ETV Bharat / bharat

ಅಕೌಂಟ್ಸ್​ ವಿಷಯಕ್ಕೆ ಗ್ರೇಸ್​ ಅಂಕ ಸಿಗುವ ವೈರಲ್​ ವಿಡಿಯೋ ಮಾಹಿತಿ ಸುಳ್ಳು : ಸಿಬಿಎಸ್​ಇ ಸ್ಪಷ್ಟನೆ - ಅಕೌಂಟ್ಸ್​ ವಿಷಯಕ್ಕೆ ಗ್ರೇಸ್​ ಅಂಕ ಸಿಗಲ್ಲ

ಸಿಬಿಎಸ್​ಇ ದ್ವಿತೀಯ ಪಿಯುನ ಮೊದಲ ಅವಧಿಯ ಪರೀಕ್ಷೆಯ ಅಕೌಂಟ್ಸ್ ವಿಷಯಕ್ಕೆ ಗ್ರೇಸ್ ಅಂಕ ನೀಡುವ ಕುರಿತಂತೆ ವೈರಲ್​ ಆದ 'ವಿಡಿಯೋ ಸುಳ್ಳು' ಎಂದು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(ಸಿಬಿಎಸ್‌ಇ) ಸುತ್ತೋಲೆ ಹೊರಡಿಸಿದೆ..

cbse board
ಸಿಬಿಎಸ್​ಇ ಸ್ಪಷ್ಟನೆ
author img

By

Published : Dec 14, 2021, 7:30 PM IST

ನವದೆಹಲಿ : ಸಿಬಿಎಸ್​ಇ ದ್ವಿತೀಯ ಪಿಯು ಮೊದಲ ಅವಧಿಯ ಪರೀಕ್ಷೆಯ ಅಕೌಂಟ್ಸ್ ವಿಷಯಕ್ಕೆ ಗ್ರೇಸ್ ಅಂಕ ನೀಡುವ ಕುರಿತಂತೆ ವೈರಲ್​ ಆದ 'ವಿಡಿಯೋ ಸುಳ್ಳು' ಎಂದು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(ಸಿಬಿಎಸ್‌ಇ) ಸುತ್ತೋಲೆ ಹೊರಡಿಸಿದೆ.

CBSE ಬೋರ್ಡ್ 12ನೇ ತರಗತಿಯ ಮೊದಲ ಅವಧಿಯ ಪರೀಕ್ಷೆ ಡಿಸೆಂಬರ್​ 13ರಂದು ನಡೆದಿದೆ. ಅಕೌಂಟ್ಸ್‌ ವಿಷಯದಲ್ಲಿ ಪ್ರಮಾದವಾದ ಕಾರಣ ಅದಕ್ಕೆ ಅನುಗುಣವಾಗಿ 6 ಗ್ರೇಸ್​ ಅಂಕಗಳನ್ನು ನೀಡಲಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​ ಆಗಿದೆ. ಇದು ಬೋರ್ಡ್​ ಗಮನಕ್ಕೆ ಬಂದ ಕಾರಣ 'ವಿಡಿಯೋದಲ್ಲಿರುವ ಮಾಹಿತಿ ಸಂಪೂರ್ಣ ಸುಳ್ಳಾಗಿದೆ' ಎಂದು ಅದು ಹೇಳಿದೆ.

ವೈರಲ್​ ಆದ ವಿಡಿಯೋದಲ್ಲೇನಿದೆ?: ಪರೀಕ್ಷಾ ನಿಯಂತ್ರಕರಾದ ಡಾ.ಸನ್ಯಮ್ ಭಾರದ್ವಾಜ್ ಅವರು ಮಾತನಾಡಿದ್ದು, 12ನೇ ತರಗತಿಯ ಅಕೌಂಟ್ಸ್ ಮೊದಲ ಅವಧಿಯ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು 6 ಗ್ರೇಸ್ ಅಂಕಗಳನ್ನು ಪಡೆದುಕೊಳ್ಳಲಿದ್ದಾರೆ. ಪ್ರಮಾದವಾದ ಬಗ್ಗೆ ವಿದ್ಯಾರ್ಥಿಗಳು ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ಅವರು ಹೇಳಿರುವಂತೆ ವಿಡಿಯೋ ಮಾಡಲಾಗಿದೆ.

ಇದನ್ನೂ ಓದಿ: ಪತ್ನಿಯ ಸಾವಿನ ಸುದ್ದಿ ಕೇಳಿ ನೇಣಿಗೆ ಶರಣಾದ ಪತಿ..ಜೀವನ್ಮರಣ ಹೋರಾಟದಲ್ಲಿ ಪುತ್ರಿ

ಇದಕ್ಕೆ ಸ್ಪಷ್ಟನೆ ನೀಡಿರುವ ಮಂಡಳಿ, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಸನ್ಯಮ್ ಭಾರದ್ವಾಜ್ ಈ ಬಗ್ಗೆ ಯಾವುದೇ ವರದಿಗಾರರ ಜೊತೆ ಮಾತನಾಡಿಲ್ಲ ಅಥವಾ ಗ್ರೇಸ್​ ಅಂಕ ನೀಡುವ ನಿರ್ಧಾರವನ್ನು ತೆಗೆದುಕೊಂಡಿಲ್ಲ. ವಿಡಿಯೋದಲ್ಲಿರುವ ಮಾಹಿತಿ ಸುಳ್ಳು. ವೈರಲ್ ಸಂದೇಶವನ್ನು ನಂಬಬೇಡಿ. ಮಾಹಿತಿಗಾಗಿ CBSEಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಎಂದು ಸ್ಪಷ್ಟನೆ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.