ETV Bharat / bharat

Watch: ಕೋವಿಡ್​ನಿಂದ ಸತ್ತ ವ್ಯಕ್ತಿಯ ಜೇಬಿನಿಂದ ಸಾವಿರಾರು ರೂ. ಕದ್ದ ಆಸ್ಪತ್ರೆ ಸಿಬ್ಬಂದಿ! - ಮಹಾರಾಷ್ಟ್ರದ ಧುಲೆ

ಮಹಾಮಾರಿ ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿರುವ ವ್ಯಕ್ತಿಯ ಜೇಬಿನಿಂದ ಆಸ್ಪತ್ರೆ ಸಿಬ್ಬಂದಿ ಹಣ ಕದ್ದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

Hospital ward boys
Hospital ward boys
author img

By

Published : May 1, 2021, 9:18 PM IST

ಧುಲೆ(ಮಹಾರಾಷ್ಟ್ರ): ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದು, ಆಸ್ಪತ್ರೆಗೆ ನಿತ್ಯ ಸಾವಿರಾರು ರೋಗಿಗಳು ದಾಖಲಾಗುತ್ತಿವೆ. ತಮ್ಮ ಪ್ರಾಣ ಉಳಿಸಿಕೊಳ್ಳಲು ಅನೇಕರು ಲಕ್ಷಾಂತರ ರೂ. ಖರ್ಚು ಮಾಡ್ತಿದ್ದು, ಇದರ ಮಧ್ಯೆ ಅನೇಕರು ಸಾವನ್ನಪ್ಪುತ್ತಿದ್ದಾರೆ.

ಕೋವಿಡ್​ನಿಂದ ಸತ್ತ ವ್ಯಕ್ತಿಯ ಜೇಬಿನಿಂದ ಹಣ ಕಳ್ಳತನ

ಕೋವಿಡ್ ಸೋಂಕಿನಿಂದ ಮಹಾರಾಷ್ಟ್ರದ ಧುಲೆ ಆಸ್ಪತ್ರೆಗೆ ವ್ಯಕ್ತಿಯೊಬ್ಬ ದಾಖಲಾಗಿದ್ದನು. ಆತ ಚಿಕಿತ್ಸೆಗೋಸ್ಕರ 65 ಸಾವಿರ ರೂ. ಖರ್ಚು ಮಾಡಿದ್ದು, ಉಳಿದ 35 ಸಾವಿರ ರೂ. ಜೇಬಿನಲ್ಲಿಟ್ಟುಕೊಂಡಿದ್ದನು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪುತ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿ ಜೇಬಿನಲ್ಲಿದ್ದ ಹಣ ಕದ್ದಿದ್ದಾರೆ. ಇದರ ವಿಡಿಯೋ ಆಸ್ಪತ್ರೆ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಇಲ್ಲಿನ ಗಣೇಶ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯುವಕನೊಬ್ಬ ಕೋವಿಡ್​ ಸೋಂಕಿಗೆ ಚಿಕಿತ್ಸೆ ಪಡೆದುಕೊಳ್ಳಲು ದಾಖಲಾಗಿದ್ದರು. ಆತ ಸಾವನ್ನಪ್ಪುತ್ತಿದ್ದಂತೆ ಆತನ ಜೇಬಿನಲ್ಲಿದ್ದ ಹಣ ಕಳ್ಳತನ ಮಾಡಲಾಗಿದೆ. ಮೃತ ರೋಗಿ ಸ್ಟ್ರೆಚರ್​ ಮೇಲೆ ಮಲಗಿದ್ದು, ಈ ವೇಳೆ ರೋಗಿ ಪಕ್ಕದಲ್ಲಿಟ್ಟುಕೊಳ್ಳಲಾಗಿದ್ದ ಕೈಚೀಲದಿಂದ ಹಣ ಕದ್ದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.