ETV Bharat / bharat

ಸುಸ್ಥಿರತೆಯತ್ತ ಹೆಜ್ಜೆ.. ಪರಿಸರ ಸ್ನೇಹಿ ರಕ್ಷಾಬಂಧನ ಆಚರಣೆಗೆ ಯುವ ಪೀಳಿಗೆ ಒಲವು.. - rakshabandhan

ಪರಿಸರವನ್ನು ಸಂರಕ್ಷಿಸುವ ಮತ್ತು ಸುಸ್ಥಿರತೆ ಹೆಚ್ಚು ಹೆಚ್ಚು ಸೂಕ್ಷ್ಮತೆಯನ್ನು ಪಡೆಯುತ್ತಿದ್ದಂತೆ, ಯುವ ಪೀಳಿಗೆಯು ಭಾರತೀಯ ಹಬ್ಬಗಳನ್ನು ಪರಿಸರ ಸ್ನೇಹಿ ರೀತಿಯಲ್ಲಿ ಆಚರಿಸಲು ಆರಂಭಿಸಿದೆ. ರಕ್ಷಾ ಬಂಧನವನ್ನು ಸಹ ಅದೇ ರೀತಿಯಲ್ಲಿ ಆಚರಿಸಲಾಗುತ್ತದೆ..

Celebrating A Sustainable Rakhi
ರಕ್ಷಾಬಂಧನ ಆಚರಣೆ
author img

By

Published : Aug 21, 2021, 9:37 PM IST

ಯುವ ಪೀಳಿಗೆಯು ಭಾರತೀಯ ಹಬ್ಬಗಳನ್ನು ಪರಿಸರ ಸ್ನೇಹಿ ರೀತಿಯಲ್ಲಿ ಆಚರಿಸಲು ಮುಂದಾಗಿದೆ. ಈ ಹಿನ್ನೆಲೆ ಈ ಬಾರಿಯ ರಕ್ಷಾ ಬಂಧನವನ್ನು ತ್ಯಾಜ್ಯ ರಹಿತ ಪರಿಸರ ಸ್ನೇಹಿ ರೀತಿಯಲ್ಲಿ ಆಚರಿಸಲಾಗುತ್ತದೆ.

ಸುಸ್ಥಿರ ರಾಖಿ ಹಬ್ಬ ಆಚರಿಸಲಾಗುತ್ತಿದೆ : ಪರಿಸರ ಸ್ನೇಹಿ ಆಚರಣೆಯು ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತು ಪೂರೈಕೆ ಎರಡನ್ನೂ ಹೆಚ್ಚಿಸುತ್ತಿರುವುದರಿಂದ, ಗಣೇಶ ಚತುರ್ಥಿ ಮತ್ತು ಹೋಳಿಯಂತಹ ಹಬ್ಬಗಳಿಗೆ ತ್ಯಾಜ್ಯ ರಹಿತ ಪರಿಸರ ಸ್ನೇಹಿ ಉತ್ಪನ್ನಗಳನ್ನು ಬ್ರ್ಯಾಂಡ್‌ಗಳು ಪ್ರಯೋಗಿಸುತ್ತಿವೆ.

ಈ ವರ್ಷ, ಸುಸ್ಥಿರ ರಕ್ಷಾ ಬಂಧನ ಬ್ರ್ಯಾಂಡ್​​ಗಳ ಕಡೆಗೆ ಪ್ರಜ್ಞಾಪೂರ್ವಕವಾದ ಬದಲಾವಣೆಯು ಕಂಡು ಬರುತ್ತಿದೆ. ಅವುಗಳಲ್ಲಿ ಕೆಲವು ಬಳಕೆಯ ನಂತರ ನೆಡಬಹುದಾದ ಬೀಜಗಳನ್ನು ಒಳಗೊಂಡಿರುತ್ತವೆ. ಸಜ್ಕೆ, ವಡೋದರಾ ಮೂಲದ ಸುಸ್ಥಿರ ಬ್ರ್ಯಾಂಡ್ ಆಗಿದ್ದು, ಶೂನ್ಯ ತ್ಯಾಜ್ಯ ಉತ್ಪನ್ನಗಳೊಂದಿಗೆ ಕರಕುಶಲ, ಬಟ್ಟೆಗಳನ್ನು ತಯಾರಿಸುತ್ತದೆ.

