ने अपना परचम लहरा दिया!
— Vice President of India (@VPIndia) August 23, 2023
अनुपम! अद्वतीय! अभूतपूर्व !!!
ये विश्व कीर्तिमान है!! मेरा भारत महान है!
इसरो पर देश को गर्व है!
इतिहास रच दिया भारत के वैज्ञानिकों ने!
चंद्रमा के दक्षिणी ध्रुव पर चंद्रयान-3 के लैंडर विक्रम की सॉफ्ट लैंडिंग करके भारत ने आज एक बार फिर ये…चंद्रमा पर भारत ने अपना परचम लहरा दिया!
— Vice President of India (@VPIndia) August 23, 2023
अनुपम! अद्वतीय! अभूतपूर्व !!!
ये विश्व कीर्तिमान है!! मेरा भारत महान है!
इसरो पर देश को गर्व है!
इतिहास रच दिया भारत के वैज्ञानिकों ने!
चंद्रमा के दक्षिणी ध्रुव पर चंद्रयान-3 के लैंडर विक्रम की सॉफ्ट लैंडिंग करके भारत ने आज एक बार फिर ये…
''ಜೀವಮಾನದಲ್ಲಿ ಒಮ್ಮೆ ಮಾತ್ರ ಸಂಭವಿಸುವ ಈ ರೀತಿಯ ಕ್ಷಣಗಳು ಭಾರತವನ್ನು ಹೆಮ್ಮೆ ಪಡುವಂತೆ ಮಾಡಿವೆ. ಇಸ್ರೋ ಮತ್ತು ಚಂದ್ರಯಾನ-3 ಮಿಷನ್‌ನಲ್ಲಿ ಭಾಗಿಯಾದ ಪ್ರತಿಯೊಬ್ಬರನ್ನೂ ಅಭಿನಂದಿಸುತ್ತೇನೆ. ಮುಂದೆ ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡಬೇಕೆಂದು ಹಾರೈಸುತ್ತೇನೆ'' ಎಂದು ತಮ್ಮ ವಿಡಿಯೋ ಸಂದೇಶದಲ್ಲಿ ರಾಷ್ಟ್ರಪತಿ ಮುರ್ಮು ಹೇಳಿದ್ದಾರೆ. ಉಪರಾಷ್ಟ್ರಪತಿ ಜಗದೀಪ್ ಧನಕರ್ ಟ್ವೀಟ್ ಮಾಡಿ, "ಇದು ನವಭಾರತದ ಉದಯವನ್ನು ಸೂಚಿಸುವ ಐತಿಹಾಸಿಕ ಸಾಧನೆ! ಈ ಚಂದ್ರಯಾನ-3 ಯೋಜನೆಗೆ ಸಂಬಂಧಿಸಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು. ದೇಶದ ದೂರದೃಷ್ಟಿಯ ನಾಯಕತ್ವಕ್ಕೂ ಅಭಿನಂದನೆಗಳು'' ಎಂದು ತಿಳಿಸಿದ್ದಾರೆ.
