ETV Bharat / bharat

ವೇದ ಶಿಕ್ಷಣ ಪ್ರಚಾರಕ್ಕಾಗಿ ಮಂಡಳಿ ಸ್ಥಾಪಿಸಲು ಕೇಂದ್ರ ಶಿಕ್ಷಣ ಸಚಿವಾಲಯ ನಿರ್ಧಾರ - Prime Minister Modi

ರಾಷ್ಟ್ರೀಯ ಶಿಕ್ಷಣ ನೀತಿ (NEP) ಅಡಿಯಲ್ಲಿ ಆಧುನಿಕ ಸಮಾಜದಲ್ಲಿ ವೇದಗಳ ಪಠ್ಯದ ಪ್ರಸ್ತುತತೆಯನ್ನು ಕಾಪಾಡಿಕೊಳ್ಳಲು ವಿಶೇಷ ವೈದಿಕ ಶಿಕ್ಷಣ ಮಂಡಳಿಯು ಅಸ್ತಿತ್ವಕ್ಕೆ ಬರಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ..

Centre to set up board for promotion of Vedic education
ವೇದ ಶಿಕ್ಷಣ ಪ್ರಚಾರಕ್ಕಾಗಿ ಮಂಡಳಿ ಸ್ಥಾಪಿಸಲು ಕೇಂದ್ರ ಶಿಕ್ಷಣ ಸಚಿವಾಲಯ ನಿರ್ಧಾರ
author img

By

Published : May 15, 2022, 4:00 PM IST

ನವದೆಹಲಿ : ಕೇಂದ್ರ ಶಿಕ್ಷಣ ಸಚಿವಾಲಯವು ವೇದಾಧಾರಿತ ಶಿಕ್ಷಣ ಮಂಡಳಿಗಳನ್ನು ಗುರುತಿಸಲು ನಿರ್ಧರಿಸಿದೆ. ಈ ಗುರುತಿಸುವ ಪ್ರಕ್ರಿಯೆಯಲ್ಲಿ ಸಂಸ್ಕೃತ ಭಾಷೆ ಮತ್ತು ಗಣಿತ ಪರಿಣಿತರು ಭಾಗವಹಿಸಲಿದ್ದಾರೆ. ವೈದಿಕ ಶಿಕ್ಷಣದ ಕುರಿತು ಈವರೆಗೆ ಯಾವುದೇ ಪದವಿ ಹಂತದ ಕೋರ್ಸ್ ಇಲ್ಲದಿದ್ದರೂ, ವಿದ್ಯಾರ್ಥಿಗಳಿಗೆ ವೇದ ಶಿಕ್ಷಣ ಮತ್ತು ವೇದಾಧಾರಿತ ಜ್ಞಾನವನ್ನು ಒದಗಿಸಲು ಸಚಿವಾಲಯ ನಿರ್ಧರಿಸಿದೆ.

ಈ ಹಿನ್ನೆಲೆಯಲ್ಲಿ ಆಧುನಿಕ ಶಿಕ್ಷಣ ವ್ಯವಸ್ಥೆಯೊಂದಿಗೆ ವೇದ ಪದ್ಧತಿಯನ್ನು ಜೋಡಿಸಲು ಸರ್ಕಾರ ಚಿಂತನೆ ನಡೆಸಿದೆ. ಅದಕ್ಕೆ ಬೇಕಾದ ಶಿಕ್ಷಣ ಮಂಡಳಿ ಸ್ಥಾಪನೆ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಲಾಗಿದೆ. ವೇದಾಧಾರಿತ ಶಿಕ್ಷಣ ಮಂಡಳಿಗಳೂ ಕೂಡ ಉಳಿದ ಶಿಕ್ಷಣ ಮಂಡಳಿಗಳಂತೆಯೇ ಕಾರ್ಯನಿರ್ವಹಿಸಲಿವೆ.

ಸಚಿವಾಲಯದ ಪ್ರಕಾರ, ವೇದಗಳನ್ನು ವಿದ್ಯಾರ್ಥಿವೇತನದೊಂದಿಗೆ ಸಾರ್ವಜನಿಕ ಅಭ್ಯಾಸದ ವಿಷಯವನ್ನಾಗಿ ಮಾಡಲು, 'ಚಾರ್ ಧಾಮ್ಸ್' ಮತ್ತು ಕಾಮಾಖ್ಯದೇವಿಯ ಸ್ಥಳದಲ್ಲಿ ಮಹರ್ಷಿ ಸಾಂದೀಪನಿ ಪ್ರತಿಷ್ಠಾನ ನೇತೃತ್ವದಲ್ಲಿ ಐದು ವೇದ ವಿದ್ಯಾಪೀಠಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿ (NEP) ಅಡಿಯಲ್ಲಿ ಆಧುನಿಕ ಸಮಾಜದಲ್ಲಿ ವೇದಗಳ ಪಠ್ಯದ ಪ್ರಸ್ತುತತೆಯನ್ನು ಕಾಪಾಡಿಕೊಳ್ಳಲು ವಿಶೇಷ ವೈದಿಕ ಶಿಕ್ಷಣ ಮಂಡಳಿಯು ಅಸ್ತಿತ್ವಕ್ಕೆ ಬರಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ವೇದಗಳು ಭಾರತೀಯ ಸಂಸ್ಕೃತಿಯ ಆಧಾರ ಎಂದು ಶಿಕ್ಷಣ ಸಚಿವಾಲಯ ಅಭಿಪ್ರಾಯಪಟ್ಟಿದೆ.

