ಕೊಯಮತ್ತೂರು: ರೈಲು ಅಪಘಾತದಿಂದ ವನ್ಯಜೀವಿಗಳನ್ನು ರಕ್ಷಿಸಲೆಂದು ತಮಿಳುನಾಡು ಮತ್ತು ಕೇರಳ ರೈಲು ಮಾರ್ಗಗಳಲ್ಲಿನ ಅರಣ್ಯ ಪ್ರದೇಶಗಳಲ್ಲಿ ಅಂಡರ್ ಪಾಸ್ಗಳನ್ನು ನಿರ್ಮಿಸಲಾಗಿದೆ. ಕೊಯಮತ್ತೂರಿನ ಎತ್ತಿಮಡೈ ಬಳಿ ನಿರ್ಮಿಸಲಾಗಿರುವ ಅಂಡರ್ಪಾಸ್ನಿಂದ ಇಂದು ಬೆಳಗ್ಗೆ 3 ಗಂಟೆ ಸುಮಾರಿಗೆ ಕಾಡನೆಯೊಂದು ಹಾದುಹೋಗಿರುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದ್ದು, ರೈಲ್ವೆ ಮತ್ತು ಅರಣ್ಯ ಇಲಾಖೆ ಜಂಟಿ ಕಾರ್ಯಕ್ಕೆ ಯಶಸ್ಸು ಸಿಕ್ಕಂತಾಗಿದೆ.
-
A tusker used #SouthernRailway's first underpass for wild elephants on the Ettimadai - Walayar section in the early hours of Thursday. The underpass was built in Madukkarai forest range of #Coimbatore Forest Division. @THChennai pic.twitter.com/KLhiejZq1Y
— Wilson Thomas (@wilson__thomas) August 23, 2023 " class="align-text-top noRightClick twitterSection" data="
">A tusker used #SouthernRailway's first underpass for wild elephants on the Ettimadai - Walayar section in the early hours of Thursday. The underpass was built in Madukkarai forest range of #Coimbatore Forest Division. @THChennai pic.twitter.com/KLhiejZq1Y
— Wilson Thomas (@wilson__thomas) August 23, 2023A tusker used #SouthernRailway's first underpass for wild elephants on the Ettimadai - Walayar section in the early hours of Thursday. The underpass was built in Madukkarai forest range of #Coimbatore Forest Division. @THChennai pic.twitter.com/KLhiejZq1Y
— Wilson Thomas (@wilson__thomas) August 23, 2023
ತಮಿಳುನಾಡಿನ ಕೊಯಮತ್ತೂರಿನ ಮೂಲಕ ಕೇರಳಕ್ಕೆ ಪ್ರತಿದಿನ ಹೆಚ್ಚಿನ ಸಂಖ್ಯೆಯ ರೈಲುಗಳು ಚಲಿಸುತ್ತವೆ. ಇದರಲ್ಲಿ ಕೊಯಮತ್ತೂರಿನ ಮಧುಕರೈಯಿಂದ ಕೇರಳದ ವಲ್ಲೈಯಾರ್‌ಗೆ ಅರಣ್ಯ ಮಾರ್ಗವಾಗಿ ರೈಲುಗಳು ಸಂಚರಿಸುತ್ತವೆ. ಈ ಮಾರ್ಗದಲ್ಲಿ ದಟ್ಟ ಅರಣ್ಯ ಪ್ರದೇಶವಿರುವುದರಿಂದ ಕಾಡಿನಿಂದ ಹೊರಬರುವ ಹಾಗೂ ಹಳಿ ದಾಟುವ ವೇಳೆ ರೈಲು ಡಿಕ್ಕಿಯಾಗಿ ಕಾಡಾನೆಗಳು ನಿರಂತರವಾಗಿ ಸಾಯುತ್ತಿದ್ದವು. ಅಲ್ಲದೆ ಕೇರಳ ರಾಜ್ಯದ ವಲೈಯಾರ್ ನಿಂದ ಪಾಲಕ್ಕಾಡ್ ಮಾರ್ಗದಲ್ಲಿ ರೈಲು ಡಿಕ್ಕಿಯಾಗಿ ಕಾಡು ಆನೆಗಳು ಹೆಚ್ಚಾಗಿ ಸಾವನ್ನಪ್ಪುತ್ತಿದ್ದವು. ಕಳೆದ 15 ವರ್ಷಗಳಲ್ಲಿ 6 ರೈಲು ಅಪಘಾತಗಳಲ್ಲಿ 11 ಕಾಡಾನೆಗಳು ಸೇರಿದಂತೆ ಅನೇಕ ವನ್ಯ ಜೀವಿಗಳು ಸಾವನ್ನಪ್ಪಿದ್ದವು.
