ನವದೆಹಲಿ: ಮುಂದಿನ ವರ್ಷದೊಳಗೆ ಭಾರತವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತಗೊಳಿಸಲು ಕೇಂದ್ರ ಸರ್ಕಾರ (single-use plastic-free) ಕ್ರಮ ಕೈಗೊಂಡಿದೆ. ದೇಶಾದ್ಯಂತ ಸಂಗ್ರಹಿಸದ ಬೃಹತ್ ಪ್ಲಾಸ್ಟಿಕ್ ತ್ಯಾಜ್ಯದ ಅಪಾಯವನ್ನು ಎದುರಿಸಲು ಕೇಂದ್ರ ಸರ್ಕಾರ ಜುಲೈ 1, 2022 ರಿಂದ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧಿಸಿದೆ.
ಪ್ರಸ್ತುತ, ದೇಶದಲ್ಲಿ 50 ಮೈಕ್ರಾನ್‌ಗಳಿಗಿಂತ ಕಡಿಮೆ ಇರುವ ಪಾಲಿಥಿನ್ ಬ್ಯಾಗ್‌ಗಳನ್ನು ನಿಷೇಧಿಸಲಾಗಿದೆ. ಆದರೆ ಹೊಸ ನಿಯಮಗಳ ಪ್ರಕಾರ, 75 ಮೈಕ್ರಾನ್‌ಗಳಿಗಿಂತ ಕಡಿಮೆ ದಪ್ಪವಿರುವ ಪಾಲಿಥಿನ್ ಬ್ಯಾಗ್‌ಗಳನ್ನು ಸೆಪ್ಟೆಂಬರ್ 30 ರಿಂದ ಮತ್ತು 120 ಮೈಕ್ರಾನ್‌ಗಿಂತ ಕಡಿಮೆ ಇರುವ ಬ್ಯಾಗ್‌ಗಳನ್ನು ಮುಂದಿನ ವರ್ಷ ಡಿಸೆಂಬರ್ 31 ರಿಂದ ನಿಷೇಧಿಸಲಾಗುವುದು.
ಪಾಲಿಸ್ಟೈರೀನ್ ಮತ್ತು ವಿಸ್ತರಿತ ಪಾಲಿಸ್ಟೈರೀನ್ ಸೇರಿದಂತೆ ಏಕ - ಬಳಕೆಯ ಪ್ಲಾಸ್ಟಿಕ್ ತಯಾರಿಕೆ, ಆಮದು, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ಜುಲೈ 1, 2022 ರಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ ಎಂದು ಪರಿಸರ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅಧಿಸೂಚನೆಯು ಮೊದಲ ಬಾರಿಗೆ 'ಏಕ-ಬಳಕೆಯ ಪ್ಲಾಸ್ಟಿಕ್' ಅನ್ನು ವ್ಯಾಖ್ಯಾನಿಸಿದೆ ಮತ್ತು ಅಂತಹ ವಸ್ತುಗಳನ್ನು ನಿಷೇಧಿಸಬೇಕು ಎಂದು ಹೇಳಿದೆ. "ಏಕ-ಬಳಕೆಯ ಪ್ಲಾಸ್ಟಿಕ್ ಸರಕು" ಎಂದರೆ ವಿಲೇವಾರಿ ಮಾಡುವ ಅಥವಾ ಮರು ಬಳಕೆ ಮಾಡುವ ಮೊದಲು ಅದೇ ಉದ್ದೇಶಕ್ಕಾಗಿ ಒಮ್ಮೆ ಬಳಸಲು ಉದ್ದೇಶಿಸಿರುವ ಪ್ಲಾಸ್ಟಿಕ್ ವಸ್ತು ಎಂದರ್ಥ.
ಪ್ರಸ್ತುತ, ಒಟ್ಟು ಪ್ಲಾಸ್ಟಿಕ್ ತ್ಯಾಜ್ಯದ ಶೇ40 ಪ್ರತಿ ದಿನವೂ ದೇಶದಲ್ಲಿ ಸಂಗ್ರಹಿಸದೇ ಉಳಿದಿದೆ. ಸಂಗ್ರಹಿಸದ ಪ್ಲಾಸ್ಟಿಕ್ ತ್ಯಾಜ್ಯವು ಒಳಚರಂಡಿ ಮತ್ತು ನದಿ ವ್ಯವಸ್ಥೆಗಳ ಮಲೀನಕ್ಕೆ, ಮಣ್ಣು ಮತ್ತು ನೀರಿನ ಮಾಲಿನ್ಯ, ಸಮುದ್ರ ಪರಿಸರ ವ್ಯವಸ್ಥೆ ಹಾಳು ಮಾಡಿ ಮಾನವ ಆರೋಗ್ಯ ಮತ್ತು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
ಈ ಅಧಿಸೂಚನೆಯ ಅಡಿ, ನಗರ, ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಮ ಪಂಚಾಯಿತಿಗಳ ಹೊಣೆಗಾರಿಕೆಯು ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಸ್ಥಾಪಿಸುವುದು ಮತ್ತು ಸಂಯೋಜಿಸುವುದು ಮತ್ತು ಸಂಬಂಧಿತ ಕಾರ್ಯಗಳಾದ ಬೇರ್ಪಡಿಸುವಿಕೆ, ಸಂಗ್ರಹಣೆ, ಸಾಗಣೆ, ಸಂಸ್ಕರಣೆ ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಆಗಿದೆ.
ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳ ತಯಾರಕರು ಅಥವಾ ಮಾರಾಟಗಾರರು ಅಥವಾ ಬ್ರಾಂಡ್ ಮಾಲೀಕರು ಪ್ಲಾಸ್ಟಿಕ್ ಪ್ಯಾಕೇಜಿಂಗ್ ಸಾಮಗ್ರಿಗಳನ್ನು ಒಳಗೊಂಡಂತೆ ಮಾರುಕಟ್ಟೆ/ಮಾರಾಟ ಅಥವಾ ಬಳಸುವ ಮೊದಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪ್ರಮಾಣಪತ್ರವನ್ನು ಪಡೆಯಬೇಕು.