ETV Bharat / bharat

ದಲಿತ ಕ್ರಿಶ್ಚಿಯನ್​, ಮುಸ್ಲಿಮರನ್ನು ಎಸ್​​​ಸಿ ಪಟ್ಟಿಯಿಂದ ಕೈಬಿಡುವ ಆದೇಶ ಸಮರ್ಥಿಸಿಕೊಂಡ ಕೇಂದ್ರ: ಸುಪ್ರೀಂಗೆ ಅಫಿಡವಿಟ್​ - ಮತಾಂತರಗೊಂಡ ದಲಿತ ಸಮುದಾಯಗಳ ಜನರಿಗೆ ಮೀಸಲಾತಿ

ಪರಿಶಿಷ್ಟ ಜಾತಿಗಳ ಗುರುತಿಸುವಿಕೆಯು ಸಂವಿಧಾನದ (ಪರಿಶಿಷ್ಟ ಜಾತಿಗಳು) ಆದೇಶ, 1950 ರಲ್ಲಿ ಗುರುತಿಸಲಾದ ಸಮುದಾಯಗಳಿಗೆ ಸೀಮಿತವಾದ ನಿರ್ದಿಷ್ಟ ಸಾಮಾಜಿಕ ಕಳಂಕದ ಸುತ್ತ ಕೇಂದ್ರೀಕೃತವಾಗಿದೆ ಎಂದು ಕೇಂದ್ರ ಸುಪ್ರೀಂಕೋರ್ಟ್​​ಗೆ ಸಲ್ಲಿಸಿದ ಅಫಿಡವಿಟ್​ನಲ್ಲಿ ಹೇಳಿದೆ. ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ದಲಿತ ಸಮುದಾಯಗಳ ಜನರಿಗೆ ಮೀಸಲಾತಿ ಮತ್ತು ಇತರ ಪ್ರಯೋಜನಗಳನ್ನು ವಿಸ್ತಸುವಂತೆ ಕೋರಿ ಎನ್​​​ಜಿಒವೊಂದು ಸುಪ್ರೀಂಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

centre-defends-exclusion-of-dalit-christians-dalit-muslims-from-scheduled-castes-list-in-affidavit-in-sc
ದಲಿತ ಕ್ರಿಶ್ಚಿಯನ್​, ಮುಸ್ಲಿಮರಿಗೆ ಎಸ್​​​ಸಿ ಪಟ್ಟಿಯಿಂದ ಕೈಬಿಡುವ ಆದೇಶ ಸಮರ್ಥಿಸಿಕೊಂಡ ಕೇಂದ್ರ: ಸುಪ್ರೀಂಗೆ ಅಫಿಡವಿಟ್​
author img

By

Published : Nov 10, 2022, 9:06 PM IST

ನವದೆಹಲಿ: ದಲಿತ ಕ್ರಿಶ್ಚಿಯನ್ನರು ಮತ್ತು ದಲಿತ ಮುಸ್ಲಿಮರನ್ನು ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಹೊರಗಿಡುವುದನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ. ಈ ಸಂಬಂಧ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ್ದು, ಸದರಿ ಸಮುದಾಯಗಳು ಯಾವುದೇ ದಬ್ಬಾಳಿಕೆ ಮತ್ತು ಹಿಂದುಳಿದಿರುವಿಕೆ ಎದುರಿಸುತ್ತಿಲ್ಲ ಎಂದು ಹೇಳಿದೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 1950 ರ ಸಂವಿಧಾನದ (ಪರಿಶಿಷ್ಟ ಜಾತಿಗಳು) ಆದೇಶದಲ್ಲಿ ಯಾವುದೇ ಅಸಂವಿಧಾನಿಕತೆ ಇಲ್ಲ ಎಂದು ವಾದಿಸಿದೆ. ಇನ್ಮುಂದೆ ದಲಿತ ಕ್ರಿಶ್ಚಿಯನ್ನರು ಮತ್ತು ದಲಿತ ಮುಸ್ಲಿಮರು ಪರಿಶಿಷ್ಟ ಜಾತಿಗಳಿಗೆ ಅರ್ಹರಾಗಿರುವ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಅಫಿಡವಿಟ್​ನಲ್ಲಿ ಹೇಳಿದೆ.