ಇದನ್ನು ಗಮನಿಸಿದ ರೈಲ್ವೆ ಇಲಾಖೆ ಮತ್ತು ಅರಣ್ಯ ಇಲಾಖೆ ಅಪಘಾತದಿಂದ ವನ್ಯಜೀವಿಗಳ ತಪ್ಪಿಸಲು ವಿವಿಧ ಕ್ರಮಗಳನ್ನು ಕೈಗೊಂಡವು. ಅಲ್ಲದೇ ಅರಣ್ಯ ಪ್ರದೇಶಗಳಲ್ಲಿ ರೈಲು ವೇಗವಾಗಿ ಚಲಾಯಿಸದಂತೆ ಈ ಹಿಂದೆ ಇಲಾಖೆ ಸೂಚಿಸಿತ್ತಾದರೂ ರೈಲು ಡಿಕ್ಕಿಯಾಗಿ ಹಲವಾರು ಆನೆಗಳ ಬಲಿಯಾಗಿದ್ದವು.
ಈ ವೇಳೆ ಆನೆಗಳ ಚಲನವಲನ ಪತ್ತೆ ಹಚ್ಚಲು ಅರಣ್ಯ ಹಾಗೂ ರೈಲ್ವೆ ಇಲಾಖೆ ಜಂಟಿಯಾಗಿ ರೈಲ್ವೆ ಹಳಿಗಳ ಮೇಲೆ ಸಿಸಿ ಕ್ಯಾಮರಾಗಳನ್ನು ಅಳವಡಿಸಿದವು. ಅಲ್ಲದೆ, ಆನೆಗಳು ಹೆಚ್ಚಾಗಿ ರೈಲು ಹಳಿಗಳ ದಾಟುವ ಪ್ರದೇಶಗಳಲ್ಲಿ ಅಂಡರ್ಪಾಸ್ಗಳನ್ನು ನಿರ್ಮಿಸಬೇಕು ಎಂದು ಪ್ರಾಣಿಪ್ರಿಯರು ಒತ್ತಾಯಿಸಿದ್ದರು. ಅದರಂತೆ ಪಾಲಕ್ಕಾಡ್ ರೈಲ್ವೆ ವಿಭಾಗವು 7.49 ಕೋಟಿ ರೂಪಾಯಿ ವೆಚ್ಚದಲ್ಲಿ ಪಾಲಕ್ಕಾಡ್ ಬಳಿಯ ಅರಣ್ಯ ಪ್ರದೇಶದಲ್ಲಿ ಅಂಡರ್ ಪಾಸ್ ನಿರ್ಮಿಸಿತು. ಎರಡನೇಯದಾಗಿ ಬಿ ಮಾರ್ಗದಲ್ಲಿ, ಮಧುಕರೈ - ಎಟಿಮಡೈ ರೈಲು ನಿಲ್ದಾಣಗಳ ನಡುವೆ ಬರುವ ಅರಣ್ಯ ಪ್ರದೇಶದಲ್ಲಿ 8 ಮೀಟರ್ ಎತ್ತರ ಅಂಡರ್‌ಪಾಸ್ ಅನ್ನು ನಿರ್ಮಿಸಲಾಯಿತು.
ಈ ಕುರಿತು ಕೊಯಮತ್ತೂರು ಅರಣ್ಯ ಸಂರಕ್ಷಣಾಧಿಕಾರಿ ರಾಮಸುಬ್ರಮಣಿಯನ್ ಮಾತನಾಡಿ, ಅರಣ್ಯ ಪ್ರದೇಶಗಳಲ್ಲಿ ನಿರ್ಮಿಸಿರುವ ಅಂಡರ್ಪಾಸ್ಗಳಿಂದ ಆನೆಗಳು ಸಾಗಲು ಆರಂಭಿಸಿರುವುದು ಸಂತಸ ತಂದಿದೆ. ಇದರಿಂದ ರೈಲು ಅಪಘಾತದಿಂದ ಆನೆಗಳ ರಕ್ಷಣೆ ಮಾಡಿದಂತಾಗಿದೆ. ಆನೆಗಳು ಹೆಚ್ಚಾಗಿ ಹಳಿ ದಾಟುವ ಸ್ಥಳಗಳನ್ನು ಪತ್ತೆ ಹಚ್ಚಿ ಅಲ್ಲಿಯೂ ಅಂಡರ್‌ಪಾಸ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಅಂಡರ್‌ಪಾಸ್ ನಿರ್ಮಾಣದಿಂದ ಆನೆಗಳು ರೈಲು ಹಳಿ ದಾಟಲು ಅನುಕೂಲವಾಗಲಿದೆ ಎಂದು ಅರಣ್ಯ ಇಲಾಖೆಯೂ ತಿಳಿಸಿದೆ. ಅಲ್ಲದೆ, ತಮಿಳುನಾಡು ಅರಣ್ಯ ಇಲಾಖೆ ಕಾರ್ಯದರ್ಶಿ ಸುಪ್ರಿಯಾ ಸಾಹು ಮತ್ತು ತಮಿಳುನಾಡು ಅರಣ್ಯ ಇಲಾಖೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ ರೆಡ್ಡಿ ಅವರು ಕಳೆದ ವಾರ ಅಂಡರ್‌ಪಾಸ್ ಕಾಮಗಾರಿಯನ್ನು ಪರಿಶೀಲಿಸಿದರು.
ಇದನ್ನೂ ಓದಿ: ಬಂಡೀಪುರ: ಗಾಯಗೊಂಡು ಕುಂಟುತ್ತಾ ರಸ್ತೆ ದಾಟಿದ ಮರಿಯಾನೆ- ವಿಡಿಯೋ