ETV Bharat / bharat

ಐಸಿಐಸಿಐ ಅಕ್ರಮ: ಕೊಚ್ಚಾರ್​ ದಂಪತಿ ಬಳಿಕ ವಿಡಿಯೋಕಾನ್​ ಮುಖ್ಯಸ್ಥ ವೇಣುಗೋಪಾಲ್​ ಧೂತ್ ಬಂಧನ

ಐಸಿಐಸಿಐ ಬ್ಯಾಂಕ್​ನಿಂದ ಅಕ್ರಮ ಸಾಲ ಮಂಜೂರಾತಿ- ವಿಡಿಯೋಕಾನ್​​ ಗ್ರೂಪ್ ಮುಖ್ಯಸ್ಥ ವೇಣುಗೋಪಾಲ್​ ಧೂತ್ ಬಂಧನ

cbi-arrests-videocon-chairman-venugopal
ವಿಡಿಯೋಕಾನ್​ ಮುಖ್ಯಸ್ಥ ವೇಣುಗೋಪಾಲ್​ ಧೂತ್ ಬಂಧನ
author img

By

Published : Dec 26, 2022, 12:20 PM IST

Updated : Dec 26, 2022, 2:23 PM IST

ನವದೆಹಲಿ: ವಿಡಿಯೋಕಾನ್​​ ಗ್ರೂಪ್ ಕಂಪನಿ ಮತ್ತು ಐಸಿಐಸಿಐ ಬ್ಯಾಂಕ್ ನಡುವಿನ ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣದಲ್ಲಿ ಕಂಪನಿಯ ಮುಖ್ಯಸ್ಥ ವೇಣುಗೋಪಾಲ್​ ಧೂತ್​ರನ್ನು ಕೇಂದ್ರ ತನಿಖಾ ದಳ(ಸಿಬಿಐ) ಇಂದು ಬಂಧಿಸಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ವಿಡಿಯೋಕಾನ್ ಅಧ್ಯಕ್ಷ ವೇಣುಗೋಪಾಲ್ ಧೂತ್​ರನ್ನು ಸಿಬಿಐ ಕೆಲ ದಿನಗಳ ಹಿಂದೆ ವಿಚಾರಣೆಗೆ ನಡೆಸಿತ್ತು. ಇಂದು ಅವರನ್ನು ಮುಂಬೈನಲ್ಲಿ ಬಂಧಿಸಲಾಗಿದೆ. ಪ್ರಕರಣ ಹೆಚ್ಚಿನ ವಿಚಾರಣೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊನ್ನೆ ಕೊಚ್ಚಾರ್ ದಂಪತಿ ಬಂಧಿಸಿದ್ದ ಸಿಬಿಐ: ಇದಕ್ಕೂ ಮೊದಲು ಡಿಸೆಂಬರ್​ 23 ರಂದು ಐಸಿಐಸಿಐ ಬ್ಯಾಂಕ್​ನ ಮಾಜಿ ಎಂಡಿ ಚಂದಾ ಕೊಚ್ಚಾರ್​ ಮತ್ತು ಪತಿ ದೀಪಕ್ ಕೊಚ್ಚಾರ್ ದಂಪತಿಯನ್ನು ಮೂರು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಲಾಗಿದೆ.

ಮುಂಬೈನಲ್ಲಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಕೊಚ್ಚಾರ್​ ದಂಪತಿಯನ್ನು ಸಿಬಿಐ ಅಧಿಕಾರಿಗಳು ಹಾಜರುಪಡಿಸಿ, ತಮ್ಮ ಕಸ್ಟಡಿಗೆ ಪಡೆದಿದ್ದರು. ಸಿಬಿಐ ದಾಖಲಿಸಿದ ಎಫ್​ಐಆರ್​ನಲ್ಲಿ​ ಚಂದಾ ಕೊಚ್ಚಾರ್​ 4ನೇ ಆರೋಪಿ ಮತ್ತು ಪತಿ ದೀಪಕ್​ ಐದನೇ ಆರೋಪಿಯಾಗಿದ್ದಾರೆ. 4ನೇ ಆರೋಪಿ ಚಂದಾ ಅವರು 2009 ರಲ್ಲಿ ಐಸಿಐಸಿಐನ ಎಂಡಿ ಮತ್ತು ಸಿಇಒ ಆಗಿದ್ದರು.

