ಕೋಲ್ಕತ್ತಾ: ಅಲಪನ್ ಬಂಡೋಪಾಧ್ಯಾಯ ನಿವೃತ್ತಿ ನಂತರವೂ ಬಂಗಾಳದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವಿನ ಸಮರ ನಿಲ್ಲುವ ಲಕ್ಷಣ ಗೋಚರಿಸುತ್ತಿಲ್ಲ. ಮೋದಿ ಸರ್ಕಾರ ಅಲಪನ್ಗೆ ಶೋಕಾಸ್ ನೋಟಿಸ್ ನೀಡಿದೆ.
ಯಾಸ್ ದುರಂತ ವೀಕ್ಷಣೆಗೆ ಬಂದಿದ್ದ ಪ್ರಧಾನಿ ಮೋದಿ ಕರೆದಿದ್ದ ಸಭೆಗೆ ಅಂದಿನ ರಾಜ್ಯ ಸರ್ಕಾರ ಮುಖ್ಯ ಕಾರ್ಯಕರ್ಶಿಯಾಗಿದ್ದ ಅಲಪನ್ ಯಾಕೆ ಹಾಜರಾಗಲಿಲ್ಲ ಎಂದು ಕೇಳಲಾಗಿದೆ. ಅಲ್ಲದೇ ಶೀಘ್ರವೇ ಇದಕ್ಕೆ ಉತ್ತರಿಸಬೇಕೆಂದು ತಾಕೀತು ಮಾಡಿದೆ. ವಿಪತ್ತು ನಿರ್ವಹಣಾ ಕಾಯ್ದೆ ನಿಬಂಧನೆಗಳಡಿ ಕೇಂದ್ರ ಸರ್ಕಾರವು ಬಂಡೋಪಾಧ್ಯಾರಿಗೆ ನೋಟಿಸ್ ಜಾರಿ ಮಾಡಿದೆ.
ಇದನ್ನೂ ಓದಿ:ಕೊರೊನಾ ಕಹಿ ನಡುವೆ ಸಿಹಿ ಸುದ್ದಿ: ಸಿಲಿಂಡರ್ ದರದಲ್ಲಿ 122 ರೂ. ಇಳಿಕೆ
ಮೇ 29 ರಂದು ಬಂಡೋಪಾಧ್ಯಾಯರನ್ನು ಬಂಗಾಳ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ವಜಾಗೊಳಿಸಿ, ಕೇಂದ್ರ ಸರ್ಕಾರವು ಉನ್ನತ ಹುದ್ದೆಗೆ ನೇಮಿಸಿತ್ತು. ಅಲ್ಲದೇ ಮೇ 31 ರಂದು ಕರ್ತವ್ಯಕ್ಕೆ ಹಾಜರಿರುವಂತೆ ಸೂಚಿಸಿತ್ತು. ಆದರೆ, ಅಲಪನ್ ಕೇಂದ್ರದ ಆದೇಶವನ್ನು ಧಿಕ್ಕರಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ಮಧ್ಯೆ ಸಿಎಂ ಮಮತಾ ಬ್ಯಾನರ್ಜಿ, ಅಲಪನ್ ಅವರನ್ನು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡಿದ್ದಾರೆ.