ETV Bharat / bharat

10 ರಾಜ್ಯಗಳಲ್ಲಿ ಹಕ್ಕಿ ಜ್ವರ ದೃಢ, ಮಾನವರಲ್ಲಿ ಸೋಂಕು ಹರಡುವಿಕೆಯ ಬಗ್ಗೆ ವೈಜ್ಞಾನಿಕ ವರದಿ ಇಲ್ಲ: ಕೇಂದ್ರ - ಹಕ್ಕಿ ಜ್ವರ ಸುದ್ದಿ

ಚೆನ್ನಾಗಿ ಬೇಯಿಸಿದ ಕೋಳಿ ಮತ್ತು ಮೊಟ್ಟೆಗಳನ್ನು ಬಳಸುವುದರಿಂದ ಸೋಂಕಿನ ಅಪಾಯವಿಲ್ಲ. ಏಕೆಂದರೆ ಹೆಚ್ಚಿನ ತಾಪಮಾನದಲ್ಲಿ ವೈರಸ್ ಬದುಕಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಪಶುಸಂಗೋಪನೆ ಮತ್ತು ಡೈರಿ ಇಲಾಖೆ ಹೇಳಿಕೆಯಲ್ಲಿ, ಏವಿಯನ್ ಇನ್​ಫ್ಲುಯೆಂಝಾವನ್ನು 11 ಜನವರಿ 2021 ರೊಳಗೆ ದೇಶದ 10 ರಾಜ್ಯಗಳಲ್ಲಿ ದೃಢಪಡಿಸಲಾಗಿದೆ.

centre-alerts-after-bird-flu-hits-ten-states
10 ರಾಜ್ಯಗಳಲ್ಲಿ ಹಕ್ಕಿ ಜ್ವರ ದೃಢ
author img

By

Published : Jan 12, 2021, 10:25 AM IST

ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ನೂರಾರು ಪಕ್ಷಿಗಳು ಸಾವನ್ನಪ್ಪಿದ ಪ್ರಕರಣಗಳು ವರದಿಯಾಗಿವೆ. ಕೇಂದ್ರ ಸರ್ಕಾರ ಸಹ ಈವರೆಗೆ 10 ರಾಜ್ಯಗಳಲ್ಲಿ ಹಕ್ಕಿ ಜ್ವರ ಹರಡುವುದು ದೃಢಪಟ್ಟಿದೆ ಎಂದು ಹೇಳಿದೆ. ಇದನ್ನು ತಡೆಯುವ ಎಲ್ಲ ಕ್ರಮಗಳ ಮಧ್ಯೆ, ಮಾನವರಲ್ಲಿ ಹಕ್ಕಿ ಜ್ವರ ಹರಡುವಿಕೆಯ ಬಗ್ಗೆ ಯಾವುದೇ ವೈಜ್ಞಾನಿಕ ವರದಿಗಳು ಹೊರಬಂದಿಲ್ಲವಾದ್ದರಿಂದ, ರೂಸ್ಟರ್ ಮಾರುಕಟ್ಟೆಗಳನ್ನು ಮುಚ್ಚಬೇಡಿ, ಕೋಳಿ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಬಾರದು ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಕೋರಿದೆ.

