ETV Bharat / bharat

ಎಲ್ಲಾ ಪರಿಶೀಲಿಸಿದ ಬಳಿಕವೇ ಕೋವ್ಯಾಕ್ಸಿನ್‌ಗೆ ಅನುಮತಿ; ಕೇಂದ್ರ ಆರೋಗ್ಯ ಸಚಿವರ ಸ್ಪಷ್ಟನೆ

ಕೋವಿಡ್ ಲಸಿಕೆ ಕೋವ್ಯಾಕ್ಸಿನ್‌ 3ನೇ ಹಂತದ ಡೇಟಾ ಪ್ರಕಟಿಸುವ ಮೊದಲೇ ಅನುಮತಿ ಸೇರಿದಂತೆ ಹಲವು ಟೀಕೆಗಳನ್ನು ನಿರಾಕರಿಸಿರುವ ಕೇಂದ್ರ ಸರ್ಕಾರ, ಸಾರ್ವಜನಿಕರ ಹಿತಾಸಕ್ತಿಗಾಗಿ ಎಲ್ಲಾ ಅಂಶಗಳನ್ನು ಪರಿಶೀಲಿಸಿದ ನಂತರ ತುರ್ತು ಪರವಾನಗಿ ನೀಡಲಾಗಿದೆ ಎಂದು ಆರೋಗ್ಯ ಸಚಿವರು ಸ್ಪಷ್ಟಪಡಿಸಿದ್ದಾರೆ.

center has clarified that after checking all kind of data about covaxin covid vaccine and then given permission for using
ಎಲ್ಲಾ ಪರಿಶೀಲಿಸಿದ ಬಳಿಕವೇ ಕೋವ್ಯಾಕ್ಸಿನ್‌ಗೆ ಅನುಮತಿ; ಕೇಂದ್ರ ಆರೋಗ್ಯ ಸಚಿವರ ಸ್ಪಷ್ಟನೆ
author img

By

Published : Jul 31, 2021, 11:18 AM IST

ನವದೆಹಲಿ: ಕೋವಾಕ್ಸಿನ್ ಬಳಕೆಗೆ ಅನುಮತಿ ನೀಡಿರುವುದಕ್ಕೆ ಕೇಳಿ ಬರುತ್ತಿರುವ ಟೀಕೆಗಳಿಗೆ ಕೇಂದ್ರ ಸರ್ಕಾರ ತಿರುಗೇಟು ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್, ಸಾರ್ವಜನಿಕರ ಹಿತಾಸಕ್ತಿಗಾಗಿ ಎಲ್ಲಾ ಅಂಶಗಳನ್ನು ಪರಿಶೀಲಿಸಿದ ನಂತರ ತುರ್ತು ಪರವಾನಗಿ ನೀಡಲಾಗಿದೆ. ಹಾಗೂ ಲಸಿಕೆ ರೂಪಾಂತರಿ ವೈರಸ್ ಮೇಲೆ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸಾಬೀತುಪಡಿಸಿದೆ ಎಂದು ಪವಾರ್‌ ಹೇಳಿದ್ದಾರೆ.

ಮೂರನೇ ಹಂತದ ಪರೀಕ್ಷೆಯ ಡೇಟಾ ಪ್ರಕಟಿಸುವ ಮೊದಲು ಕೋವಾಕ್ಸಿನ್‌ ಅನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಕೇಂದ್ರವು ಗಣನೆಗೆ ತೆಗೆದುಕೊಂಡಿದೆಯೇ? ಕೇಂದ್ರ ಸರ್ಕಾರವು ಕೋವಾಕ್ಸಿನ್‌ ಹೊಸ ಪ್ರಯೋಗದ ನಿಯಮಗಳನ್ನು ಅನುಸರಿಸಲಿಲ್ಲ ಎಂದು ತಿಳಿದಿದೆಯೇ? ಡ್ರಗ್ಸ್ ಅಂಡ್ ಹ್ಯೂಮನ್ಸ್ -2019 '26 ನೇ ಹಂತದ ಪ್ರಯೋಗಗಳಲ್ಲಿ 2020ರ ಡಿಸೆಂಬರ್‌ 30 ಮತ್ತು 2021ರ ಜನವರಿ 2 ರ ನಡುವೆ ನಡೆಸಲಾಗಿದೆಯೇ? ಸಭೆಯಲ್ಲಿ ಡ್ರಗ್ ಕಂಟ್ರೋಲ್ ಆಫ್ ಇಂಡಿಯಾ (ಡಿಸಿಜಿಐ) ತಜ್ಞರ ಸಮಿತಿ ಕೋವ್ಯಾಕ್ಸಿನ್‌ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಬದಲಾಯಿಸಿ ಅನುಮೋದಿಸಿದ್ದು. ಕ್ಲಿನಿಕಲ್ ಟ್ರಯಲ್‌ಗೆ ಅನುಮತಿ ಕೊಟ್ಟಿದ್ದಾರಾ? ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಮನೀಶ್ ತಿವಾರಿ ಕೇಳಿದ ಪ್ರಶ್ನೆಗಳಿಗೆ ಕೇಂದ್ರ ಸಚಿವರು ಈ ಸ್ಪಷ್ಟನೆಯ ಉತ್ತರ ನೀಡಿದ್ದಾರೆ.

