ನವದೆಹಲಿ : ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈವರೆಗೆ 26 ಕೋಟಿಗೂ ಅಧಿಕ ಕೋವಿಡ್ ಡೋಸ್ಗಳನ್ನು ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಭಾರತ ಸರ್ಕಾರದ ಮೂಲಕ ಮತ್ತು ರಾಜ್ಯಗಳ ನೇರ ಖರೀದಿ ವಿಭಾಗದ ಮೂಲಕ ಈವರೆಗೆ 26,64,84,350 ಲಸಿಕೆಯನ್ನು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, 1.53 ಕೋಟಿಗಿಂತ ಹೆಚ್ಚು (1,53,79,233) ಕೋವಿಡ್ ಲಸಿಕೆ ಡೋಸ್ಗಳು ಇನ್ನೂ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದ ಬಳಿಯಿವೆ. ಇದಲ್ಲದೆ, 4 ಲಕ್ಷಕ್ಕೂ ಹೆಚ್ಚು (4,48,760) ಲಸಿಕೆ ಪ್ರಮಾಣಗಳನ್ನು ಶೀಘ್ರದಲ್ಲೇ ರಾಜ್ಯಗಳಿಗೆ ಕಳಿಸಲಾಗುವುದು ಎಂದು ತಿಳಿಸಿದೆ. ಕೋವಿಡ್ ವ್ಯಾಕ್ಸಿನೇಷನ್ನ ಉದಾರೀಕರಣ ಮತ್ತು ವೇಗವರ್ಧಿತದ 3ನೇ ಕಾರ್ಯತಂತ್ರವು ಮೇ 1, 2021ರಿಂದ ಪ್ರಾರಂಭವಾಗಿದೆ.
ಈವರೆಗೆ ರಾಷ್ಟ್ರವ್ಯಾಪಿ 25,31,95,048 ಕೋವಿಡ್ ಡೋಸ್ಅನ್ನು ನೀಡಲಾಗಿದೆ. 71 ದಿನಗಳ ಬಳಿಕ ಭಾರತದಲ್ಲಿ ಅತೀ ಕಡಿಮೆ ಅಂದರೆ 80,834 ಕೊರೊನಾ ಸೋಂಕಿತರು ಶನಿವಾರ ಪತ್ತೆಯಾಗಿದ್ದು, 3,303 ರೋಗಿಗಳು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ:ರಾಜ್ಯ COVID ಬುಲೆಟಿನ್.. 2 ತಿಂಗಳಲ್ಲಿ ಇಂದು ಅತೀ ಕಡಿಮೆ ಕೋವಿಡ್ ಪ್ರಕರಣ ಪತ್ತೆ
ಕಳೆದ 24 ಗಂಟೆಗಳಲ್ಲಿ 1,32,062 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಹೊರ ಬಂದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ದೇಶದಲ್ಲೀಗ ಒಟ್ಟು 2,94,39,989 ಸೋಂಕಿತರಿದ್ದು, ಈ ಪೈಕಿ 10,26,159 ಕೇಸ್ಗಳು ಮಾತ್ರ ಸಕ್ರಿಯವಾಗಿವೆ. 2,80,43,446 ಮಂದಿ ಈವರೆಗೆ ವೈರಸ್ನಿಂದ ಚೇತರಿಸಿಕೊಂಡಿದ್ದು, ಮೃತರ ಸಂಖ್ಯೆ 3,70,384ಕ್ಕೆ ಏರಿಕೆಯಾಗಿದೆ.