ETV Bharat / bharat

ಗೂಗಲ್​ಗೆ ₹1,337 ಕೋಟಿ ದಂಡ ಜಡಿದ ಭಾರತೀಯ ಸ್ಪರ್ಧಾ ಆಯೋಗ

ಸ್ಪರ್ಧಾ ಕಾನೂನನ್ನು ಗೂಗಲ್​ ಉಲ್ಲಂಘಿಸುತ್ತಿದೆ ಎಂದು ಟೆಕ್​ ದೈತ್ಯ ಸಂಸ್ಥೆಯಾದ ಗೂಗಲ್‌ಗೆ ಭಾರಿ ದಂಡ ಹಾಕಲಾಗಿದೆ.

cci-slaps-rs-1337-dot-76-cr-penalty-on-google
ಗೂಗಲ್​ಗೆ 1,337 ಕೋಟಿ ದಂಡ ಜಡಿದ ಭಾರತೀಯ ಸ್ಪರ್ಧಾ ಆಯೋಗ
author img

By

Published : Oct 20, 2022, 10:34 PM IST

ನವದೆಹಲಿ: ಆಂಡ್ರಾಯ್ಡ್ ಮೊಬೈಲ್ ಡಿವೈಸ್​ನ ಪರಿಸರ ವ್ಯವಸ್ಥೆಯ ಬಹು ಮಾರುಕಟ್ಟೆಗಳಲ್ಲಿ ತನ್ನ ಪ್ರಾಬಲ್ಯವನ್ನು ದುರುಪಯೋಗಪಡಿಸಿಕೊಂಡ ಕಾರಣಕ್ಕಾಗಿ ಟೆಕ್​ ದೈತ್ಯ ಸಂಸ್ಥೆಯಾದ ಗೂಗಲ್‌ಗೆ ಸ್ಪರ್ಧಾ ಆಯೋಗ (Competition Commission)ವು ಗುರುವಾರ 1,337.76 ಕೋಟಿ ರೂಪಾಯಿಗಳ ದಂಡವನ್ನು ವಿಧಿಸಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ), ಗೂಗಲ್​ ಪ್ಲೇ ಸ್ಟೋರ್​ಗೆ ಸಂಬಂಧಿಸಿದ ಮೊಬೈಲ್ ಅಪ್ಲಿಕೇಶನ್ ವಿತರಣಾ ಒಪ್ಪಂದ (MADA) ಮತ್ತು ಆಂಟಿ ಫ್ರಾಗ್ಮೆಂಟೇಶನ್ ಅಗ್ರಿಮೆಂಟ್ (AFA) ಉಲ್ಲಂಘನೆಗಾಗಿ ದಂಡ ಹಾಕಲಾಗಿದೆ. ಜೊತೆಗೆ, ಗೂಗಲ್ ತನ್ನ ನಡವಳಿಕೆಯನ್ನು ನಿರ್ದಿಷ್ಟ ಸಮಯದೊಳಗೆ ಬದಲಿಸಿಕೊಳ್ಳುವಂತೆಯೂ ಸೂಚಿಸಿದೆ.

ಅಪ್ಲಿಕೇಶನ್ ಸ್ಟೋರ್ ಮಾರುಕಟ್ಟೆಯಲ್ಲಿ ಗೂಗಲ್ ತನಗೆ ಬೇಕಾದ ಆ್ಯಪ್​ಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ. ಮೊಬೈಲ್ ಅಪ್ಲಿಕೇಶನ್ ವಿತರಣಾ ಒಪ್ಪಂದ ಅಡಿಯಲ್ಲಿ ಗೂಗಲ್ ಮೊಬೈಲ್ ಸೂಟ್ (GMS) ಅನ್ನು ಕಡ್ಡಾಯವಾಗಿ ಮೊದಲೇ ಇನ್​​ಸ್ಟಾಲ್​ ಮಾಡಬೇಕು. ಅದನ್ನು ಅನ್-ಇನ್‌ಸ್ಟಾಲ್ ಮಾಡಲು ಯಾವುದೇ ಆಯ್ಕೆಯಿಲ್ಲ. ಆದರೆ, ಸ್ಪರ್ಧಾ ಕಾನೂನನ್ನು ಗೂಗಲ್​ ಉಲ್ಲಂಘಿಸುತ್ತಿದೆ ಎಂದು ತಿಳಿಸಿದೆ.

ಇದನ್ನೂ ಓದಿ: ನ.2 ರಿಂದ 3 ದಿನ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ, ₹5 ಲಕ್ಷ ಕೋಟಿ ಹೂಡಿಕೆ ನಿರೀಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.