-
VIDEO | "The success of the lunar mission places India in a select group of nations to have successfully achieved the landing on the lunar surface. It is more significant because India is the only nation to achieve the lunar landing on the south pole of the Moon," says CJI DY… pic.twitter.com/ZBP6aYiYTF
— Press Trust of India (@PTI_News) August 23, 2023 " class="align-text-top noRightClick twitterSection" data="
">VIDEO | "The success of the lunar mission places India in a select group of nations to have successfully achieved the landing on the lunar surface. It is more significant because India is the only nation to achieve the lunar landing on the south pole of the Moon," says CJI DY… pic.twitter.com/ZBP6aYiYTF
— Press Trust of India (@PTI_News) August 23, 2023VIDEO | "The success of the lunar mission places India in a select group of nations to have successfully achieved the landing on the lunar surface. It is more significant because India is the only nation to achieve the lunar landing on the south pole of the Moon," says CJI DY… pic.twitter.com/ZBP6aYiYTF
— Press Trust of India (@PTI_News) August 23, 2023
"ನಮ್ಮ ಮಹಾನ್ ರಾಷ್ಟ್ರದ ಪ್ರಜೆಯಾಗಿ ನಾನು ಅಪಾರ ಹೆಮ್ಮೆಯಿಂದ ಇಂದು ಚಂದ್ರನ ಮೇಲೆ ಚಂದ್ರಯಾನ-3ರ ಲ್ಯಾಂಡಿಂಗ್ ವೀಕ್ಷಿಸಿದೆ'' ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದ್ದಾರೆ. "ಭಾರತದ ಚಂದ್ರಯಾನ ಯೋಜನೆಯು ಹೆಚ್ಚು ಮಹತ್ವದ್ದಾಗಿದೆ. ಏಕೆಂದರೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಏಕೈಕ ರಾಷ್ಟ್ರ ಭಾರತ. ಇದು ಹೊಸ ಮಾರ್ಗಗಳು ಮತ್ತು ವೈಜ್ಞಾನಿಕ ಸಂಶೋಧನೆ ಮತ್ತು ಅನ್ವೇಷಣೆಗೆ ಸಹಾಯ ಮಾಡುತ್ತದೆ. ಈ ಚಂದ್ರನ ಮೇಲಿನ ಲ್ಯಾಂಡಿಂಗ್ ನಮ್ಮ ರಾಷ್ಟ್ರದ ಮುಂದಿನ ಹಾದಿಯ ಮೈಲಿಗಲ್ಲು ಸೂಚಿಸುತ್ತದೆ. ಈ ಐತಿಹಾಸಿಕ ಸಾಧನೆಗಾಗಿ ಇಸ್ರೋ ತಂಡವನ್ನು ಅಭಿನಂದಿಸುತ್ತೇನೆ'' ಎಂದು ಸಿಜೆಐ ತಿಳಿಸಿದ್ದಾರೆ.
-
Congratulations @isro on your successful Chandrayaan-3 lunar South Pole landing! And congratulations to #India on being the 4th country to successfully soft-land a spacecraft on the Moon. We’re glad to be your partner on this mission! https://t.co/UJArS7gsTv
— Bill Nelson (@SenBillNelson) August 23, 2023 " class="align-text-top noRightClick twitterSection" data="
">Congratulations @isro on your successful Chandrayaan-3 lunar South Pole landing! And congratulations to #India on being the 4th country to successfully soft-land a spacecraft on the Moon. We’re glad to be your partner on this mission! https://t.co/UJArS7gsTv
— Bill Nelson (@SenBillNelson) August 23, 2023Congratulations @isro on your successful Chandrayaan-3 lunar South Pole landing! And congratulations to #India on being the 4th country to successfully soft-land a spacecraft on the Moon. We’re glad to be your partner on this mission! https://t.co/UJArS7gsTv
— Bill Nelson (@SenBillNelson) August 23, 2023
ನಾಸಾ ಅಧ್ಯಕ್ಷರ ಟ್ವೀಟ್: ಭಾರತದ ಸಾಧನೆಯನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಅಧ್ಯಕ್ಷ ಬಿಲ್ ನೆಲ್ಸನ್ ಅಭಿನಂದಿಸಿದ್ದಾರೆ. "ಚಂದ್ರಯಾನ-3 ಯೋಜನೆಯ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡಿಂಗ್ ಮಾಡಿರುವ ಇಸ್ರೋಗೆ ಅಭಿನಂದನೆಗಳು. ಚಂದ್ರನ ಮೇಲೆ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇಳಿಸಿದ 4ನೇ ದೇಶವಾಗಿರುವ ಭಾರತಕ್ಕೂ ಅಭಿನಂದನೆಗಳು. ಈ ಮಿಷನ್‌ನಲ್ಲಿ ನಿಮ್ಮ ಪಾಲುದಾರರಾಗಲು ನಮಗೆ ಸಂತೋಷವಾಗಿದೆ'' ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡರ್ ಇಳಿಸಿದ ಮೊದಲ ದೇಶ ಭಾರತ! ಇತಿಹಾಸ ಸೃಷ್ಟಿಸಿದ ಇಸ್ರೋ!