ನವದೆಹಲಿ: 2022ನೇ ಸಾಲಿನ ಸಿಬಿಎಸ್ಇ 10, 12ನೇ ತರಗತಿ ಪರೀಕ್ಷೆಗೋಸ್ಕರ ಮಹತ್ವದ ಘೋಷಣೆ ಮಾಡಿದ್ದು, ವಿದ್ಯಾರ್ಥಿಗಳು ಎರಡು ಭಾಗಗಳಲ್ಲಿ ಪರೀಕ್ಷೆ ತೆಗೆದುಕೊಳ್ಳಲು ನಿರ್ಧಾರ ಮಾಡಿದೆ ಎಂದು ಕೇಂದ್ರಿಯ ಫ್ರೌಢಶಿಕ್ಷಣ ಮಂಡಳಿ(ಸಿಬಿಎಸ್ಇ) ಹೇಳಿದೆ.
2021-22ನೇ ಸಾಲಿನ ಸಿಲೆಬಸ್ ಅನ್ನು ಎರಡು ವಿಭಾಗಗಳಾಗಿ ವಿಂಗಡನೆ ಮಾಡಿರುವ ಕೇಂದ್ರ ಸರ್ಕಾರ ಪ್ರತಿ ಸಿಲೆಬಸ್ನಲ್ಲಿ ಶೇ. 50ರಷ್ಟು ಪಾಠಗಳಿರಲಿವೆ. ಮೊದಲ ಭಾಗದ ಸಿಲೆಬಸ್ ಮುಕ್ತಾಯಗೊಳ್ತಿದ್ದಂತೆ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಆದರೆ ಕೊನೆಯ ಶೈಕ್ಷಣಿಕ ವರ್ಷದಂತೆ ಕಾರ್ಯ ನಿರ್ವಹಿಸಲಾಗುವುದು ಎಂದು ಸಿಬಿಎಸ್ಇ ಮಂಡಳಿ ಹೇಳಿದೆ.
-
Academic session 2021-22 of class 10th & 12th to be divided into 2 terms with approx 50% syllabus in each term. Syllabus for Board examination 2021-22 will be rationalized similar to that of last academic session to be notified in July 2021: Central Board of Secondary Education pic.twitter.com/8vyfPUhWX7
— ANI (@ANI) July 5, 2021 " class="align-text-top noRightClick twitterSection" data="
">Academic session 2021-22 of class 10th & 12th to be divided into 2 terms with approx 50% syllabus in each term. Syllabus for Board examination 2021-22 will be rationalized similar to that of last academic session to be notified in July 2021: Central Board of Secondary Education pic.twitter.com/8vyfPUhWX7
— ANI (@ANI) July 5, 2021Academic session 2021-22 of class 10th & 12th to be divided into 2 terms with approx 50% syllabus in each term. Syllabus for Board examination 2021-22 will be rationalized similar to that of last academic session to be notified in July 2021: Central Board of Secondary Education pic.twitter.com/8vyfPUhWX7
— ANI (@ANI) July 5, 2021
ಪರೀಕ್ಷಾ ವಿಧಾನಕೂಡ ಇದೇ ರೀತಿಯಲ್ಲಿ ಇರಲಿದ್ದು, ಆಂತರಿಕ ಮೌಲ್ಯಮಾಪನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮೊದಲ ಹಂತದ ಪರೀಕ್ಷೆಗಳು ನವೆಂಬರ್-ಡಿಸೆಂಬರ್ನಲ್ಲಿ ನಡೆಯಲಿದ್ದು, ಎರಡನೇ ಹಂತದ ಪರೀಕ್ಷೆಗಳು ಮಾರ್ಚ್-ಏಪ್ರಿಲ್ ತಿಂಗಳಲ್ಲಿ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.
ಇದನ್ನೂ ಓದಿರಿ: ಪಡಿಕ್ಕಲ್, ಪೃಥ್ವಿ ಶಾಗೆ ಇಂಗ್ಲೆಂಡ್ಗೆ ಕಳುಹಿಸಲು ಆಯ್ಕೆ ಸಮಿತಿ ಹಿಂದೇಟು?
ದೇಶದಲ್ಲಿ ಕೊರೊನಾ ವೈರಸ್ ಅಲೆ ಹೆಚ್ಚಾಗಿದ್ದ ಕಾರಣ 12ನೇ ತರಗತಿ ಪರೀಕ್ಷೆ ರದ್ದು ಮಾಡಿ ಮಹತ್ವದ ಆದೇಶ ಹೊರಡಿಸಲಾಗಿತ್ತು. ಇದರ ಬೆನ್ನಲ್ಲೇ ಮುಂದಿನ ವರ್ಷದ ಪರೀಕ್ಷೆಗೋಸ್ಕರ ಮಹತ್ವದ ಘೋಷಣೆ ಮಾಡಿದೆ.