ವೇದ್ ಶಂಕರ್ ಲಾಲ್ ಚತುರ್ವೇದಿ, ಎನ್ಇಪಿ ಅಡಿಯಲ್ಲಿ ಭಾರತೀಯ ಸಾಂಪ್ರದಾಯಿಕ ಜ್ಞಾನವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ವೇದ ಶಿಕ್ಷಣವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ವೇದ ಶಿಕ್ಷಣವು ಯಾವುದೇ ಧಾರ್ಮಿಕ ವ್ಯವಸ್ಥೆಯ ವಿಷಯವಲ್ಲ. ಆದರೆ, ಇದರಲ್ಲಿ ಉತ್ತಮ ಜೀವನಕ್ಕೆ ಬೇಕಾಗುವ ಜ್ಞಾನ ಮತ್ತು ವಿಜ್ಞಾನವಿದೆ ಎಂದರು.

ವೇದಗಳ ಜ್ಞಾನವು ಸಮಾಜದ ಎಲ್ಲಾ ವರ್ಗಗಳಿಗೆ ಪ್ರಯೋಜನಕಾರಿ ಎಂಬುದನ್ನು ಸಾಬೀತುಪಡಿಸುತ್ತದೆ. ವೇದ ಗಣಿತ ಇದಕ್ಕೆ ಜೀವಂತ ಉದಾಹರಣೆ. ಸಮಾಜದ ಬಹುತೇಕ ಎಲ್ಲ ವಿದ್ಯಾರ್ಥಿಗಳು ವೇದ ಗಣಿತದ ಲಾಭ ಪಡೆಯುತ್ತಿದ್ದಾರೆ ಎಂದರು. ಕೆಲವು ಪ್ರತಿಷ್ಠಿತ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ವೇದ ಶಿಕ್ಷಣವನ್ನು ನೀಡುತ್ತಿವೆ.

ಆಧುನಿಕ ಸಮಾಜದಲ್ಲಿ ವೇದಗಳ ಪಠಣದ ಪ್ರಸ್ತುತತೆಯನ್ನು ಕಾಪಾಡಿಕೊಳ್ಳಲು ಮತ್ತು ವೇದಗಳನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದವಿದ್ಯಾ ಪ್ರತಿಷ್ಠಾನವು ದೇಶದಾದ್ಯಂತ 6,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲೂ ವೇದ ಗಣಿತದ ಬಗ್ಗೆ ಚರ್ಚಿಸಿದ್ದರು.

ಈ ವೇಳೆ, ಗಣಿತದ ಪ್ರಮುಖ ನಿಯಮಗಳ ಬಗ್ಗೆ ಜಗತ್ತಿಗೆ ಅರಿವು ಮೂಡಿಸಿದ ಭಾರತದ ಜನರಿಗೆ, ಗಣಿತವು ಒಂದು ಸಮಸ್ಯೆಯಾಗದೆ ಸುಲಭವಾದ ವಿಷಯವಾಗಬೇಕು. ನಮ್ಮ ಮಕ್ಕಳಿಗೆ ನಾವು ವೇದ ಗಣಿತವನ್ನು ಕಲಿಸುವುದರಿಂದ ಅವರಲ್ಲಿ ಗಣಿತದ ಬಗೆಗಿನ ಭಯ ಕೊನೆಯಾಗುತ್ತದೆ. ಆಚಾರ್ಯ ಪಿಂಗಲ, ಆಚಾರ್ಯ ಆರ್ಯಭಟ್ಟ, ರಾಮಾನುಜನ್ ಮತ್ತು ಪುರಿ ಜಗದ್ಗುರುಗಳ ಮಾಜಿ ಶಂಕರಾಚಾರ್ಯ ಸ್ವಾಮಿ ಭಾರತಿಕೃಷ್ಣ ತೀರ್ಥ ಮಹಾರಾಜರಂತಹ ಗಣಿತಜ್ಞರಿಂದ ಪೋಷಿಸಿದ ಭಾರತದ ಶ್ರೀಮಂತ ಗಣಿತದ ಸಂಪ್ರದಾಯಗಳಿಂದ ದೇಶದ ಯುವಕರು ಮಾರ್ಗದರ್ಶನ ಪಡೆಯಬೇಕೆಂದು ಸಚಿವಾಲಯ ಆಶಿಸುತ್ತದೆ.

ವೇದ ಗಣಿತದಿಂದ ನೀವು ದೊಡ್ಡ ವೈಜ್ಞಾನಿಕ ಸಮಸ್ಯೆಗಳನ್ನೂ ಸಹ ಪರಿಹರಿಸಬಹುದು. ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ವೇದ ಗಣಿತವನ್ನು ಕಲಿಸಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದ್ದರು. ಸಂಸ್ಕೃತ ವೇದ ಶಿಕ್ಷಣದ ಖ್ಯಾತ ಶಿಕ್ಷಣ ತಜ್ಞ ಹೇಮನಗರ ಕೋಟಿ ಅವರು ಪ್ರಧಾನಿಯವರ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ್ದರು. ವೇದ ಗಣಿತ ಕಲಿಕೆಯಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚುವುದರ ಜೊತೆಗೆ ಮೆದುಳಿನ ವಿಶ್ಲೇಷಣಾ ಶಕ್ತಿಯೂ ವೃದ್ಧಿಯಾಗುತ್ತದೆ ಎಂದರು.

ಇದನ್ನೂ ಓದಿ: ಎನ್‌ಇಪಿ 2020 ತತ್ವಶಾಸ್ತ್ರವಾಗಿದ್ದು, ಎನ್​ಸಿಎಫ್ ಮಾರ್ಗವಾಗಿದೆ: ಸಚಿವ ಧರ್ಮೇಂದ್ರ ಪ್ರಧಾನ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.