ಪರಿಶಿಷ್ಟ ಜಾತಿಗಳ ಗುರುತಿಸುವಿಕೆಯು ಸಂವಿಧಾನದ (ಪರಿಶಿಷ್ಟ ಜಾತಿಗಳು) ಆದೇಶ, 1950 ರಲ್ಲಿ ಗುರುತಿಸಲಾದ ಸಮುದಾಯಗಳಿಗೆ ಸೀಮಿತವಾದ ನಿರ್ದಿಷ್ಟ ಸಾಮಾಜಿಕ ಕಳಂಕದ ಸುತ್ತ ಕೇಂದ್ರೀಕೃತವಾಗಿದೆ ಎಂದು ಕೇಂದ್ರವು ಹೇಳಿದೆ. ಎನ್‌ಜಿಒ ವೊಂದು ಸಲ್ಲಿಸಿದ ಅರ್ಜಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್​ಗೆ ಅಫಿಡವಿಟ್ ಸಲ್ಲಿಸಿದೆ.
ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ದಲಿತ ಸಮುದಾಯಗಳ ಜನರಿಗೆ ಮೀಸಲಾತಿ ಮತ್ತು ಇತರ ಪ್ರಯೋಜನಗಳನ್ನು ವಿಸ್ತಸುವಂತೆ ಕೋರಿ ಎನ್​​​ಜಿಒವೊಂದು ಸುಪ್ರೀಂಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

ಸಂವಿಧಾನದ (ಪರಿಶಿಷ್ಟ ಜಾತಿ) ಆದೇಶ, 1950 ಪ್ರಕಾರ ಕೆಲವು ಹಿಂದೂ ಜಾತಿಗಳ ಆರ್ಥಿಕ ಮತ್ತು ಸಾಮಾಜಿಕ ಹಿಂದುಳಿದಿರುವಿಕೆಗೆ ಕಾರಣವಾಗುವ ಅಸ್ಪೃಶ್ಯತೆ ಹಾಗೂ ದಬ್ಬಾಳಿಕೆಯ ವ್ಯವಸ್ಥೆ ಪ್ರಚಲಿತದಲ್ಲಿರದ ಕಾರಣದಿಂದ ಕ್ರಿಶ್ಚಿಯನ್ ಧರ್ಮ ಅಥವಾ ಇಸ್ಲಾಂ ಧರ್ಮವನ್ನು ಹೊರಗಿಡುವುದರಿಂದ ಯಾವುದೇ ಅಸಂವಿಧಾನಿಕತೆ ಉಂಟಾಗುವುದಿಲ್ಲ. ನಾವು ಮಾಡಿರುವ ಆದೇಶ ಐತಿಹಾಸಿಕ ದತ್ತಾಂಶವನ್ನು ಆಧರಿಸಿದೆ. ಇದು ಕ್ರಿಶ್ಚಿಯನ್ ಅಥವಾ ಇಸ್ಲಾಮಿಕ್ ಸಮಾಜದ ಸದಸ್ಯರು ಅಂತಹ ಹಿಂದುಳಿದಿರುವಿಕೆ ಅಥವಾ ದಬ್ಬಾಳಿಕೆಯನ್ನು ಎಂದಿಗೂ ಎದುರಿಸಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ವಾಸ್ತವವಾಗಿ, ಪರಿಶಿಷ್ಟ ಜಾತಿಗಳ ಜನರು ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮದಂತಹ ಧರ್ಮಗಳಿಗೆ ಮತಾಂತರಗೊಳ್ಳಲು ಕಾರಣ ಎಂದರೆ ಅವರು ಕ್ರಿಶ್ಚಿಯನ್ ಧರ್ಮ ಅಥವಾ ಇಸ್ಲಾಂನಲ್ಲಿ ಚಾಲ್ತಿಯಲ್ಲಿಲ್ಲದ ಅಸ್ಪೃಶ್ಯತೆ ಹಾಗೂ ದಬ್ಬಾಳಿಕೆ ವ್ಯವಸ್ಥೆಯಿಂದ ಹೊರಬರಲು ಎಂದು ಅಫಿಡವಿಟ್​ನಲ್ಲಿ ಕೇಂದ್ರ ಸರ್ಕಾರ ಹೇಳಿದೆ.

ದಲಿತ ಕ್ರಿಶ್ಚಿಯನ್ನರು ಮತ್ತು ದಲಿತ ಮುಸ್ಲಿಮರನ್ನು ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಿದ ನ್ಯಾಯಮೂರ್ತಿ ರಂಗನಾಥ್ ಮಿಶ್ರಾ ಆಯೋಗದ ವರದಿಗೆ ಸಚಿವಾಲಯವು ತನ್ನ ಅಸಮ್ಮತಿ ವ್ಯಕ್ತಪಡಿಸಿತು.

ಇದನ್ನು ಓದಿ: ಜ್ಞಾನವಾಪಿ ಕಾಶಿ ವಿಶ್ವನಾಥ ಪ್ರಕರಣ: ವಿಚಾರಣೆಗೆ ನಾಳೆ ಸುಪ್ರೀಂನಿಂದ ಪ್ರತ್ಯೇಕ ನ್ಯಾಯಪೀಠ ರಚನೆ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.