ನವದೆಹಲಿ: ಬ್ಯಾಕ್ ಡೋರ್ ಮೂಲಕ ದೆಹಲಿಯಲ್ಲಿ ಕೇಂದ್ರ ಸರ್ಕಾರ ಅಧಿಕಾರ ನಡೆಸಲು ಪ್ರಯತ್ನ ನಡೆಸುತ್ತಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಹೇಳಿದ್ದು, ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜಿಎನ್ಸಿಟಿಡಿ ಮಸೂದೆ ಅಂಗೀಕಾರಗೊಳ್ಳುವಂತೆ ಕೇಂದ್ರ ಸರ್ಕಾರ ರಹಸ್ಯವಾಗಿ ಕೆಲಸ ಮಾಡಿದೆ ಎಂದು ಆರೋಪ ಮಾಡಿರುವ ಸಿಸೋಡಿಯಾ, ಲೆಫ್ಟಿನೆಂಟ್ ಗವರ್ನರ್ಗೆ ಹೆಚ್ಚಿನ ಅಧಿಕಾರ ನೀಡಿ, ತನ್ನ ಕೆಲಸ ಮಾಡಿಕೊಳ್ಳುತ್ತಿದೆ ಎಂದಿದ್ದಾರೆ.
ಓದಿ: ಕಾರ್ಮಿಕರಿಗೆ ಟಿಕೆಟ್ ದುಡ್ಡು ಕೊಡದವರು ಕಳ್ಳರನ್ನು ವಿಮಾನದಲ್ಲಿ ಕರೆಸಿಕೊಂಡರು : ಬಿಜೆಪಿಗೆ ದೀದಿ ಟಾಂಗ್
ಎನ್ಸಿಟಿ ಕಾಯ್ದೆ ತಿದ್ದುಪಡಿ ವಿಚಾರವಾಗಿ ಮಾತನಾಡಿರುವ ಸಿಸೋಡಿಯಾ, ಈ ಕ್ರಮವು ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ದೆಹಲಿ ನಾಗರಿಕರ ಇಚ್ಛೆಗೆ ವಿರುದ್ಧವಾಗಿದೆ ಎಂದಿದ್ದಾರೆ. ದೆಹಲಿ ಚುನಾಯಿತ ಸರ್ಕಾರದ ಅಧಿಕಾರ ಕಸಿದುಕೊಳ್ಳಲು ಹಾಗೂ ಕೇಂದ್ರದಿಂದ ನೇಮಕಗೊಂಡಿರುವ ಲೆಫ್ಟಿನೆಂಟ್ ಗವರ್ನರ್ ಮೂಲಕ ಕೇಂದ್ರ ಸರ್ಕಾರ ದೆಹಲಿಯಲ್ಲಿ ಅಧಿಕಾರ ನಡೆಸುವ ಇರಾದೆ ಹೊಂದಿದೆ. ಇದೇ ಕಾರಣಕ್ಕಾಗಿ ಜಿಎನ್ಸಿಟಿಡಿ ಮಸೂದೆ ಅಂಗೀಕಾರಗೊಳ್ಳಲು ರಹಸ್ಯವಾಗಿ ಕೆಲಸ ಮಾಡಿದೆ ಎಂದಿದ್ದಾರೆ.
ಈ ಮಸೂದೆ ಪ್ರಜಾಪ್ರಭುತ್ವದ ಹತ್ಯೆ ಎಂದಿರುವ ಸಿಸೋಡಿಯಾ, ದೆಹಲಿ ಅಭಿವೃದ್ಧಿ ಮತ್ತು ಪ್ರಗತಿಗೆ ಅಡ್ಡಿಯುಂಟಾಗುತ್ತದೆ ಎಂದು ಹೇಳಿದ್ದಾರೆ.