ETV Bharat / bharat

ಗುತ್ತಿಗೆದಾರರಿಂದ ಲಂಚ ಪಡೆದ ಆರೋಪ.. ಬೆಂಗಳೂರು ನೈರುತ್ಯ ರೈಲ್ವೆ ಇಂಜಿನಿಯರ್ ವಿರುದ್ಧ ಕೇಸ್​ - bribery

ಗುತ್ತಿಗೆದಾರರಿಂದ ಲಂಚ ಪಡೆದಿರುವ ಆರೋಪದಡಿ ಬೆಂಗಳೂರು ವಲಯದ ರೈಲ್ವೆ ಇಂಜಿನಿಯರ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ನೈಋತ್ಯ ರೈಲ್ವೆ ಕಾರ್ಯನಿರ್ವಾಹಕ ಇಂಜಿನಿಯರ್ ಘನ್ ಶ್ಯಾಮ್ ಪ್ರಧಾನ್ ವಿರುದ್ಧ ಪ್ರಕರಣ ದಾಖಲಾಗಿದೆ.

cbi-registers-case-against-south-western-railway-executive-engineer-two-contractors
ಬೆಂಗಳೂರು ವಲಯ ನೈರುತ್ಯ ರೈಲ್ವೆ ಇಂಜಿನಿಯರ್ ವಿರುದ್ಧ ಪ್ರಕರಣ ದಾಖಲು
author img

By

Published : Nov 2, 2021, 6:56 AM IST

ನವದೆಹಲಿ/ಬೆಂಗಳೂರು: ಇಬ್ಬರು ಗುತ್ತಿಗೆದಾರರಿಂದ 1.29 ಕೋಟಿ ರೂಪಾಯಿ ಲಂಚ ಸ್ವೀಕರಿಸಿದ ಆರೋಪದಡಿ ನೈಋತ್ಯ ರೈಲ್ವೆ ಕಾರ್ಯನಿರ್ವಾಹಕ ಇಂಜಿನಿಯರ್ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಕರಣವನ್ನು ದಾಖಲಿಸಿದೆ.

ಚಾರ್ಜ್ ಶೀಟ್​​ನಲ್ಲಿ ಸೌತ್ ವೆಸ್ಟರ್ನ್ ರೈಲ್ವೆ ಬೆಂಗಳೂರಿನ ಎಕ್ಸಿಕ್ಯೂಟಿವ್ ಇಂಜಿನಿಯರ್ ಘನ್ ಶ್ಯಾಮ್ ಪ್ರಧಾನ್ ಮತ್ತು ಇಬ್ಬರು ಗುತ್ತಿಗೆದಾರರನ್ನು ಹೆಸರಿಸಲಾಗಿದೆ.

ಸಿಬಿಐ ಪ್ರಕಾರ, ಗುತ್ತಿಗೆದಾರರು ನಿರ್ವಹಿಸುವ ಕೆಲಸಗಳ ನಿರ್ವಹಣೆ ಮತ್ತು ಮೇಲ್ವಿಚಾರಣೆಗಾಗಿ ಕಾರ್ಯನಿರ್ವಾಹಕ ಇಂಜಿನಿಯರ್ ಲಂಚವನ್ನು ಸ್ವೀಕರಿಸಿದ್ದಾರೆ. ತನಿಖೆಯ ಭಾಗವಾಗಿ ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಮಹಾರಾಷ್ಟ್ರದ ಸಾಂಗ್ಲಿ, ನಂದ್ಯಾಲ ಮತ್ತು ತೆಲಂಗಾಣದ ರಂಗಾರೆಡ್ಡಿ ಸೇರಿದಂತೆ 16 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿದೆ. ಆರೋಪಿಗಳಿಂದ ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಅಯ್ಯೋ ದುರ್ವಿಧಿಯೇ.. ಮದುವೆಯಾಗಿ ಮೂರೇ ದಿನಕ್ಕೆ ಮಸಣ ಸೇರಿದ ನವದಂಪತಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.