ದೇಶದ ವಿವಿಧ ಭಾಗಗಳಲ್ಲಿ ಹಕ್ಕಿ ಜ್ವರದ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅದರ ಹರಡುವಿಕೆ ತಡೆಯಲು ಎಲ್ಲಾ ರಾಜ್ಯಗಳು ಎಚ್ಚರಿಕೆ ವಹಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಜಲಾಶಯಗಳು, ಪ್ರಾಣಿಸಂಗ್ರಹಾಲಯಗಳು ಮತ್ತು ಕೋಳಿ ಕೇಂದ್ರಗಳ ಸುತ್ತ ನಿರಂತರ ಮೇಲ್ವಿಚಾರಣೆ ನಡೆಸುವಂತೆ ಸ್ಥಳೀಯ ಆಡಳಿತವನ್ನು ಕೋರಿದ್ದಾರೆ. ಅರಣ್ಯ ಇಲಾಖೆ, ಆರೋಗ್ಯ ಇಲಾಖೆ, ಪಶುಸಂಗೋಪನಾ ಇಲಾಖೆ ನಡುವೆ ಹೆಚ್ಚು ಸಮನ್ವಯ ಸಾಧಿಸಿದರೆ, ಹಕ್ಕಿ ಜ್ವರವನ್ನು ವೇಗವಾಗಿ ನಿಯಂತ್ರಿಸಲು ನಮಗೆ ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಚೆನ್ನಾಗಿ ಬೇಯಿಸಿದ ಕೋಳಿ ಮತ್ತು ಮೊಟ್ಟೆಗಳನ್ನು ಬಳಸುವುದರಿಂದ ಸೋಂಕಿನ ಅಪಾಯವಿಲ್ಲ. ಏಕೆಂದರೆ ಹೆಚ್ಚಿನ ತಾಪಮಾನದಲ್ಲಿ ವೈರಸ್ ಬದುಕಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಪಶುಸಂಗೋಪನೆ ಮತ್ತು ಡೈರಿ ಇಲಾಖೆ ಹೇಳಿಕೆಯಲ್ಲಿ, ಏವಿಯನ್ ಇನ್​ಫ್ಲುಯೆಂಝಾವನ್ನು 11 ಜನವರಿ 2021 ರೊಳಗೆ ದೇಶದ 10 ರಾಜ್ಯಗಳಲ್ಲಿ ದೃಢಪಡಿಸಲಾಗಿದೆ.

ಜನವರಿ 10 ರ ಹೊತ್ತಿಗೆ ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಗುಜರಾತ್ ಮತ್ತು ಉತ್ತರಪ್ರದೇಶ ರಾಜ್ಯಗಳಲ್ಲಿ ಹಕ್ಕಿ ಜ್ವರ ಹರಡುವುದು ದೃಢಪಟ್ಟಿದೆ. ಅದೇ ಸಮಯದಲ್ಲಿ ದೆಹಲಿ, ಉತ್ತರಾಖಂಡ ಮತ್ತು ಮಹಾರಾಷ್ಟ್ರಗಳಲ್ಲಿ ಸೋಮವಾರ ಈ ವೈರಸ್ ಸೋಂಕು ದೃಢಪಟ್ಟಿದೆ. ಆದ ಕಾರಣ ಪಕ್ಷಿಗಳನ್ನು ಕೊಲ್ಲುವ ಕ್ರಮಕ್ಕೆ ಪಿಪಿಇ ಕಿಟ್‌ಗಳು ಮತ್ತು ಇತರ ಅಗತ್ಯ ಉಪಕರಣಗಳನ್ನು ಸಮರ್ಪಕವಾಗಿ ಸಂಗ್ರಹಿಸುವಂತೆ ಕೇಂದ್ರವು ರಾಜ್ಯಗಳಿಗೆ ನಿರ್ದೇಶನ ನೀಡಿದೆ.

ಇದನ್ನೂ ಓದಿ: ಹಕ್ಕಿ ಜ್ವರ ಹರಡದಂತೆ ನಿಗಾ ವಹಿಸಿ: ಎಲ್ಲ ರಾಜ್ಯಗಳ ಸಿಎಂಗಳಿಗೆ ಪ್ರಧಾನಿ ಸಲಹೆ

ಪಶುಪಾಲನಾ ಸಚಿವ ಗಿರಿರಾಜ್ ಸಿಂಗ್, ಮಾನವರಲ್ಲಿ ಹಕ್ಕಿ ಜ್ವರ ಹರಡುವ ಬಗ್ಗೆ ಯಾವುದೇ ವೈಜ್ಞಾನಿಕ ವರದಿ ಇಲ್ಲ. ಗ್ರಾಹಕರನ್ನು ಭಯಭೀತರಾಗಿಸುವ ಅಗತ್ಯವಿಲ್ಲ. ದೆಹಲಿ ಸೇರಿದಂತೆ ಎಲ್ಲ ರಾಜ್ಯ ಸರ್ಕಾರಗಳು ರೂಸ್ಟರ್ ಮಾರುಕಟ್ಟೆಗಳನ್ನು ಮುಚ್ಚಬಾರದು ಅಥವಾ ಕೋಳಿ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಬಾರದು ಎಂದು ಅವರು ಕೇಳಿಕೊಂಡಿದ್ದಾರೆ.