ಅದರಲ್ಲಿ ಸಾಸಿವೆ ಬೀಜಗಳಿವೆ. ಈ ಬ್ರ್ಯಾಂಡ್​ ಕೂಡ ಗಿಡ-ಬೆಳೆಯುವ ಕಿಟ್ ಅನ್ನು ತಂದಿದೆ, ರಾಖಿಗಳನ್ನು ಒಳಗೊಂಡಿದೆ. ಇದು ಜೈವಿಕ ವಿಘಟನೀಯ ಮಡಕೆ, ಬೀಜಗಳು, ನಾರು ಮತ್ತು ಸಾವಯವ ಗೊಬ್ಬರವನ್ನು ಒಳಗೊಂಡಿದೆ. 'ವೇದಿಕ್​​ ರಾಖಿ'ಯಲ್ಲಿ ಅರಿಶಿನ, ಶ್ರೀಗಂಧ ಮತ್ತು ಕುಂಕುಮದ ಅಂಶಗಳೂ ಇವೆ.

ಸಜ್ಕೆಯ ಮಾಲೀಕರು ಮತ್ತು ಸಂಸ್ಥಾಪಕರಾದ ದಿವ್ಯಾ ಅಡ್ವಾಣಿ ಪ್ರತಿಕ್ರಿಯಿಸಿ,"ಪ್ರಜ್ಞಾವಂತ ಗ್ರಾಹಕರು ಬದಲಾವಣೆಯ ಭಾಗವಾಗಲು ಬಯಸುತ್ತಾರೆ, ಅವರು ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡಲು ಕೊಡುಗೆ ನೀಡಲು ಬಯಸುತ್ತಾರೆ ಮತ್ತು ಆದ್ದರಿಂದ ಅವರ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯು ಉಡುಗೊರೆ ಆಯ್ಕೆಗಳ ಮೇಲೆ ತುಂಬಾ ಪ್ರಭಾವ ಬೀರುತ್ತದೆ. ನಮ್ಮ ಸಂಸ್ಕೃತಿಯ ಸುಳಿವಿಕೆಯೊಂದಿಗೆ ಸುಸ್ಥಿರತೆಯು ಜನರು ಅದನ್ನು ಆಯ್ಕೆ ಮಾಡಲು ಕಾರಣವಾಗಿದೆ ಎನ್ನುತ್ತಾರೆ.

ಅದೇ ನಿಟ್ಟಿನಲ್ಲಿ, ಈಟಿವಿ ಭಾರತ್ ಸುಖಿಭವ ತಂಡವು ಮಹಾರಾಷ್ಟ್ರದ ನಾಗ್ಪುರದಲ್ಲಿ ಇರುವ ಶ್ರೀ ಶ್ರದ್ಧಾನಂದ ಅನಾಥಾಲಯದ ಜಂಟಿ ಕಾರ್ಯದರ್ಶಿ ಶ್ರೀಮತಿ ಗೀತಾಂಜಲಿ ಬಟಿ ಮಾತನಾಡಿ, ಅನಾಥಾಶ್ರಮದಲ್ಲಿರುವ ಇತರ ಮಕ್ಕಳೊಂದಿಗೆ ಸೇರಿ ಬೀಜಗಳನ್ನು ಬಳಸಿ ರಾಖಿಗಳನ್ನು ತಯಾರಿಸಿದ್ದೇವೆ. ಮತ್ತು ಅದನ್ನು ಉತ್ತಮ ಬೆಲೆಗೆ ಮಾರಾಟ ಮಾಡುತ್ತಿದ್ದೇವೆ.

"ಸಾಂಕ್ರಾಮಿಕ ಸಮಯದಲ್ಲಿ, ನಾವು ನಮ್ಮ ದೇಶಕ್ಕಾಗಿ ಏನನ್ನಾದರೂ ಮಾಡಬೇಕೆಂದು ನಾವು ಅರಿತುಕೊಂಡೆವು ಮತ್ತು ಆದ್ದರಿಂದ ನಾವು ಸುಸ್ಥಿರ ಉತ್ಪನ್ನಗಳನ್ನು ತಯಾರಿಸುತ್ತಿದ್ದೇವೆ. ಇದರಿಂದ ನಾವು ಬದುಕಲು ಉತ್ತಮ ವಾತಾವರಣ ನಿರ್ಮಾಣವಾಗಲಿದೆ.. ರಕ್ಷಾ ಬಂಧನವು ಸಹೋದರ ಸಹೋದರಿಯರ ನಡುವಿನ ಪ್ರೀತಿಯ ಹಬ್ಬವಾಗಿದೆ.

