ETV Bharat / bharat

ಸಿಬಿಎಸ್​ಇ 10ನೇ ತರಗತಿ: ಶೇ 93.12 ಫಲಿತಾಂಶ, ಕಳೆದ ಬಾರಿಗಿಂತ ಕಡಿಮೆ

ಸಿಬಿಎಸ್​ಇ 10ನೇ ತರಗತಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಕೂಡ ಬಾಲಕರಿಗಿಂತ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಪ್ರಕಟ
CBSE Class 10 results announced
author img

By

Published : May 12, 2023, 1:45 PM IST

Updated : May 12, 2023, 2:20 PM IST

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್​ಇ) 10ನೇ ತರಗತಿ ಪರೀಕ್ಷಾ ಫಲಿತಾಂಶ ಪ್ರಕಟಿಸಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಸಿಬಿಎಸ್​ಇ ಅಧಿಕೃತ ವೆಬ್‌ಸೈಟ್‌ಗಳಾದ results.cbse.nic.in ಅಥವಾ cbseresults.nic.in ನಲ್ಲಿ ಪರಿಶೀಲಿಸಬಹುದು.

ಪ್ರಸ್ತುತ ವರ್ಷ ಶೇ 93.12 ಫಲಿತಾಂಶ ಪ್ರಕಟಗೊಂಡಿದ್ದು, ಇದು ಕಳೆದ ಬಾರಿಗಿಂತ ಶೇ 1.28 ರಷ್ಟು ಕಡಿಮೆಯಾಗಿದೆ. ಕಳೆದ ವರ್ಷ ಶೇ 94.40ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ಬಾರಿ ಕೂಡ ಬಾಲಕರಿಗಿಂತ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

94.25ರಷ್ಟು ಬಾಲಕಿಯರು ಉತ್ತೀರ್ಣರಾದರೆ, ಬಾಲಕರ ಉತ್ತೀರ್ಣ ಪ್ರಮಾಣ ಶೇ 92.27 ರಷ್ಟಿದೆ. ಬೋರ್ಡ್ ಪರೀಕ್ಷೆಯಲ್ಲಿ ಐದು ಮುಖ್ಯ ವಿಷಯಗಳ ಪೈಕಿ ಒಂದನ್ನು ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕಂಪಾರ್ಟ್‌ಮೆಂಟ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 1.34 ಲಕ್ಷ ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ ಅನಾರೋಗ್ಯಕರ ಸ್ಪರ್ಧೆ ತಪ್ಪಿಸಲು ಅರ್ಹತಾ ಪಟ್ಟಿಯನ್ನು ಪ್ರಕಟಿಸುವುದಿಲ್ಲ ಎಂದು ಸಿಬಿಎಸ್​ಇ ಮಂಡಳಿ ಘೋಷಿಸಿದೆ. ವಿದ್ಯಾರ್ಥಿಗಳ ಅಂಕಗಳ ಆಧಾರದ ಮೇಲೆ ಪ್ರಥಮ, ದ್ವಿತೀಯ ಮತ್ತು ಮೂರನೇ ವಿಭಾಗಗಳನ್ನು ನೀಡುವುದನ್ನು ರದ್ದುಗೊಳಿಸಲು ಮಂಡಳಿ ನಿರ್ಧರಿಸಿದೆ. ಆದಾಗ್ಯೂ, ವಿವಿಧ ವಿಷಯಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ 0.1 ಶೇಕಡಾ ವಿದ್ಯಾರ್ಥಿಗಳಿಗೆ ಮೆರಿಟ್ ಪ್ರಮಾಣಪತ್ರಗಳನ್ನು ನೀಡಲಾಗಿದೆ.

ಬೆಳಗ್ಗೆ ಪ್ರಕಟವಾದ 12ನೇ ತರಗತಿ ಪರೀಕ್ಷೆ ಫಲಿತಾಂಶದಲ್ಲಿ ಶೇ. 87.33ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಇಲ್ಲೂ ಕೂಡ ಕಳೆದ ವರ್ಷಕ್ಕಿಂತ ಶೇ.5ರಷ್ಟು ಫಲಿತಾಂಶ ಕುಂಠಿತವಾಗಿತ್ತು. ಕಳೆದ ಬಾರಿ ಶೇ 92.71ರಷ್ಟು ಫಲಿತಾಂಶ ಬಂದಿತ್ತು.

ಇದನ್ನೂ ಓದಿ: ಸಿಬಿಎಸ್ಇ 12th: ಕಳೆದ ವರ್ಷಕ್ಕಿಂತ ಕಡಿಮೆ ಫಲಿತಾಂಶ; ಟಾಪರ್ಸ್‌ ಹೆಸರು ಬಿಡುಗಡೆ ಇಲ್ಲ

Last Updated : May 12, 2023, 2:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.