ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಮಾಜಿ ಮುಖ್ಯ ಕಾರ್ಯದರ್ಶಿ ಹಾಗೂ ಪ್ರಸ್ತುತ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸಲಹೆಗಾರರಾಗಿರುವ ಅಲಪನ್ ಬಂಡೋಪಾಧ್ಯಾಯರಿಗೆ ಮತ್ತೊಮ್ಮೆ ಹೊಸದಾಗಿ ಕೇಂದ್ರ ಸರ್ಕಾರ ಶೋಕಾಸ್ ನೋಟಿಸ್ ನೀಡಿದೆ.
ಪಶ್ಚಿಮ ಬಂಗಾಳ ಹಾಗೂ ಕೇಂದ್ರ ಸರ್ಕಾರದ ನಡುವೆ ಜಟಾಪಟಿ ಮುಂದುವರೆದಿದೆ. ಸೇವಾ ಅವಧಿ ಮುಕ್ತಾಯಗೊಂಡಿದ್ದ ಕಾರಣ ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಪನ್ ಬಂಡೋಪಾಧ್ಯಾಯರನ್ನು ದೆಹಲಿಗೆ ವಾಪಸ್ಸು ಕಳುಹಿಸಿಕೊಡುವಂತೆ ದೀದಿ ಸರ್ಕಾರಕ್ಕೆ ಪಿಎಂ ಮೋದಿ ಸರ್ಕಾರ ಸೂಚಿಸಿತ್ತು. ಆದರೆ ಇದರ ಬದಲಾಗಿ ಬಂಡೋಪಾಧ್ಯಾಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಅವರನ್ನು ಸಿಎಂ ಸಲಹೆಗಾರನ್ನಾಗಿ ನೇಮಕ ಮಾಡಿಕೊಳ್ಳಲಾಗಿತ್ತು. ಇದೀಗ ದೆಹಲಿಗೆ ಹಿಂದಿರುಗದೇ ಇದಿದ್ದಕ್ಕೆ ಸೂಕ್ತ ಕಾರಣ ನೀಡಲು ಸೂಚಿಸಿ ನೋಟಿಸ್ ನೀಡಲಾಗಿದೆ.
ಇದನ್ನೂ ಓದಿ: ನಿಲ್ಲದ ಮೋದಿ - ದೀದಿ ಸಮರ: ಅಲಪನ್ಗೆ ಶೋಕಾಸ್ ನೋಟಿಸ್ ನೀಡಿದ ಕೇಂದ್ರ..!
ಈ ಹಿಂದೆ ಮುನ್ನ ಯಾಸ್ ಚಂಡಮಾರುತ ವೀಕ್ಷಣೆಗೆ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಬಂದಿದ್ದ ವೇಳೆ ನಡೆಸಿದ್ದ ಸಭೆಗೆ ಸಿಎಂ ಮಮತಾ ಹಾಗೂ ಆಗ ಮುಖ್ಯ ಕಾರ್ಯದರ್ಶಿಯಾಗಿದ್ದ ಅಲಪನ್ ಬಂಡೋಪಾಧ್ಯಾಯ ತಡವಾಗಿ ಬಂದಿದ್ದರು. ಸೈಕ್ಲೋನ್ ವರದಿ ಸಲ್ಲಿಸುವಲ್ಲಿ ವಿಳಂಬ ಮಾಡಿದ್ದರು. ಇದಕ್ಕೆ ಕಾರಣ ನೀಡುವಂತೆ ಸೂಚಿಸಿ ಶೋಕಾಸ್ ನೋಟಿಸ್ ನೀಡಲಾಗಿತ್ತು.