ದೆಹಲಿ: ಸಂಜಯ್ ಸರೋವರದಲ್ಲಿ ಬಾತುಕೋಳಿಗಳು ಹಕ್ಕಿ ಜ್ವರದ ಸೋಂಕಿಗೆ ಒಳಗಾದ ನಂತರ ನಗರದ ಹೊರಗಿನಿಂದ ಸಂಸ್ಕರಿಸಿದ ಮತ್ತು ಪ್ಯಾಕ್​ ಮಾಡಿದ ಕೋಳಿ ಮಾರಾಟವನ್ನು ದೆಹಲಿ ಸರ್ಕಾರ ಸೋಮವಾರ ನಿಷೇಧಿಸಿದೆ. ಸಂಜಯ್ ಸರೋವರದ ಬಾತುಕೋಳಿಗಳಲ್ಲಿ ಮಾತ್ರ ಇಲ್ಲಿಯವರೆಗೆ ಹಕ್ಕಿ ಜ್ವರ ಸೋಂಕು ಕಂಡುಬಂದಿದೆ. ಜನರು ಭಯಭೀತರಾಗಬಾರದು. ಚಿಂತಿಸಬೇಕಾಗಿಲ್ಲ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ಹರಿಯಾಣ: ದೆಹಲಿಯ ನೆರೆಯ ರಾಜ್ಯವಾದ ಹರಿಯಾಣದಲ್ಲಿ ವೈರಸ್ ಹರಡುವುದನ್ನು ತಡೆಗಟ್ಟಲು ಸೋಂಕಿತ ಪಕ್ಷಿಗಳನ್ನು ಕೊಲ್ಲಲು ಕ್ರಮ ಕೈಗೊಳ್ಳಲಾಗಿದೆ. ಪಂಚಕುಲದಲ್ಲಿ, ಹಕ್ಕಿ ಜ್ವರಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಮತ್ತು ಪಶುಸಂಗೋಪನಾ ಸಚಿವಾಲಯದ ಸೂಚನೆಯಂತೆ ಜಿಲ್ಲಾ ಕಾರ್ಯಪಡೆ ತಂಡ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಇತರ ಕೋಳಿ ಸಾಕಣೆ ಕೇಂದ್ರಗಳಲ್ಲಿ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ, ಪಶುಸಂಗೋಪನೆ ಮತ್ತು ಆರೋಗ್ಯ ಇಲಾಖೆ ತಂಡವು ಹಕ್ಕಿಯನ್ನು ಜ್ವರದಿಂದ ರಕ್ಷಿಸಲು ಔಷಧಗಳನ್ನು ನೀಡುತ್ತಿದೆ. ಸುಮಾರು 40 ಕ್ಷಿಪ್ರ ಕ್ರಿಯಾ ತಂಡಗಳು ಪಕ್ಷಿ ಹತ್ಯೆಯನ್ನು ಮಾಡುತ್ತಿವೆ. ಪಶುಸಂಗೋಪನೆ ಮತ್ತು ಆರೋಗ್ಯ ಇಲಾಖೆಯ ತಂಡವು ಈ ತಂಡಗಳಿಗೆ ಟೆಮಿಫ್ಲು ಔಷಧಗಳನ್ನು ನೀಡುತ್ತಿದೆ ಮತ್ತು ರಾಯ್‌ಪುರಾನಿಯ ನಾಲ್ಕು ಶಾಲೆಗಳಲ್ಲಿ ಅವುಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಹಿಮಾಚಲ ಪ್ರದೇಶ: ಹಕ್ಕಿ ಜ್ವರ ಭೀತಿಯ ಮಧ್ಯೆ ಇತರ ರಾಜ್ಯಗಳಿಂದ ಬರುವ ಎಲ್ಲಾ ಕೋಳಿ ಹಾಗೂ ಕೋಳಿ ಸಂಬಂಧಿತ ಉತ್ಪನ್ನಗಳನ್ನು ಹಿಮಾಚಲ ಪ್ರದೇಶ ಸರ್ಕಾರ ಒಂದು ವಾರ ನಿಷೇಧಿಸಿದೆ. ಸೋಂಕು ವರದಿಯಾದ ಕೋಳಿ ಸಾಕಾಣಿಕೆ ಕೇಂದ್ರಗಳ 1 ಕಿ.ಮೀ ವ್ಯಾಪ್ತಿಯನ್ನು ಸೋಂಕಿತ ವಲಯ ಮತ್ತು 1 ರಿಂದ 10 ಕಿ.ಮೀ ಪರಿಧಿಯನ್ನು ಕಣ್ಗಾವಲು ವಲಯ ಎಂದು ಘೋಷಿಸಲಾಗಿದೆ. ಸುಮಾರು 20 ಸಾವಿರ ಪಕ್ಷಿಗಳನ್ನು ಕೊಲ್ಲಲಾಗಿದೆ.

