ETV Bharat / bharat

ರಸ್ತೆ ಕ್ರಾಸ್​ ಮಾಡುವಾಗ ಎಚ್ಚರ.. ಎಚ್ಚರ..! ನಿರ್ಲಕ್ಷ್ಯಕ್ಕೆ ವ್ಯಕ್ತಿ ಬಲಿ, ಸಿಸಿಟಿವಿಯಲ್ಲಿ ದೃಶ್ಯ ಸೆರೆ!

author img

By

Published : Mar 14, 2022, 4:00 PM IST

ತಮಿಳುನಾಡಿನ ಮಧುರೈನಲ್ಲಿ ರಸ್ತೆ ದಾಟುತ್ತಿದ್ದಾಗ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಘಟನೆಯ ಸಿಸಿಟಿವಿ ದೃಶ್ಯಾವಳಿ ಸೆರೆಯಾಗಿದ್ದು, ಅಪಘಾತದ ದೃಶ್ಯ ಎದೆ ಝಲ್ಲೆ ಎನ್ನಿಸುವಂತಿದೆ.

CCTV Footage of Madurai road accident  Madurai road accident  Tamilunadu road accident news  ಮಧುರೈ ರಸ್ತೆ ಅಪಘಾತದ ಸಿಸಿಟಿವಿ ದೃಶ್ಯ  ಮಧುರೈ ರಸ್ತೆ ಅಪಘಾತ ಸುದ್ದಿ  ತಮಿಳುನಾಡು ರಸ್ತೆ ಅಪಘಾತ ಸುದ್ದಿ
ನಿರ್ಲಕ್ಷ್ಯಕ್ಕೆ ಕುಟುಂಬ ಸದಸ್ಯ ಸಾವು

ಮಧುರೈ(ತಮಿಳುನಾಡು) : ಇಲ್ಲಿನ ಶೋಲವಂದನ ನಿವಾಸಿ ದಂಪತಿ ನಿನ್ನೆ ವಾಡಿಪ್ಪಟ್ಟಿ ಬಳಿ 12 ವರ್ಷದ ಮಗಳೊಂದಿಗೆ ಬೈಕ್​ ಮೇಲೆ ರಸ್ತೆ ಕ್ರಾಸ್​ ಮಾಡುತ್ತಿದ್ದರು. ಇದೇ ವೇಳೆ, ಎದುರುಗಡೆಯಿಂದ ಅತಿ ವೇಗವಾಗಿ ಬಂದ ಕಾರೊಂದು ಇವರ ಬೈಕ್​ಗೆ ಡಿಕ್ಕಿ ಹೊಡಿದಿದೆ. ಅಪಘಾತದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ರಸ್ತೆ ಕ್ರಾಸ್​ ಮಾಡುವಾಗ ಎಚ್ಚರ.. ನಿರ್ಲಕ್ಷ್ಯಕ್ಕೆ ವ್ಯಕ್ತಿ ಬಲಿ, ಸಿಸಿಟಿವಿಯಲ್ಲಿ ದೃಶ್ಯ

ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್​ ಕ್ರಾಸ್​ ಮಾಡುತ್ತಿರುವಾಗ ಮಧುರೈ ಕಡೆಯಿಂದ ದಿಂಡಿಗಲ್ ಕಡೆಗೆ ಹೋಗುತ್ತಿದ್ದ ಕಾರೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ದ್ವಿಚಕ್ರ ವಾಹನದಲ್ಲಿದ್ದ ಪಳನಿಯಮ್ಮಾಳ್ (50) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಕೆಯ ಪತಿ ಮತ್ತು 12 ವರ್ಷದ ಮಗಳು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಮಧುರೈ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಬಗ್ಗೆ ಶೋಲವಂದನ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅದರಂತೆ ಅಪಘಾತದ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದು, ಸಿಸಿಟಿವಿಯ ದೃಶ್ಯದಲ್ಲಿ ಕಾರಿನ ಡಿಕ್ಕಿ ರಭಸಕ್ಕೆ ದ್ವಿಚಕ್ರ ವಾಹನದಿಂದ ಮೂವರು ಮೇಲಕ್ಕೆ ಹಾರಿ ಕೆಳಗೆ ಬಿದ್ದಿರುವುದು ಕಂಡು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.