ಲೂಧಿಯಾನ(ಪಂಜಾಬ್): ಗಿಯಾಸ್ಪುರ ಪ್ರದೇಶದಲ್ಲಿ ದರೋಡೆಕೋರರು ಅಂಗಡಿಗೆ ನುಗ್ಗಿದ್ದು, ಗನ್ ತೋರಿಸಿ ಸುಲಿಗೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ, ಹಣ ಕೊಡಲು ನಿರಾಕರಿಸಿದ ಅಂಗಡಿ ಮಾಲೀಕನ ಮೇಲೆ ಫೈರಿಂಗ್ ಮಾಡಿದ್ದು, ಪ್ರತಿಯಾಗಿ ಮಾಲೀಕನೂ ಸಹ ಅಂಜದೆ ಗುಂಡಿನ ಮಳೆಗರೆದಿದ್ದಾನೆ. ಈ ಎಲ್ಲಾ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಏಕಾಏಕಿ ಅಂಗಡಿಗೆ ನುಗ್ಗಿರುವ ದುಷ್ಕರ್ಮಿಗಳು, ಕೆಲಸ ಮಾಡುತ್ತಿದ್ದ ಸಿಬ್ಬಂದಿಗೆ ಗನ್ ತೋರಿಸಿ ದರೋಡೆಗೆ ಯತ್ನಿಸಿದ್ದಾರೆ. ಅಂಗಡಿ ಮಾಲೀಕ ರಂಜೋದ್ ಸಿಂಗ್ಗೂ ಗನ್ ತೋರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಮಾಲೀಕನು ಸಹ ಗುಂಡು ಹಾರಿಸಿದ್ದಾನೆ. ಈ ವೇಳೆ ಬೆಚ್ಚಿದ ದರೋಡೆಕೋರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಇದನ್ನೂ ಓದಿ:ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟ: ಮಧ್ಯವರ್ತಿ ಕೆಲ್ಸ ಬಿಟ್ಟು ಕಾರು ಕದಿಯುತ್ತಿದ್ದ ಆರೋಪಿ ಅಂದರ್!
ಈ ಕುರಿತು ಪ್ರತಿಕ್ರಿಯಿಸಿರುವ ಎಸಿಪಿ ರಣಧೀರ್ ಸಿಂಗ್, ದರೋಡೆಕೋರರಲ್ಲಿ ಓರ್ವನನ್ನು ಅಮನ್ ಟ್ಯಾಟೂ ಎಂದು ಗುರುತಿಸಲಾಗಿದೆ. ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದರು.