ETV Bharat / bharat

ಶಾರುಖ್ ಪುತ್ರನಿಗೆ ಕ್ಲೀನ್​ ಚಿಟ್: ಅಧಿಕಾರಿ ಸಮೀರ್ ವಾಂಖೆಡೆ ಮೇಲೆ 'ಕಳಪೆ ತನಿಖೆ'ಯ ತೂಗುಕತ್ತಿ! - shoddy work in probing in drugs case

ಬಾಲಿವುಡ್​ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್​ ಖಾನ್​ ಡ್ರಗ್ಸ್​​ ಪ್ರಕರಣದಲ್ಲಿ ಕಳಪೆ ತನಿಖೆಗೆ ಆರೋಪದ ಮೇಲೆ ಸಮೀರ್ ವಾಂಖೆಡೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.

Centre orders action against Sameer Wankhede
ಸಮೀರ್ ವಾಂಖೆಡೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ
author img

By

Published : May 27, 2022, 10:50 PM IST

ನವದೆಹಲಿ: ಡ್ರಗ್ಸ್​​ ಪ್ರಕರಣದಲ್ಲಿ ಬಾಲಿವುಡ್​ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್​ ಖಾನ್​ ಕ್ಲೀನ್​ ಚಿಟ್​​ ಪಡೆದ ಬೆನ್ನಲ್ಲೇ ಎನ್‌ಸಿಬಿ ಮಾಜಿ ಅಧಿಕಾರಿ ಸಮೀರ್ ವಾಂಖೆಡೆಗೆ ಸಂಕಷ್ಟ ಎದುರಾಗಿದೆ. ಕಳಪೆ ತನಿಖೆಗೆ ಸಮೀರ್ ವಾಂಖೆಡೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

ಕಳೆದ ವರ್ಷದ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್‌ಗೆ ಶುಕ್ರವಾರ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್​ಸಿಬಿ) ಕ್ಲೀನ್ ಚಿಟ್ ನೀಡಿದೆ. ಇದಾಗ ಕೆಲವೇ ಗಂಟೆಗಳಲ್ಲಿ ಈ ಪ್ರಕರಣದ ತನಿಖಾಧಿಕಾರಿಯಾಗಿದ್ದ ಸಮೀರ್ ವಾಂಖೆಡೆ ವಿರುದ್ಧ ಕ್ರಮ ಜರುಗಿಸುವಂತೆ ಸರ್ಕಾರ ಆದೇಶಿಸಿದೆ. ಈಗಾಗಲೇ ನಕಲಿ ಜಾತಿಪ್ರಮಾಣ ಪತ್ರ ನೀಡಿದ ಆರೋಪವನ್ನೂ ವಾಂಖೆಡೆ ಎದುರಿಸುತ್ತಿದ್ದು, ಈ ಸಂಬಂಧ ಕೂಡ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ವಾಂಖೆಡೆ ಭಾರತೀಯ ಕಂದಾಯ ಸೇವಾ ಅಧಿಕಾರಿಯಾಗಿದ್ದು, ಹಣಕಾಸು ಸಚಿವಾಲಯವು ಕ್ರಮ ಕೈಗೊಳ್ಳುವ ಪ್ರಾಧಿಕಾರವಾಗಿದೆ. ಸಾಕ್ಷ್ಯಾಧಾರದ ಕೊರತೆ ಹಾಗೂ ದಾಳಿ ವೇಳೆ ಆರ್ಯನ್ ಖಾನ್ ಬಳಿ ಯಾವುದೇ ಡ್ರಗ್ಸ್​ ಪತ್ತೆಯಾಗದ ಕಾರಣ ಆರ್ಯನ್​ಗೆ ಎನ್​ಸಿಬಿ ಕ್ಲೀನ್​ ಚಿಟ್ ನೀಡಿತ್ತು.

ಇದನ್ನೂ ಓದಿ: ಮುಂಬೈ ಡ್ರಗ್ಸ್​ ಪ್ರಕರಣದಲ್ಲಿ ಸಾಕ್ಷ್ಯಾಧಾರ ಕೊರತೆ: ಶಾರುಖ್ ಪುತ್ರ ಆರ್ಯನ್ ಖಾನ್​ಗೆ ಕ್ಲೀನ್ ಚಿಟ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.