ಇದನ್ನೂ ಓದಿ: ಹಕ್ಕಿ ಜ್ವರದ ಭೀತಿ: ಪಂಚಕುಲದಲ್ಲಿ 20 ಸಾವಿರ ಕೋಳಿಗಳ ಮಾರಣಹೋಮ

ಉತ್ತರಾಖಂಡ: ಉತ್ತರಾಖಂಡದ ಡೆಹ್ರಾಡೂನ್ ಮತ್ತು ರಿಷಿಕೇಶದಲ್ಲಿ ಹಲವಾರು ಕಾಗೆಗಳು ಸೇರಿದಂತೆ ಸುಮಾರು 200 ಪಕ್ಷಿಗಳು ಮೃತಪಟ್ಟಿವೆ. ಡೆಹ್ರಾಡೂನ್‌ನ ವಿವಿಧ ಭಾಗಗಳಲ್ಲಿ 165 ಪಕ್ಷಿಗಳು ಸತ್ತಿದ್ದು, ಅವುಗಳಲ್ಲಿ 121 ಕಾಗೆಗಳು ಭಂಡಾರಿ ಬಾಗ್ ಪ್ರದೇಶದಲ್ಲಿ ಮಾತ್ರ ಮೃತಪಟ್ಟಿವೆ. ಅರಣ್ಯ ವಿಭಾಗೀಯ ಅಧಿಕಾರಿ ರಾಜೀವ್ ಧೀಮಾನ್ ಮಾತನಾಡಿ, ಡೆಹ್ರಾಡೂನ್‌ನಲ್ಲಿ ಶವವಾಗಿ ಪತ್ತೆಯಾದ ಪಕ್ಷಿಗಳಲ್ಲಿ 162 ಕಾಗೆಗಳು, ಎರಡು ಪಾರಿವಾಳಗಳು ಮತ್ತು ಕೆಲವು ಬೇರೆ ಪಕ್ಷಿಗಳಿವೆ ಎಂದು ಹೇಳಿದ್ದಾರೆ.

ರಾಜಸ್ಥಾನ: ಸೋಮವಾರ, ರಾಜಸ್ಥಾನದಲ್ಲಿ ಇನ್ನೂ 371 ಪಕ್ಷಿಗಳು ಸಾವನ್ನಪ್ಪಿವೆ. ಪಕ್ಷಿ ಜ್ವರದಿಂದ ರಾಜ್ಯದ 15 ಜಿಲ್ಲೆಗಳು ಬಾಧಿಸುತ್ತಿವೆ. ರಾಜ್ಯದಲ್ಲಿ ಇನ್ನೂ 371 ಪಕ್ಷಿಗಳು ಸಾವನ್ನಪ್ಪಿರುವ ಕಾರಣ, ರಾಜ್ಯದಲ್ಲಿ ಈವರೆಗೆ ಪಕ್ಷಿಗಳ ಸಾವಿನ ಸಂಖ್ಯೆ 3321ಕ್ಕೆ ತಲುಪಿದೆ ಎಂದು ಪಶುಸಂಗೋಪನಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ. 2020 ಡಿಸೆಂಬರ್ 26 ರಿಂದ ನಿನ್ನೆಯ ವರೆಗೆ ಸತ್ತ 3321 ಪಕ್ಷಿಗಳಲ್ಲಿ ಹೆಚ್ಚಿನವು ಕಾಗೆ (2551), ಮೌರ್ (189), ಪಾರಿವಾಳ (190) ಮತ್ತು 391 ಇತರ ಪಕ್ಷಿಗಳನ್ನು ಒಳಗೊಂಡಿವೆ.

