ನವದೆಹಲಿ: ನಕ್ಸಲ್ ಪೀಡಿತ ಪ್ರದೇಶಗಳಲ್ಲಿ 2ಜಿ ಮೊಬೈಲ್ ಸೇವೆಗಳನ್ನು 4ಜಿಗೆ ಅಪ್‌ಗ್ರೇಡ್ ಮಾಡುವ ಸಾರ್ವತ್ರಿಕ ಸೇವಾ ಹೊಣೆಗಾರಿಕೆ ನಿಧಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಈ ಯೋಜನೆಯು 2,343 ಎಡಪಂಥೀಯ ಉಗ್ರವಾದದ ತಾಣಗಳಲ್ಲಿ ಹಂತ-1ರ ಭಾಗವಾಗಿ 2ಜಿ ಯಿಂದ 4 ಜಿ ಮೊಬೈಲ್ ಸೇವೆ ಆರಂಭಕ್ಕೆ 1,884 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ (ತೆರಿಗೆಗಳು ಮತ್ತು ತೆರಿಗೆ ಹೊರತುಪಡಿಸಿ) ನವೀಕರಿಸಲು ಯೋಜಿಸಲಾಗಿದೆ. ಇದು 5 ವರ್ಷಗಳ ಅವಧಿಯ ಯೋಜನೆಯಾಗಿದೆ. ಇದನ್ನು ಸರ್ಕಾರಿ ಸ್ವಾಮ್ಯದಲ್ಲಿರುವ ಬಿಎಸ್‌ಎನ್‌ಎಲ್ ಟೆಲಿಕಾಂಗೆ ನೀಡಲು ಉದ್ದೇಶಿಸಲಾಗಿದೆ.
BSNL ತನ್ನ ಸ್ವಂತ ವೆಚ್ಚದಲ್ಲಿ ಈ ಪ್ರದೇಶಗಳನ್ನು 5 ವರ್ಷಗಳವರೆಗೆ ನಿರ್ವಹಿಸುತ್ತದೆ. ಅಲ್ಲದೇ, ಈ ಭಾಗಗಳು ಬಿಎಸ್‌ಎನ್‌ಎಲ್ ನೆಟ್ವರ್ಕ್ನಲ್ಲಿ ಬರುವುದರಿಂದ ಇದನ್ನು ಅದೇ ಸಂಸ್ಥೆಗೆ ನೀಡಲಾಗುವುದು. 541.80 ಕೋಟಿ ರೂ. ಅಂದಾಜು ವೆಚ್ಚದಲ್ಲಿ 5 ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳಲು ಕ್ಯಾಬಿನೆಟ್ ಅನುಮೋದಿಸಿದೆ.
ಓದಿ: ಗ್ರಾಹಕರ ಸೆಳೆಯಲು ವಾಟ್ಸಾಪ್ನಿಂದ ಹಣ ಪಾವತಿಗೆ ಕ್ಯಾಶ್ಬ್ಯಾಕ್ ಆಫರ್