ಚಂದಾ ಕೊಚ್ಚಾರ್ ಬ್ಯಾಂಕಿನ ಎಂಡಿ ಮತ್ತು ಸಿಇಒ ಆದ ನಂತರ ವೀಡಿಯೊಕಾನ್ ಮತ್ತು ಅದರ ಅಂಗಸಂಸ್ಥೆ ಕಂಪನಿಗಳಿಗೆ ಆರು ಸಾಲಗಳನ್ನು ಮಂಜೂರು ಮಾಡಲಾಗಿದ್ದು, ಎರಡು ಸಾಲಗಳನ್ನು ಮಂಜೂರು ಮಾಡಿದ ಸಮಿತಿಗಳಲ್ಲಿ ಚಂದಾ ಭಾಗವಾಗಿದ್ದರು. ಇದರಲ್ಲಿ 1,800 ಕೋಟಿ ರೂಪಾಯಿ ಸಾಲದ ಮೊತ್ತವನ್ನು ಕಂಪನಿಗೆ ನೀಡಲಾಗಿದೆ. ಜೊತೆಗೆ ದೀಪಕ್ ಕೊಚ್ಚರ್ ಭಾಗವಗಿರುವ ಕಂಪನಿಗೆ 300 ಕೋಟಿ ರೂಪಾಯಿ ಮೊತ್ತದ ಮತ್ತೊಂದು ಸಾಲವನ್ನು ನೀಡಲಾಗಿದೆ ಎಂದು ಉಲ್ಲೇಖಿಸಿದರು.

ಈ ಸಂಬಂಧ ಸಿಆರ್​ಪಿಸಿ ಸೆಕ್ಷನ್ 41ರ ಅಡಿಯಲ್ಲಿ ಇಬ್ಬರೂ ಆರೋಪಿಗಳಿಗೆ ವಿಚಾರಣೆಗೆ ಹಜಾರಾಗುವಂತೆ ನೋಟಿಸ್ ನೀಡಿದ್ದೇವೆ. ಡಿಸೆಂಬರ್ 15ರಂದು ದಂಪತಿಗೆ ಹಾಜರಾಗುವಂತೆ ನೋಟಿಸ್ ಕೊಡಲಾಗಿತ್ತು. ಆಗ ನಾಲ್ಕು ದಿನಗಳ ನಂತರ ಹಾಜರಾಗುವುದಾಗಿ ಹೇಳಿದ್ದರು. ಆದರೂ, ಹಾಜರಾಗಿರಲಿಲ್ಲ. ನಿನ್ನೆ (ಡಿಸೆಂಬರ್ 23) ವಿಚಾರಣೆಗೆ ಬಂದಿದ್ದರೂ, ಅಸಹಕಾರದ ಕಾರಣ ಅವರನ್ನು ಬಂಧಿಸಲಾಗಿದೆ.

ಇತ್ತ, ಕೊಚ್ಚಾರ್‌ ದಂಪತಿಯ ಪರ ವಕೀಲ ಅಮಿತ್ ದೇಸಾಯಿ ವಾದ ಮಂಡಿಸಿ, ದಾಖಲಾದ ಎಫ್‌ಐಆರ್‌ನಲ್ಲಿ ವಿಡಿಯೋಕಾನ್ ಗ್ರೂಪ್‌ನ ಕೈಗಾರಿಕೋದ್ಯಮಿ ವೇಣುಗೋಪಾಲ್ ಧೂತ್ ಹೆಸರು ಕೂಡ ಇದೆ. ಇತ್ತ, ಎಫ್‌ಐಆರ್ ದಾಖಲಾಗಿ ವರ್ಷಗಳೇ ಕಳೆದರೂ ಕೊಚ್ಚರ್‌ ದಂಪತಿಯನ್ನು ತನಿಖೆಗೆ ಹಾಜರಾಗುವಂತೆ ಕರೆದಿರಲಿಲ್ಲ. ಇದ್ದಕ್ಕಿದ್ದಂತೆ ಡಿಸೆಂಬರ್ 15ಕ್ಕೆ ನೋಟಿಸ್ ಕಳುಹಿಸಿದೆ. ಅಲ್ಲದೇ, 2019ರ ಜನವರಿಯವರೆಗೆ ತನಿಖೆ ಅಗತ್ಯವೇ ಇರಲಿಲ್ಲ. ಈಗ ಅವರನ್ನು ಏಕೆ ಬಂಧಿಸಲಾಗಿದೆ ಎಂದು ಕೊಚ್ಚಾರ್​ ದಂಪತಿ ಪರ ವಕೀಲರು ವಾದ ಮಂಡಿಸಿದರು.