ಉತ್ತರ ಪ್ರದೇಶ: ಉತ್ತರ ಪ್ರದೇಶದ ಶಹಜಹಾನಪುರ ಮತ್ತು ಬಲ್ಲಿಯಾ ಜಿಲ್ಲೆಗಳಲ್ಲಿ, ವಿವಿಧ ಜಾತಿಯ ಪಕ್ಷಿಗಳು ಸಾವನ್ನಪ್ಪಿದ ಹೊಸ ಘಟನೆಗಳು ವರದಿಯಾಗಿದೆ. ಈ ಜ್ವರವನ್ನು ತಡೆಗಟ್ಟಲು ರಾಜ್ಯದಲ್ಲಿ ಜಾಗರೂಕತೆ ಹೆಚ್ಚಿಸಲಾಗಿದೆ. ಭಾನುವಾರ ರಾತ್ರಿ ಸಹತ್ವಾರ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಐದು ಕಾಗೆಗಳು ಅನುಮಾನಾಸ್ಪದವಾಗಿ ಮೃತಪಟ್ಟಿವೆ. ಕಾನ್ಪುರ್ ಮೃಗಾಲಯದಲ್ಲಿ ಸತ್ತ ಕೆಲವು ಪಕ್ಷಿಗಳಲ್ಲಿ ಪಕ್ಷಿ ಜ್ವರ ಕಂಡುಬಂದ ನಂತರ, ಲಖನೌ ಝೂಲಾಜಿಕಲ್ ಅಡ್ಮಿನಿಸ್ಟ್ರೇಷನ್ ತನ್ನ ಪಕ್ಷಿ ಆವರಣವನ್ನು ಮುಚ್ಚಿದೆ ಮತ್ತು ಪಕ್ಷಿಗಳ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಹಕ್ಕಿ ಜ್ವರ ಭೀತಿಯ ನಡುವೆ ಮುಜಾಫರ್ಪುರದಲ್ಲಿ ಹೆಚ್ಚಿನ ಸಂಖ್ಯೆಯ ಮೀನುಗಳು ಸಾಯುತ್ತಿವೆ. ಇದರಿಂದಾಗಿ ಮೀನುಗಾರರು ಚಿಂತಿತರಾಗಿದ್ದಾರೆ. ವಾಸ್ತವವಾಗಿ, ಕಳೆದ ಕೆಲವು ದಿನಗಳಿಂದ, ಜಲಾಶಯಗಳಲ್ಲಿನ ಕಾಯಿಲೆಯಿಂದಾಗಿ ಹೆಚ್ಚಿನ ಸಂಖ್ಯೆಯ ಮೀನುಗಳು ಸಾಯುತ್ತಿವೆ.

ಮಹಾರಾಷ್ಟ್ರ: ಭೋಪಾಲ್ ಪ್ರಯೋಗಾಲಯದ ತನಿಖಾ ವರದಿಯ ಆಧಾರದ ಮೇಲೆ ಮಹಾರಾಷ್ಟ್ರದ ಪರಭಾನಿ, ಮುಂಬೈ, ಬೀಡ್ ಮತ್ತು ದಪೋಲಿಯಲ್ಲಿ ವಿವಿಧ ಪಕ್ಷಿಗಳು ಹಕ್ಕಿ ಜ್ವರದಿಂದ ಸಾವನ್ನಪ್ಪಿರುವುದು ವರದಿಯಾಗಿದೆ. ಮುರುಂಬಾ ಗ್ರಾಮದ ಕೋಳಿ ಸಾಕಾಣಿಕೆ ಕೇಂದ್ರದಲ್ಲಿ ಕಳೆದ ಕೆಲವು ದಿನಗಳಲ್ಲಿ ಸುಮಾರು 900 ಕೋಳಿಗಳು ಹಕ್ಕಿ ಜ್ವರದಿಂದ ಸಾವನ್ನಪ್ಪಿರುವುದು ದೃಢಪಟ್ಟಿದೆ. ಗ್ರಾಮದಲ್ಲಿ ಸುಮಾರು 8,000 ಪಕ್ಷಿಗಳನ್ನು ಕೊಲ್ಲಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಪರಭಾನಿ ಜಿಲ್ಲಾಧಿಕಾರಿ ದೀಪಕ್ ಮೊಘಾಲಿಕರ್ ತಿಳಿಸಿದ್ದಾರೆ.

