ನವದೆಹಲಿ: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟವಾಗಿದೆ. ಎಂದಿನಂತೆ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಈ ವರ್ಷ ಶೇಕಡಾ 99.37 ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ. ಬಾಲಕಿಯರು ಬಾಲಕರಿಗಿಂತ ಶೇಕಡವಾರು 0.54 ರಷ್ಟು ಫಲಿತಾಂಶವನ್ನು ಹೆಚ್ಚಿಸಿಕೊಂಡಿದ್ದಾರೆ. 70,000 ವಿದ್ಯಾರ್ಥಿಗಳು 95 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ ಎಂದು ಕೇಂದ್ರ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಪ್ರಕಟಿಸಿದೆ.
ಯಾವುದೇ ಮೆರಿಟ್ ಪಟ್ಟಿಯನ್ನು ಘೋಷಿಸಲಾಗಿಲ್ಲ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 65,000ಕ್ಕೂ ಹೆಚ್ಚು ಅಭ್ಯರ್ಥಿಗಳ ಫಲಿತಾಂಶವನ್ನು ಸಿದ್ಧಪಡಿಸಲಾಗುತ್ತಿದೆ. ಈ ಫಲಿತಾಂಶ ಆಗಸ್ಟ್ 5 ರೊಳಗೆ ಘೋಷಿಸಲಾಗುವುದು. ಒಟ್ಟು 70,004 ವಿದ್ಯಾರ್ಥಿಗಳು ಶೇಕಡಾ 95 ರಷ್ಟು ಅಂಕಗಳನ್ನು ಗಳಿಸಿದರೆ, 1,50,152 ವಿದ್ಯಾರ್ಥಿಗಳು ಶೇಕಡಾ 90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ.
ಕೋವಿಡ್ 2ನೇ ಅಲೆಯಿಂದಾಗಿ ಈ ವರ್ಷ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಲಾಯಿತು. ಫಲಿತಾಂಶವನ್ನು ಮಂಡಳಿಯ ಪರ್ಯಾಯ ಮೌಲ್ಯಮಾಪನ ನೀತಿಯ ಆಧಾರದ ಮೇಲೆ ಪ್ರಕಟಿಸಲಾಗಿದೆ.