ಮುಂಬೈ (ಮಹಾರಾಷ್ಟ್ರ): ನಟಿ ಅನುಷ್ಕಾ ಶರ್ಮಾ ಅವರು ಭಾರತದ ಮಹಿಳಾ ವೇಗದ ಬೌಲರ್ ಜೂಲನ್ ಗೋಸ್ವಾಮಿ ಅವರ ಬಯೋಪಿಕ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ 'ಚಕ್ಡಾ ಎಕ್ಸ್‌ಪ್ರೆಸ್' ಎಂದು ಹೆಸರಿಡಲಾಗಿದೆ.
- " class="align-text-top noRightClick twitterSection" data="
">
ನೀವು ಅನುಷ್ಕಾ ಅವರ ಸಾಮಾಜಿಕ ಜಾಲತಾಣವನ್ನು ಗಮನಿಸುವುದಾದರೆ, ಅವರು ನಿರಂತರವಾಗಿ ವರ್ಕ್‌ಔಟ್‌ಗೆ ಸಂಬಂಧಿಸಿದ ವಿಷಯವನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಅದೇ ರೀತಿ ಇದೀಗ ಅವರು ಜೂಲನ್ ಅವರ ಜೀವನಾಧರಿತ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಪೋಸ್ಟ್ ಮಾಡಿದ್ದಾರೆ.
ಅನುಷ್ಕಾ ಭಾರತೀಯ ಚಿತ್ರರಂಗದ ಫಿಟ್ಟೆಸ್ಟ್ ನಟಿಯರಲ್ಲಿ ಒಬ್ಬರಾಗಿರುವಾಗ, ಜೂಲನ್ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅಗತ್ಯವಿರುವ ರೀತಿಯ ದೇಹ ಮತ್ತು ಫಿಟ್‌ನೆಸ್ ಮಟ್ಟವನ್ನು ಸಾಧಿಸಲಿದ್ದಾರೆ.
'ಅನುಷ್ಕಾ ಶರ್ಮಾ ನಮಗೆ ಭಾರತೀಯ ಚಿತ್ರರಂಗದಲ್ಲಿ ಸ್ಮರಣೀಯ ಮಹಿಳಾ ನಾಯಕಿಯರನ್ನು ನೀಡಿದ್ದಾರೆ. ಅವರ ಭವ್ಯವಾದ ಕೆಲಸವು ಸುಲ್ತಾನ್, NH10, ಬ್ಯಾಂಡ್ ಬಾಜಾ ಬಾರಾತ್, ಪರಿಯಂತಹ ಚಲನಚಿತ್ರಗಳಲ್ಲಿ ಭಾರತೀಯ ಚಿತ್ರರಂಗದ ಕೆಲವು ನಂಬಲಾಗದ ನಾಯಕಿಯರನ್ನು ಪ್ರೇಕ್ಷಕರಿಗೆ ಹೇಗೆ ನೀಡಿದೆ ಎಂಬುದನ್ನು ತೋರಿಸುತ್ತದೆ.
ಚಕ್ಡಾ ಎಕ್ಸ್‌ಪ್ರೆಸ್ ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಮಹಿಳಾ ವೇಗಿಗಳಲ್ಲಿ ಒಬ್ಬರಾದ ಜೂಲನ್ ಅವರ ಅದ್ಭುತ ಪ್ರಯಾಣ ಗುರುತಿಸುತ್ತಿದೆ.
ಓದಿ: ತುಮಕೂರು ಫ್ಲೈಓವರ್ ಕಳಪೆ ಕಾಮಗಾರಿಯಿಂದ ಸಮಸ್ಯೆಯಾಗಿದೆ : ಮಾಜಿ ಸಿಎಂ ಹೆಚ್ಡಿಕೆ