ETV Bharat / bharat

ಚಂದ್ರನ ಅಂಗಳದಲ್ಲಿ ಜೀವಜಲ.. ಚಂದ್ರಯಾನ-3 ಯೋಜನೆಯತ್ತ ಇಸ್ರೋ ಆಶಾಭಾವ

ಚಂದ್ರಯಾನ-2 ಗಗನನೌಕೆಯ ಲ್ಯಾಂಡರ್ ತನ್ನ ವೈಜ್ಞಾನಿಕ ಉಪಕರಣಗಳ ಸಹಾಯದಿಂದ ಚಂದ್ರನ ನೆಲದ ಮೇಲೆ ನೀರಿನಂಶ ಇರುವುದನ್ನು ಪತ್ತೆ ಹಚ್ಚಿದೆ.

Chandrayaan-2
Chandrayaan-2
author img

By

Published : Aug 12, 2021, 6:49 PM IST

ನವದೆಹಲಿ: ಚಂದ್ರಯಾನ-2 ಗಗನನೌಕೆಯ ಲ್ಯಾಂಡರ್ ಚಂದ್ರನ ಮೇಲೆ ಅಪ್ಪಳಿಸಿ ಪತನಗೊಂಡಿದ್ದರೂ, ಚಂದ್ರನ ಸುತ್ತಲೇ ಸುತ್ತುತ್ತಿರುವ ನೌಕೆ ತನ್ನಲ್ಲಿನ ವೈಜ್ಞಾನಿಕ ಉಪಕರಣಗಳ ಸಹಾಯದಿಂದ ಚಂದ್ರನ ನೆಲದ ಮೇಲೆ ನೀರಿನಂಶ ಇರುವುದನ್ನು ಪತ್ತೆ ಹಚ್ಚಿದೆ. ಇಸ್ರೋದ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್​ ಕುಮಾರ್ ಬರೆದ ಲೇಖನದಲ್ಲಿ ಈ ವಿಚಾರ ಬಹಿರಂಗಗೊಂಡಿದೆ.

ಇದರಿಂದಾಗಿ ಇಸ್ರೋ ವಿಜ್ಞಾನಿಗಳು ಮುಂಬರುವ ಚಂದ್ರಯಾನ-3 ಯೋಜನೆಯತ್ತ ಆಶಾಭಾವದ ನೋಟ ಬೀರಿದ್ದಾರೆ. ಚಂದ್ರನ ಸುತ್ತ ಸುತ್ತುತ್ತಿರುವ ಗಗನನೌಕೆಯಲ್ಲಿನ ಇನ್ ಫ್ರಾರೆಡ್ ಸ್ಪೆಕ್ಟ್ರೊಮೀಟರ್ ಉಪಕರಣ ಚಂದ್ರನ ಮೇಲಿನ ಖನಿಜಗಳ ಅಧ್ಯಯನಕ್ಕೆಂದೇ ಅಭಿವೃದ್ಧಿಗೊಳಿಸಲಾಗಿತ್ತು. ಇದೇ ಉಪಕರಣ ಈಗ ಹೈಡ್ರಾಕ್ಸಿಲ್ ಮತ್ತು ನೀರಿನ ಕಣ (H2O)ಗಳನ್ನು ಚಂದಿರನ ಅಂಗಳದಲ್ಲಿ ಪತ್ತೆ ಮಾಡಿದೆ.

ಚಂದ್ರಯಾನ-3 ಯೋಜನೆ 2022ರಲ್ಲಿ ಕಾರ್ಯಗತಗೊಳ್ಳಲಿದೆ. ಮುಂದಿನ ವರ್ಷಗಳಲ್ಲಿ ಹಲವು ದೇಶಗಳೂ ಚಂದ್ರನಲ್ಲಿಗೆ ಮಾನವ ಸಹಿತ ಮತ್ತು ಮಾನವ ರಹಿತ ಬಾಹ್ಯಾಕಾಶ ಯೋಜನೆಯನ್ನು ಕಾರ್ಯಗತಗೊಳಿಸುತ್ತಿರುವ ಹಿನ್ನೆಲೆ ಇಸ್ರೋದ ನೂತನ ಶೋಧನೆ ಬಹಳ ಪ್ರಮುಖವಾಗಿದೆ.

ಇದನ್ನೂ ಓದಿ: GISAT ಉಪಗ್ರಹ ಉಡಾವಣೆಯಲ್ಲಿ ಹಿನ್ನಡೆ: ಫಲಿಸದ ISRO ಪ್ರಯತ್ನ

ಭಾರತ ವಿಜ್ಞಾನ ಲೋಕದ ಮಹತ್ವಾಕಾಂಕ್ಷೆ ಯೋಜನೆಯಾದ ಚಂದ್ರಯಾನ- 2 ಅನ್ನು ಜುಲೈ 22, 2019 ರಂದು ಉಡಾವಣೆ ಮಾಡಲಾಗಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ಸರಾಗವಾಗಿ ಇಳಿದು, ವಿಶ್ವದ ಮೊದಲ ಬಾಹ್ಯಾಕಾಶ ಯೋಜನೆ ಎನ್ನುವ ವಿಶ್ವ ದಾಖಲೆ ಸ್ಥಾಪಿಸಬೇಕಿದ್ದ ವಿಕ್ರಮ್ ಲ್ಯಾಂಡರ್‌ ಚಂದ್ರನ ಮೇಲ್ಮೈನಿಂದ ಕೇವಲ 2.1 ಕಿ.ಮೀ. ದೂರವಿದ್ದಾಗ ನಿಯಂತ್ರಣ ಕಳೆದು ಕೊಂಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.