ನವದೆಹಲಿ: ವಕ್ಫ್ಗೆ ಸೇರಿದ್ದ ಆಸ್ತಿಗಳ ಅಕ್ರಮ ಮಾರಾಟ ಮತ್ತು ಖರೀದಿ ಮಾಡಿರುವ ಆರೋಪದಡಿ ಉತ್ತರಪ್ರದೇಶದ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಮ್ ರಿಜ್ವಿ ವಿರುದ್ಧ ಸಿಬಿಐ ತನಿಖೆ ಆರಂಭಿಸಿದೆ.
ಇಲ್ಲಿನ ಅಲಹಾಬಾದ್ ಹಾಗೂ ಕಾನ್ಪುರದಲ್ಲಿ ವಕ್ಫ್ ಮಂಡಳಿ ಆಸ್ತಿಯನ್ನು ಅಕ್ರಮವಾಗಿ ಖರೀದಿ ಹಾಗೂ ಮಾರಾಟ ಮಾಡಲಾಗಿದೆ ಎಂದು ರಿಜ್ವಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣ ಸಂಬಂಧ ರಿಜ್ವಿ ಹಾಗೂ ಇತರರ ವಿರುದ್ಧ ರಾಜ್ಯ ಸರ್ಕಾರ 2016ರಲ್ಲಿ ಅಲಹಾಬಾದ್ನಲ್ಲಿ ಹಾಗೂ 2017ರಲ್ಲಿ ಲಖನೌನಲ್ಲಿ ದಾಖಲಾದ ಎರಡು ಎಫ್ಐಆರ್ಗಳನ್ನು ಉಲ್ಲೇಖಿಸಿದೆ. ಈ ಕುರಿತು ಪ್ರಕರಣವನ್ನು ಕೈಗೆತ್ತಿಕೊಳ್ಳಲು ಕೇಂದ್ರವು ಬುಧವಾರ ಸಿಬಿಐಗೆ ಅನುಮತಿ ನೀಡಿದೆ.
ಇದರಲ್ಲಿ 2016ರ ಅಲಹಾಬಾದ್ ಪ್ರಕರಣವು ಇಮಾಂಬರಾ ಗುಲಾಮ್ ಹೈದರ್ನಲ್ಲಿ ಅಕ್ರಮವಾಗಿ ಅಂಗಡಿಗಳನ್ನು ನಿರ್ಮಿಸಿದ್ದ ಕುರಿತದ್ದಾಗಿದೆ. ಇದಲ್ಲದೆ 2009ರ ಲಖನೌ ಪ್ರಕರಣವು ಕಾನ್ಪುರದ ಸ್ವರೂಪ್ ನಗರದಲ್ಲಿ ಭೂ ಕಬಳಿಕೆ ಆರೋಪಕ್ಕೆ ಸಂಬಂಧಿಸಿದ್ದಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.