ಏನಿದು ಪ್ರಕರಣ?: ವಿಡಿಯೋಕಾನ್ ಗ್ರೂಪ್‌ನ ವೇಣುಗೋಪಾಲ್ ಧೂತ್ ಅವರಿಗೆ ಅನಧಿಕೃತವಾಗಿ ಸಾಲ ನೀಡಿದ ಆರೋಪ ಚಂದಾ ಕೊಚ್ಚಾರ್​ ಮೇಲಿದೆ. ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಹಾಗೂ ಆರ್‌ಬಿಐ ಮಾರ್ಗಸೂಚಿಗಳು ಮತ್ತು ಬ್ಯಾಂಕಿನ ಸಾಲ ನೀತಿಯನ್ನು ಉಲ್ಲಂಘಿಸಿ ವಿಡಿಯೋಕಾನ್ ಗ್ರೂಪ್‌ನ ಕಂಪನಿಗಳಿಗೆ ಐಸಿಐಸಿಐ ಬ್ಯಾಂಕ್ 3,250 ಕೋಟಿ ರೂಪಾಯಿಗಳ ಸಾಲ ಸೌಲಭ್ಯಗಳನ್ನು ಮಂಜೂರು ಮಾಡಿದ ಆರೋಪ ಕೊಚ್ಚಾರ್​ ಎದುರಿಸುತ್ತಿದ್ದಾರೆ.

ಐಸಿಐಸಿಐ ಬ್ಯಾಂಕ್‌ನಲ್ಲಿ ಚಂದಾ ಕೊಚ್ಚಾರ್ ಅವರ ಅಧಿಕಾರಾವಧಿಯಲ್ಲಿ ಅಂದರೆ 2009-11ರ ಅವಧಿಯಲ್ಲಿ ವಿಡಿಯೋಕಾನ್ ಗ್ರೂಪ್ ಮತ್ತು ಅದರ ಸಂಬಂಧಿತ ಕಂಪನಿಗಳಿಗೆ 1,875 ಕೋಟಿ ರೂಪಾಯಿ ಮೌಲ್ಯದ ಆರು ಸಾಲಗಳನ್ನು ತೆರವುಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಾಲಗಳಲ್ಲಿ ಹೆಚ್ಚಿನವು ಅನುತ್ಪಾದಕ ಆಸ್ತಿಗಳಾಗಿ ಮಾರ್ಪಟ್ಟಿವೆ. ಇದರಿಂದಾಗಿ ಬ್ಯಾಂಕ್‌ಗೆ 1,730 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಸಿಬಿಐ ಆರೋಪಿಸಿದೆ. ಮೇ 1, 2009 ರಂದು, ಚಂದಾ ಕೊಚ್ಚರ್ ICICI ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು CEO ಆಗಿ ಅಧಿಕಾರ ವಹಿಸಿಕೊಂಡಿದ್ದರು.

ಓದಿ: ವಿಡಿಯೋಕಾನ್​​ ಕಂಪನಿ ಸಾಲ ಪ್ರಕರಣ: ಸಿಬಿಐ ಕಸ್ಟಡಿಗೆ ಐಸಿಐಸಿಐ ಬ್ಯಾಂಕ್​ನ ಮಾಜಿ ಎಂಡಿ ಚಂದಾ ಕೊಚ್ಚಾರ್​ ದಂಪತಿ

Last Updated : Dec 26, 2022, 2:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.