ಮಧ್ಯಪ್ರದೇಶ: ಭೋಪಾಲ್‌ನ ಐಸಿಎಆರ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ ಪ್ರಕಾರ, ಮುಂಬೈನಲ್ಲಿ ಪಕ್ಷಿ ಜ್ವರದಿಂದ ಎರಡು ಕಾಗೆಗಳು ಸಾವನ್ನಪ್ಪಿವೆ. ಅವರ ವರದಿಯ ಪ್ರಕಾರ, ಥಾಣೆಯ ಮೂರು ಹೆರಾನ್​ಗಳು ಮತ್ತು ಗಿಳಿಯು ಎಚ್ 5 ಎನ್ 1 ಏವಿಯನ್ ಇನ್​ಫ್ಲುಯೆಂಝಾದಿಂದ ಸೋಂಕಿಗೆ ಒಳಗಾಗಿದ್ದವು. ಇದಲ್ಲದೆ, ಭೋಪಾಲ್‌ನ ಅದೇ ಸಂಸ್ಥೆಯ ಪ್ರಕಾರ, ಒಂದು ಕೋಳಿ ಮತ್ತು ಎರಡು ಹೆರಾನ್‌ಗಳ ಪರಭಾನಿ, ಬೀಡ್ ಮತ್ತು ದಪೋಲಿಯ ಕಾಗೆಗಳು ಎಚ್ 5 ಎನ್ 1 ಇಂಡಿಯನ್ ಇನ್​ಫ್ಲುಯೆಂಝಾದಿಂದ ಸೋಂಕಿಗೆ ಒಳಗಾಗಿದ್ದವು.

ಗುಜರಾತ: ಗುಜರಾತ್‌ನ ಸೂರತ್ ಮತ್ತು ವಡೋದರಾ ಜಿಲ್ಲೆಗಳಲ್ಲಿ ಹಕ್ಕಿ ಜ್ವರದ ಸೋಂಕಿಗೆ ಒಳಗಾದ ಸತ್ತ ಕಾಗೆಗಳ ಮಾದರಿಗಳು ಪತ್ತೆಯಾದ ನಂತರ ಎರಡೂ ಜಿಲ್ಲೆಗಳಲ್ಲಿ ಪಕ್ಷಿ ಜ್ವರ ದೃಢಪಟ್ಟಿದೆ. ವಡೋದರಾ ಜಾನುವಾರು ಇಲಾಖೆಯ ಉಪನಿರ್ದೇಶಕ ಪ್ರಕಾಶ್ ದರ್ಜಿ ಮಾತನಾಡಿ, ವಡೋದರಾದ ಸಾಲ್ವಿ ತಾಲ್ಲೂಕಿನ ವಸಂತಪುರ ಗ್ರಾಮದಿಂದ ಐದು ಕಾಗೆಗಳ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಈ ಪೈಕಿ ಮೂರು ಪಕ್ಷಿ ಜ್ವರ ಸೋಂಕಿಗೆ ಒಳಗಾಗಿರುವುದು ಖಚಿತವಾಗಿದೆ. ಜನವರಿ 6 ರಂದು ವಸಂತಪುರ ಗ್ರಾಮದಲ್ಲಿ 25 ಕಾಗೆಗಳು ಶವವಾಗಿ ಪತ್ತೆಯಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.