ಭಾರತದ ಬಯೋಟೆಕ್ ಕಂಪನಿಯು ಹೊಸ ಔಷಧ ಮತ್ತು ಮಾನವರ ಮೇಲಿನ ಪ್ರಯೋಗಗಳ ನಿಯಮಗಳ ಪ್ರಕಾರ ರಸಾಯನಶಾಸ್ತ್ರ, ಉತ್ಪಾದನೆ ಮತ್ತು ನಿಯಂತ್ರಣ (CMC), ವೈದ್ಯಕೀಯೇತರ (ಪ್ರಾಣಿ ಅಧ್ಯಯನಗಳು) ಡೇಟಾವನ್ನು ಸಂಪೂರ್ಣವಾಗಿ ಸಲ್ಲಿಸಿದೆ. ಈ ನಿಷಯವನ್ನು ಕೇಂದ್ರ ಔಷಧ ನಿಯಂತ್ರಣ ಮಂಡಲಿ ಪರಿಶೀಲಿಸಿ ಬಳಿಕವೇ ಕೋವ್ಯಾಕ್ಸಿನ್‌ ಉತ್ಪಾದನೆ, ಮಾರ್ಕೆಟಿಂಗ್‌ಗೆ ಅನುಮತಿ ನೀಡಿದೆ.

ಇದನ್ನೂ ಓದಿ: 'ಆಗಸ್ಟ್‌ನಲ್ಲಿ ಮಕ್ಕಳಿಗೆ ಕೋವಿಡ್‌-19 ಲಸಿಕೆ ಸಾಧ್ಯತೆ'

ಭಾರತ್​ ಬಯೋಟೆಕ್ ಸಂಸ್ಥೆ ಈ ವ್ಯಾಕ್ಸಿನ್‌ನ 1 ಹಾಗೂ 2ನೇ ಹಂತ ಕ್ಲಿನಿಕಲ್‌ ಟ್ರಯಲ್ಸ್‌ ಡೇಮಾ, ದೇಶದಲ್ಲಿ ಮುಂದುವರಿದ 3ನೇ ಹಂತದ ವೈದ್ಯಕೀಯ ಪ್ರಯೋಗಗಳನ್ನು ಕೇಂದ್ರ ಔಷಧ ನಿಯಂತ್ರಣ ಸಂಸ್ಥೆ ಪರಿಶೀಲಿಸಿದೆ.

ಇನ್‌ಆ್ಯಕ್ಟಿವೇಟೆಡ್‌ ಹೋಲ್‌ ವೇರಿಯಂಟ್‌ ಕೊರೊನಾ ವ್ಯಾಕ್ಸಿನ್‌ ಎಂದು ಪರಿವರ್ತಿತ ವೈರಸ್‌ ಮೇಲೆ ಪರಿಣಾಮ ಬೀರುವ ಸಾಮರ್ಥ್ಯ ಈ ಲಸಿಕೆಗೆ ಇದೆ ಎಂದು ತಜ್ಞರು ಕಂಡುಕೊಂಡಿದ್ದಾರೆ. ಇದನ್ನು ಪ್ರಸ್ತುತ 25,800 ಭಾರತೀಯರ ಮೇಲೆ ವ್ಯಾಪಕವಾಗಿ ಪ್ರಯೋಗ ನಡೆಯುತ್ತಿದೆ. ಇಲ್ಲಿಯವರೆಗೆ ಲಸಿಕೆ ಸುರಕ್ಷಿತವಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದು ಭಾರತಿ ಪ್ರವೀಣ್ ಪವಾರ್ ಹೇಳಿದ್ದಾರೆ.

ಕೋತಿಗಳ ಮೇಲೆ ಭಾರತ್‌ ಬಯೋಟೆಕ್‌ ನಡೆಸಿದ ಪ್ರಯೋಗದ ಡೇಟಾ, ಆನಂತರ ಕೋವ್ಯಾಕ್ಸಿನ್‌ 3ನೇ ಹಂತದ ಕ್ರಿನಿಕಲ್‌ ಟ್ರಯಲ್ಸ್‌ಗೆ ಸಂಬಂಧಿಸಿದ ಮಧ್ಯಂತರ ಭದ್ರತೆ, ಸಮರ್ಥ ಮಾಹಿತಿಯನ್ನು ಭಾರತ್ ಬಯೋಟೆಕ್​​ ಔಷಧ ಡಿಸಿಜಿಐಗೆ ಸಲ್ಲಿಸಿದೆ. 'ಕ್ಲಿನಿಕಲ್‌ ಟ್ರಯಲ್‌ ಮೋಡ್‌' ಸ್ಥಿತಿಯನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ ಎಂದೂ ಸಚಿವೆ ಪವಾರ್​ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.