ರಾಖಿಯನ್ನು ಕಟ್ಟುವುದು ಅವರ ಪ್ರೀತಿಯನ್ನು ಭದ್ರಪಡಿಸುತ್ತದೆ, ಅದೇ ರೀತಿ ನಮ್ಮ ಭೂಮಿಯ ಮೇಲೆ ಒಂದು ಬೀಜವನ್ನು ನೆಡುವುದು ನಮ್ಮ ಕರ್ತವ್ಯವಾಗಿದೆ. ನಮ್ಮ ರಾಖಿಗಳಲ್ಲಿ ನಾವು ಹಣ್ಣುಗಳು ಮತ್ತು ತರಕಾರಿಗಳ ಬೀಜಗಳನ್ನು ಹಾಕಿದ್ದೇವೆ, ಅದನ್ನು ಮನೆಯಲ್ಲಿ ಸುಲಭವಾಗಿ ಮಡಕೆಗಳಲ್ಲಿ ಬೆಳೆಯಬಹುದು ಎಂದು ಹೇಳಿದ್ರು.

ಇದಿಷ್ಟೇ ಅಲ್ಲ, ಗೀತಾಂಜಲಿ ತಮ್ಮ ಅನಾಥಾಶ್ರಮದಲ್ಲಿ ಮಕ್ಕಳ ಭವಿಷ್ಯದ ಬಗ್ಗೆಯೂ ಕಾಳಜಿವಹಿಸುತ್ತಿದ್ದಾರೆ. ಕೊರೊನಾ ಲಾಕ್​ಡೌನ್​​ ಮತ್ತು ಭಯದಿಂದಾಗಿ ಅನೇಕ ಮಕ್ಕಳು ಶಾಲೆಗಳಿಗೆ ಹಾಜರಾಗಲು ಸಾಧ್ಯವಾಗದ ಕಾರಣ, ನಾವು ಅವರನ್ನು ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇವೆ.

ಇದರಿಂದ ಅವರು ತಮ್ಮ ಬಿಡುವಿನ ಸಮಯವನ್ನು ಉತ್ಪಾದಕ ಸಮಯವಾಗಿ ಕಳೆಯುತ್ತಾರೆ. ಅಂತಹ ಚಟುವಟಿಕೆಗಳು ಅವರ ಕೌಶಲ್ಯಗಳನ್ನು ಕೂಡ ಹೆಚ್ಚಿಸುತ್ತವೆ. ಇದು ಭವಿಷ್ಯದಲ್ಲಿ ಅವರಿಗೆ ಸಹಾಯಕವಾಗುತ್ತದೆ.

ಈ ರೀತಿ ಕೈಗಳಿಂದ ತಯಾರಿಸಿದ ರಾಖಿಗಳನ್ನು ಮಾರಾಟ ಮಾಡುವುದರಿಂದ ಗಳಿಸುವ ಹಣವನ್ನು ನಾವು ನಮ್ಮ ಮಕ್ಕಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುತ್ತೇವೆ, ವಿಶೇಷವಾಗಿ ಹುಡುಗಿಯರ ಖಾತೆಗೆ. ಇದರಿಂದ ಅವರು ವೃತ್ತಿಜೀವನಕ್ಕೆ ಅನುಕೂಲವಾಗಲಿದೆ ನಮ್ಮ ಅನಾಥಾಶ್ರಮದಿಂದ ಹೋದ ಮೇಲೆ ಅವರು ಆರ್ಥಿಕವಾಗಿ ಸ್ವತಂತ್ರರಾಗಿ ಬದುಕಬಹುದು.

ಆದ್ದರಿಂದ, ಈ ವರ್ಷ, ನಾವು ಸಹೋದರತ್ವ ಮತ್ತು ಪ್ರೀತಿಯ ಈ ಹಬ್ಬವನ್ನು ಸುಸ್ಥಿರ ಮತ್ತು ಪರಿಸರ ಸ್ನೇಹಿ ರೀತಿ ಆಚರಿಸೋಣ. ಬೀಜ ರಾಖಿಯನ್ನು ಸಂರಕ್ಷಿಸಿ, ಅದನ್ನು ಒಂದು ಪಾತ್ರೆಯಲ್ಲಿ ನೆಟ್ಟು, ಪರಿಸರದ ಉಳಿವಿಗೆ ನಮ್ಮ ಕೈಲಾದಷ್ಟು ಕೊಡುಗೆ ನೀಡೋಣ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.