ETV Bharat / bharat

ನಮ್ಮ ಸಹೋದರಿಯರೊಂದಿಗೆ ನಿಲ್ಲೋಣ, ಎಲ್ಲರೂ ಜವಾಬ್ದಾರಿಯುತವಾಗಿರಿ: ನಟ ಸೋನು ಸೂದ್ ಟ್ವೀಟ್

author img

By

Published : Sep 18, 2022, 7:27 PM IST

'ಚಂಡೀಗಡ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಘಟನೆ ತುಂಬಾ ದುರದೃಷ್ಟಕರ. ಈ ಸಮಯದಲ್ಲಿ ನಾವು ನಮ್ಮ ಸಹೋದರಿಯರೊಂದಿಗೆ ನಿಲ್ಲಬೇಕು. ಇದು ಸಮಾಜಕ್ಕೆ ಮಾದರಿಯಾಗಬೇಕಾದ ಸಮಯ, ನಮಗೆ ಪರೀಕ್ಷಾ ಸಮಯ' ಎಂದು ನಟ ಸೋನು ಸೂದ್ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

Chandigarh University incident very unfortunate: Actor Sonu Sood tweet
ಚಂಡೀಗಡ ವಿಶ್ವವಿದ್ಯಾಲಯ ಘಟನೆ ಕುರಿತು ಸೋನು ಸೂದ್ ಟ್ವೀಟ್

ಚಂಡೀಗಢ: ವಿದ್ಯಾರ್ಥಿನಿಯೋರ್ವಳು ತನ್ನ ಹಾಸ್ಟೆಲ್‌ ಸಹಪಾಠಿ ಸ್ನಾನ ಮಾಡುತ್ತಿರುವ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಇತರರ ಜೊತೆ ಹಂಚಿಕೊಂಡಿದ್ದಾಳೆ ಎನ್ನಲಾದ ಪ್ರಕರಣವೊಂದು ಮೊಹಾಲಿಯ ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸೋನು ಸೂದ್ ಪ್ರತಿಕ್ರಿಯಿಸಿ, ಮನವಿಯೊಂದನ್ನು ಮಾಡಿಕೊಂಡಿದ್ದಾರೆ.

'ಚಂಡೀಗಡ ವಿಶ್ವವಿದ್ಯಾಲಯದ ಘಟನೆ ತುಂಬಾ ದುರದೃಷ್ಟಕರ. ಈ ಸಮಯದಲ್ಲಿ ನಾವು ನಮ್ಮ ಸಹೋದರಿಯರೊಂದಿಗೆ ನಿಲ್ಲಬೇಕು. ಇದು ಸಮಾಜಕ್ಕೆ ಮಾದರಿಯಾಗಬೇಕಾದ ಸಮಯ, ನಮಗೆ ಪರೀಕ್ಷಾ ಸಮಯ. ಸಹೋದರಿಯರಿಗೆ ಸಂಬಂಧಿಸಿದ ಯಾವುದೇ ವಿಡಿಯೋಗಳನ್ನು ಎಲ್ಲಿಯೂ ಶೇರ್ ಮಾಡಬೇಡಿ. ಜವಾಬ್ದಾರಿಯುತವಾಗಿರಿ' ಎಂದು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

  • Something that happened in Chandigarh University is very unfortunate. It’s time for us to stand with our sisters and set an example of a responsible society. These are testing times for us, not for the victims.
    Be responsible 🙏

    — sonu sood (@SonuSood) September 18, 2022 " class="align-text-top noRightClick twitterSection" data=" ">

ವಿದ್ಯಾರ್ಥಿನಿಯೊಬ್ಬಳು ತನ್ನ ಖಾಸಗಿ ವಿಡಿಯೋಗಳನ್ನು ತನ್ನ ಪ್ರಿಯಕರನಿಗೆ ಕಳುಹಿಸಿದ್ದಳು. ಈ ಒಂದು ವಿಡಿಯೋ ಮಾತ್ರ ಸೋರಿಕೆ ಆಗಿದೆ. ಬೇರೆ ಯಾವುದೇ ವಿದ್ಯಾರ್ಥಿನಿಯರಿಗೆ ಸಂಬಂಧಿಸಿದ ವಿಡಿಯೋ ಪ್ರಾಥಮಿಕ ತನಿಖೆಯಲ್ಲಿ ಪೊಲೀಸರಿಗೆ ದೊರಕಿಲ್ಲ. ವಿದ್ಯಾರ್ಥಿನಿಯರು ಆತಂಕ ಪಡುವ ಅವಶ್ಯಕತೆ ಇಲ್ಲಎಂದು ಮೋಹಾಲಿ ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ವರದಿಗಳನ್ನು ವಿಶ್ವವಿದ್ಯಾಲಯದ ಅಧಿಕಾರಿಗಳು ತಿರಸ್ಕರಿಸಿದ್ದಾರೆ.

ಇದನ್ನೂ ಓದಿ: ಚಂಡೀಗಢ ವಿವಿ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಲೀಕ್​ ವಿರುದ್ಧ ಬೃಹತ್ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.